ಬಿಸಿ ಬಿಸಿ ಸುದ್ದಿ

ಸುರಪುರ :ಶ್ರದ್ಧಾ ಭಕ್ತಿಯಿಂದ ಮಧ್ವ ನವಮಿ ಆಚರಣೆ

ಸುರಪುರ: ನಗರದ ಪಂಚಮುಖಿ ಹನುಮಾನ ದೇವಸ್ಥಾನದಲ್ಲಿ ಮಧ್ವ ನವಮಿ ಉತ್ಸವವನ್ನು ಭಕ್ತಿ ಶ್ರದ್ಧೆಗಳಿಂದ ಆಚರಿಸಲಾಯಿತು,ಬೆಳಿಗ್ಗೆ ಶ್ರೀಮನ್ ಮಧ್ವಾಚಾರ್ಯರ ಭಾವಚಿತ್ರವಿಟ್ಟು ಭಜನೆಯೊಂದಿಗೆ ಪಲ್ಲಕ್ಕಿ ಮೆರವಣಿಗೆ ಜರುಗಿತು, ನಂತರ ನಾರಾಯಣಾಚಾರ್ಯ ಐಜಿ ಪೌರೋಹಿತ್ಯದಲ್ಲಿ ಪವಮಾನ ಹೋಮ ನಡೆಯಿತು.

ವಿಶ್ವ ಮಧ್ವ ಮಹಾ ಪರಿಷತ್ ಸದಸ್ಯರಿಂದ ಪಾರಾಯಣ ಹಾಗೂ ರಘುವೀರರಾಮಧ್ಯಾನತೀರ್ಥ ಮಹಿಳಾ ಭಜನಾ ಮಂಡಳಿಯವರಿಂದ ಭಜನೆ ನಡೆದವು ನಂತರ ಹನುಮಂತದೇವರಿಗೆ ವಿಶೇಷ ಅಲಂಕಾರ ನೈವೇದ್ಯ ನಂತರ ತೀರ್ಥ ಪ್ರಸಾದ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ಪಂಡಿತರಾದ ನಾರಾಯಣಾಚಾರ್ಯ ಐಜಿ ಅವರು ಮಧ್ವ ನವಮಿ ಕುರಿತು ಮಾತನಾಡಿ ದ್ವೈತ ಸಿದ್ದಾಂತ ಪ್ರತಿಪಾದಕರಾದ ಮಧ್ವಾಚಾರ್ಯರು ಬದರಿಕಾಶ್ರಮವನ್ನು ಪ್ರವೇಶಿಸಿದ ಪುಣ್ಯದಿನವನ್ನು ಮಧ್ವ ನವಮಿಯನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಮೊದಲು ತ್ರೇತಾಯುಗದಲ್ಲಿ ಹನುಮಂತನಾಗಿ, ರಾಮ ಭಂಟನೆನಿಸಿ ನಂತರ ದ್ವಾಪರ ಯುಗದಲ್ಲಿ ಭೀಮಸೇನ ದೇವರಾಗಿ ಈ ಕಲಿಯುಗದಿ ಪೂರ್ಣಪ್ರಜ್ಞರೆನಿಸಿ ವೇದವ್ಯಾಸರ ಸೇವೆ ಮಾಡಿ ಭಗವತ್ಕಾರ್ಯ ಸಾಧನೆಗಳನ್ನು ಮಾಡಿದವರು ಮಧ್ವಚಾರ್ಯರು ಎಂದು ಹೇಳಿದರು.

ಮಧ್ವಚಾರ್ಯರು 37 ಗ್ರಂಥಗಳು ಸರ್ವಮೂಲಕ ಗ್ರಂಥಗಳೆಂದು ಪ್ರಸಿದ್ಧಿಯಾಗಿವೆ ವೇದ,ಉಪನಿಷತ್,ಸೂತ್ರ ಇತಿಹಾಸ,ಪುರಾಣ,ತಂತ್ರ ಮುಂತಾದ ಶಾಸ್ತ್ರದ ಸರ್ವ ಭಾಗಗಳನ್ನು ಉಪಯೋಗಿಸಿಕೊಂಡು ಗ್ರಂಥಗಳನ್ನು ರಚಿಸಿದ್ದಾರೆ ಎಂದು ತಿಳಿಸಿದರು.

ದೇವಸ್ಥಾನದ ಅರ್ಚಕರಾದ ಗುರುರಾಜಾಚಾರ್ಯ ಪಾಲ್ಮೂರ, ಡಾ.ಬಿ.ಆರ್.ಜಹಾಗೀರದಾರ, ರಮೇಶಾಚಾರ್ಯ ನವರತ್ನ, ನಾಗರಾಜ ಮೂಲಿಮನಿ, ಅನಂತಮೂರ್ತಿ ಮೂಲಿಮನಿ, ಸೀತಾರಾಮ ಐಜಿ,ನರಸಿಂಹರಾವ ಬಡಶೇಷಿ, ಮಧುಸೂಧನ ಡಬೀರ,ನರಸಿಂಹರಾವ ಬಾಡಿಯಾಲ,ವಾದಿರಾಜ ಬೂದುರು,ನರಸಿಂಹಾಚಾರ್ಯ ಭಂಡಿ,ಶಶಿಕಾಂತ ಡಬೀರ, ಕೃಷ್ಣಮೂರ್ತಿ ಭಂಡಿ,ರಾಘವೇಂದ್ರ ಭಕ್ರಿ,ಶ್ರೀನಿಧಿ ಐಜಿ,ಶ್ರೀಕರ ಐಜಿ,ಪ್ರಮೋದ ಜೋಷಿ,ಅಭಿಷೇಕ ಕುಲಕರ್ಣಿ ಹಾಗೂ ಮಹಿಳಾ ಭಜನಾ ಮಂಡಳಿಯವರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

4 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

14 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

14 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

14 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago