ಕಲಬುರಗಿ: ಸಂವಿಧಾನದಿಂದಲೆ ಇಂದು ದೇಶದಲ್ಲಿ ಗಂಡು-ಹೆಣ್ಣು ಎಂಬ ಬೇಧವಿಲ್ಲದೆ ಸರ್ವರಿಗೂ ಸಮಾನತೆ ಸಿಕ್ಕಿದೆ ಎಂದು ಕಾಳಗಿ ತಾಲೂಕ ಪಂಚಾಯತ್ ಇ.ಓ. ವಿಲಾಸ್ ರಾಜ್ ತಿಳಿಸಿದರು.
ಶನಿವಾರ ಕಾಳಗಿ ತಾಲೂಕಿನ ಮಾಡಬೂಳ ಗ್ರಾಮ ಪಂಚಾಯತಿ ಕಚೇರಿ ಅವರಣದಲ್ಲಿ ನಡೆದ ಸಮವಿಧಾನ ಜಾಗೃತಿ ಜಾಥಾ ಅಂಗವಾಗಿ ಸಾರ್ವಜನಿಕ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನ ರಚನೆ ಮುನ್ನ ಮುಹಿಳೆಯರಿಗೆ ಮತದಾನದ ಹಕ್ಕು ಇರಲಿಲ್ಲ. ಸಂವಿಧಾನದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ ಅವರು ದೇಶದ ಪ್ರತಿ ಪ್ರಜೆಗೂ ಲಿಂಗ ಬೇಧವಿಲ್ಲದೆ ಮತದ ಹಕ್ಕು ನೀಡಿದ್ದಾರೆ. ಪರಿಣಾಮ ದೇಶದ ಸಾಮಾನ್ಯ ಮಹಿಳೆಯು ಪ್ರಧಾನಮಂತ್ರಿ, ರಾಷ್ಟ್ರಪತಿ ದಂತಹ ಉನ್ನತ ಹುದ್ದೇಗೇರಿದ ಅನೇಕ ಉದಾಹರಣೆಗಳಿವೆ. ಇಂತಹ ಪ್ರಜಾ ಸ್ನೇಹಿ ಸಂವಿಧಾನದ ಮೂಲ ಆಶಯಗಳು ಪ್ರತಿಯೊಬ್ಬರು ಅರಿಯಬೇಕಿದೆ ಎಂದ ಅವರು ಇದಕ್ಕಾಗಿಯೇ ಸರ್ಕಾರ ಈ ಜಾಗೃತಿ ಜಾಥಾ ಹಮ್ಮಿಕೊಂಡಿದೆ ಎಂದರು.
ಗ್ರಾಮ ಪಂಚಾಯತ್ ಅಧ್ಯಕ್ಷ ದತ್ತು ಕುಮಾರ್, ಸದಸ್ಯರಾದ ಅರುಣ ಕುಮಾರ, ಶರಣ ಜಡ್ಗಿ, ಮೋಹನ್ ಚವ್ಹಾನ್, ಗಜಾನಂದ, ಈರಗಪ್ಪ, ಪ್ರತಾಪ ಸಿಂಗ್, ಪಿ.ಡಿ.ಓ ಬಾಬು ಸಣಕಲ್, ಶಿಕ್ಷಕಿ ಅಕ್ಷತಾ, ನರೇಗಾ ತಾಲೂಕು ಸಂಯೋಜಕಿ ಜ್ಯೋತಿ ಸಾಗರ್, ಅನಿಲ್ ಸೇರಿದಂತೆ ಶಾಲಾ ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಸ್ವಸಹಾಯ ಸಂಘದ ಮಹಿಳೆಯರು ಭಾಗವಹಿಸಿದ್ದರು.
ಇದಕ್ಕು ಮುನ್ನ ಪೇಠಶಿರೂರ, ನಂತರ ಕೋರವಾರ, ಗೋಟೂರ, ಕಾಳಗಿಯಲ್ಲಿಯೂ ಜಾಗೃತಿ ಜಾಥಾ ಸಂಚರಿಸಿತು.
ಜೇವರ್ಗಿಗೆ ಜಾಗೃತಿ ಜಾಥಾ ಪ್ರವೇಶ:ತಾಲೂಕಿನ ಅಮಕಲಗಾ ಗ್ರಾಮದ ಮೂಲಕ ಸಂವಿಧಾನ ಜಾಗೃತಿ ಜಾಥಾ ಶನಿವಾರ ಜೇವರ್ಗಿ ತಾಲೂಕಿಗೆ ಪ್ರವೇಶಿಸಿದೆ. ತದನಂತರ ತಾಲೂಕಿನ ಹುಲ್ಲೂರ, ಜೇರಟಗಿ, ರಮಜಣಗಿ, ಬಳ್ಳೂಂಡಗಿ ಗ್ರಾಮದಲ್ಲಿ ಸಂಚರಿಸಿ ಸಂವಿಧಾನ ಕುರಿತು ಅರಿವು ಮೂಡಿಸಲಾಯಿತು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…