ಬಿಸಿ ಬಿಸಿ ಸುದ್ದಿ

ವಸತಿ ನಿಲಯಗಳಲ್ಲಿ ಮೊಳಗಿದ ಸಂವಿಧಾನ ಪ್ರಸ್ತಾವನೆ ಓದಿನ ಝೇಂಕಾರ

ಕಲಬುರಗಿ: ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ಭಾನುವಾರ ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಸತಿ ನಿಲಯಗಳಲ್ಲಿ ಸಂವಿಧಾನ ಪ್ರಸ್ತಾವನೆ ಓದಿನ ಝೇಂಕಾರ ಮೊಳಗಿತು.

ಸಂವಿಧಾನ ಅಂಗೀಕಾರಗೊಂಡು 75 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಈಗಾಗಲೇ ಎರಡು ಸ್ತಬ್ಧಚಿತ್ರ ವಾಹನಗಳು ವಿವಿಧ ಹಳ್ಳಿ ಪಟ್ಟಣದಲ್ಲಿ ಸಂಚರಿಸುತ್ತಾ ಸಂವಿಧಾನದ ಕುರಿತು ಜಾಗೃತಿ ಮೂಡಿಸುತ್ತಿದ್ದು, ಇತ್ತ ವಸತಿ ನಿಲಯದ ಮಕ್ಕಳಲ್ಲಿಯೂ ಸಹ ಸಂವಿಧಾನ ಕುರಿತು ತಿಳುವಳಿಕೆಗೆ ವಿವಿಧ ಚಟುವಟಿಕೆಯ ಕಾರ್ಯಾಗಾರ ಇಂದಿಲ್ಲಿ ಆಯೋಜಿಸಲಾಗಿತ್ತು.

ಕಲಬುರಗಿ ನಗರದ ಸೇಡಂ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮಹಿಳಾ ವಸತಿ ನಿಲಯಗಳ (4ಡಿ) ಸಂಕೀರ್ಣದಲ್ಲಿ ಆಯೋಜಿಸಿದ ಒಂದು ದಿನದ ಕಾರ್ಯಾಗಾರವನ್ನು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮತ್ತು ಸಂವಿಧಾನ ಪೀಠಿಕೆಗೆ ಪೂಜೆ ಸಲ್ಲಿಸುವ ಮೂಲಕ ಆರಂಭಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗುಲಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಡಾ.ವಿ.ಟಿ.ಕಾಂಬಳೆ, ಜ್ಞಾನಜ್ಯೋತಿ ಕೆರಿಯರ್ ಅಕಾಡೆಮಿಯ ಅಧ್ಯಕ್ಷ ಎನ್.ಎಸ್.ಹಿರೇಮಠ ಹಾಗೂ ನ್ಯಾಯವಾದಿ ಸಾರಿಪುತ್ರ ಹೊಸಮನಿ ಅವರು ಸಂವಿಧಾನ ಕುರಿತು ಉಪನ್ಯಾಸ ನೀಡಿದರು. ನಂತರ ನಿಲಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಇದೇ ಸಂದರ್ಭದಲ್ಲಿ ವಸತಿ ನಿಲಯದ ಮಕ್ಕಳು ಸಾಮೂಹಿಕವಾಗಿ ಸಂವಿಧಾನ ಪೀಠಿಕೆಯನ್ನು ವಾಚನ ಮಾಡಿದರು.

ರಂಗೋಲಿಯಲ್ಲಿ ಅರಳಿದ ಅಂಬೇಡ್ಕರ: ವಸತಿ ನಿಲಯದ ಮಕ್ಕಳು ನಿಲಯದ ನೆಲ ಹಾಸಿಗೆ ಮೇಲೆ ಬಣ್ಣ ಬಣ್ಣದ ರಂಗೋಲಿ ಬಿಡಿಸಿದರು. ಬಣ್ಣ-ಬಣ್ಣದ ರಂಗೋಲಿಯಲ್ಲಿ ಅಂಬೇಡ್ಕರ, ರಮಾಬಾಯಿ, ಸಂವಿಧಾನ ಪೀಠಿಕೆ ಚಿತ್ರ ಅನಾವರಣಗೊಂಡವು. ವಸತಿ ನಿಲಯದ ಮೇಲ್ವಿಚಾರಕರಾದ ಲಕ್ಷ್ಮೀ ಕೋರೆ, ಶಶಿಕಲಾ ಪೂಜಾರಿ, ಗಂಗಮ್ಮ ಬಂಡೆನವರು, ಸೈದಾ ಬೇಗಂ ಭಾಗವಾನ್ ಸೇರಿದಂತೆ ಸುಮಾರು 1200 ಮಕ್ಕಳು ಭಾಗವಹಿಸಿದ್ದರು.

ಕಲಬುರಗಿ ನಗರದ ರಾಜಾಪುರ ರಸ್ತೆಯ 6ಡಿ ಬಾಲಕರ ವಸತಿ ನಿಲಯ ಸಂಕೀರ್ಣ, ನಂ-5 ಬಾಲಕೀಯರ ವಸತಿ ನಿಲಯ, ವಿದ್ಯಾನಗರ ಬಾಲಕೀಯರ ವಸತಿ ನಿಲಯ, ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ ಕಲಬುರಗಿ ಟೌನ್, ಇಂಜಿನೀಯರಿಂಗ್ ಬಾಲಕರ ವಸತಿ ನಿಲಯ, ಅಫಜಲಪೂರ ತಾಲೂಕಿನ ಮಣ್ಣೂರ ಬಾಲಕರ ಪೋಸ್ಟ್ ಮೆಟ್ರಿಕ್, ಘತ್ತರಗಾ ಪ್ರೀ ಮೆಟ್ರಿಕ್, ಆಳಂದ ಪಟ್ಟಣದ ಬಾಲಕೀಯರ ಪ್ರಿ ಮತ್ತು ಪೋಸ್ಟ್ ಮೆಟ್ರಿಕ್, ತಾಲೂಕಿನ ಕಡಗಂಚಿ, ಕಮಲನಗರ ವಸತಿ ನಿಲಯ, ಚಿತ್ತಾಪುರ ತಾಲೂಕಿನ ಗುಂಡಗುರ್ತಿ, ಭಂಕೂರ, ವಾಡಿ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಅಂಬೇಡ್ಕರ ವಸತಿ ಶಾಲೆ, ಚಿಂಚೋಳಿ ತಾಲೂಕಿನ‌ ಕುಂಚಾವರಂ ಹೀಗೆ ಎಲ್ಲೆಡೆ ಕಾರ್ಯಾಗಾರ ಅರ್ಥಪೂರ್ಣವಾಗಿ ನಡೆಯಿತು. ರಾಷ್ಟ್ರ ನಾಯಕರ ವೇಶ ಧರಿಸಿ ಮಕ್ಕಳು ಗಮನ‌ ಸೆಳೆದರು.

300ಕ್ಕೂ ಹೆಚ್ಚು ವಸತಿ ನಿಲಯದಲ್ಲಿ ಕಾರ್ಯಾಗಾರ: ಜಿಲ್ಲೆಯಾದ್ಯಂತ ಭಾನುವಾರ ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧೀನದ ಸುಮಾರು 300 ಕ್ಕೂ ಹೆಚ್ಚು ಮೆಟ್ರಿಕ್ ಪೂರ್ವ-ಮೆಟ್ರಿಕ ನಂತರ ವಸತಿ ನಿಲಯ, ವಸತಿ ಶಾಲೆಯಲ್ಲಿ ನಡೆದ ಸಂವಿಧಾನ ಕುರಿತು ಕಾರ್ಯಾಗಾರದಲ್ಲಿ ಪೀಠಿಕೆ ವಾಚನ, ಉಪನ್ಯಾಸ, ಚಿತ್ರಕಲೆ, ರಂಗೋಲಿ, ಭಾಷಣ ಸ್ಪರ್ಧೆಯಲ್ಲಿ ಮಕ್ಕಳು ಸಕ್ರಿಯವಾಗಿ ಭಾಗವಹಿಸಿದ್ದರು ಎಂದು ಸಮಾಜ ಕಲ್ಯಾಣ ಇಲಾಖೆಯ ಪ್ರಭಾರಿ ಜಂಟಿ ನಿರ್ದೇಶಕ ಜಾವೀದ್ ತಿಳಿಸಿದ್ದಾರೆ.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

9 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

9 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

10 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago