ಕಲಬುರಗಿ: ನಗರದ ಪಿಎನ್‍ಟಿ ಕಾಲನಿಯ ಪ್ರದೇಶದಲ್ಲಿ ಬಾಯ್ದೆರೆದ ಒಳಚರಂಡಿಯಲ್ಲಿ ಬಿದ್ದು ಮೇಲೆ ಬರಲಾಗದೇ ಆಕಳೊಂದು ಒದ್ದಾಡುತ್ತಿರುವ ಅದನು ಗಮನಿಸಿದ ಪಿಎನ್‍ಟಿ ಕಾಲನಿಯ ನಿವಾಸಿ ಸುಮೀತ್ ನಾಗನಳ್ಳಿ ಅವರು ಗೃಹ ರಕ್ಷಕ ಮತ್ತು ಅಗ್ನಿಶಾಮಕದಳ ಅವರನ್ನು ಕರೆ ಮಾಡಿದ ತಕ್ಷಣ ಗೃಹ ರಕ್ಷಕ ಮತ್ತು ಅಗ್ನಿಶಾಮಕದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಅತ್ಯಂತ ಕ್ಲಿಷ್ಟಕರ ಕಾರ್ಯಾಚರಣೆಯನ್ನು ಕೈಗೊಂಡು ಆಕಳವನ್ನು ಚರಂಡಿಯಿಂದ ಹೊರಗೆ ತೆಗೆಯುವಲ್ಲಿ ಯಶಸ್ವಿಯಾದರು.
ಬಾಯ್ದೆರದ ಚರಂಡಿಯಲ್ಲಿ ಜಾರಿ ಬಿದ್ದು ಆಕಳು ಹೊರಗೆ ಬರಲಾಗದೇ ಚರಂಡಿಯೊಳಗೆ ಒದ್ದಾಡುತ್ತಿತ್ತು. ಅಗ್ನಿಶಾಮಕದಳದ ಸಿಬ್ಬಂದಿಗಳು ವಾಹನದ ಸಮೇತವಾಗಿ ಸ್ಥಳಕ್ಕೆ ಧಾವಿಸಿದರು. ಚರಂಡಿಯೊಳಗೆ ಇಳಿದು ಒಳಗೆ ಸಿಲುಕಿದ್ದ ಆಕಳಿಗೆ ಬೆಲ್ಡ್ ಕಟ್ಟಿ, ಅದನ್ನು ಸುರಕ್ಷಿತವಾಗಿ ಮೇಲೆ ಎತ್ತಿದರು. ಹಲವಾರು ಸಂದರ್ಭದಲ್ಲಿ ಮೇಲಕ್ಕೆತ್ತಲಾಗದೇ ಸಿಬ್ಬಂದಿಗಳು ಸಾಕಷ್ಟು ಪ್ರಯತ್ನಪಟ್ಟು ಸುಸ್ತಾದರು. ಆದಾಗ್ಯೂ, ಪಟ್ಟು ಬಿಡದೇ ಆಕಳವನ್ನು ಮೇಲೆ ಎತ್ತುವಲ್ಲಿ ಯಶಸ್ವಿಯಾದರು. ಆಕಳನ್ನು ರಕ್ಷಿಸಿದ ಕುರಿತು ಸಾರ್ವಜನಿಕರಲ್ಲಿ ಮೆಚ್ಚುಗೆ ವ್ಯಕ್ತವಾಯಿತು.
ಮೇಲಕ್ಕೆತ್ತಿದ ಆಕಳು ಅಲ್ಲಿಂದ ಓಡಿ ಹೋಯಿತು. ಆಗ ಸಿಬ್ಬಂದಿಗಳು ಹಾಗೂ ಅಲ್ಲಿ ನೆರೆದ ಸಾರ್ವಜನಿಕರು ಹರ್ಷೋದ್ವಾರದ ನಗೆಯ ಕೇಕೆ ಹಾಕಿದರು. ಕಾರ್ಯಾಚರಣೆಯಲ್ಲಿ ಹಿರಿಯ ಅಧಿಕಾರಿ ಅಂಕೋಶ್, ಸತೀಶ್, ಶಶಿಧರ್ ಬಡಿಗೇರ, ಪ್ರದೀಪ್ ಕುಮಾರ, ಸುನೀಲಕುಮಾರ, ಬಸವರಾಜ್, ಚಂದ್ರಶೇಖರ್, ರಾವತ್, ಮಂಜುನಾಥ್, ಬಡಾವಣೆಯ ಮುಖಂಡರು ಸೇರಿ ಮುಂತಾದವರು ಪಾಲ್ಗೊಂಡಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…