ಕಲಬುರಗಿ: ಕೃತಿ ಲೋಕಾರ್ಪಣೆ ಮಾಡಿ ಮಾತನಾಡುತ್ತಾ, ಕಥೆಗಳು ದಲಿತರ ಬದುಕಿನ ವಾಸ್ತವಿಕ ಚಿತ್ರಣಗಳು ಮತ್ತು ಕಥಾ ಕಲ್ಪನೆಯ ವಸ್ತು ಅತ್ಯಂತ ದೇಶಿಯ ಚಿಂತನೆಗಳು ಹಿನ್ನೆಲೆಯಲ್ಲಿ ಮೂಡಿ ಬಂದಿವೆ.
ಪ್ರೊ. ಪೋತೆಯವರು ಇಂಗ್ಲೆಂಡಿಗೆ ಹೋದಾಗ ಅಲ್ಲಿ ಕಂಡು ಅನುಭಾವಿಸಿದ ಅನುಭಾವಗಳಿಗೆ ರೂಪಕೊಟ್ಟಿದ್ದಾರೆ. ಇಂತಹ ಕಲ್ಪನೆ ಟಾಲಸ್ವಾಯರವರಿಗೆ ಇತ್ತು ಎಂಬದನ್ನು ಉಲ್ಲೇಖಿಸಿದರು. ಅಂಬೇಡ್ಕರ್ ಪುಸ್ತಕ ಪ್ರೀತಿ ಕೃತಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳು, ಇಡೀ ಸಾಮಾಜಿಕ ಚಳವಳಿ ಕುರಿತಾದ ಅನೇಕ ಲೇಖನಗಳಿವೆ ಜೊತೆಗೆ ಚಂದ್ರ ಪ್ರಸಾದತ್ಯಾಗಿ, ಜಗಜೀವನರಾಂ ಮುಂತಾದವರ ವೈಚಾರಿಕ ಚಿಂತನೆ, ವಿಮರ್ಶಾತ್ಮಕ ವಿಚಾರಗಳು ಕಲಾತ್ಮಕವಾಗಿ ಯುವ ಪೀಳಿಗೆಗೆ ಮುಟ್ಟಿಸುವ ಪ್ರಯತ್ನ ಮಾಡಿದ್ದಾರೆ.
ಪ್ರೊ. ಈಶ್ವರ ಇಂಗನ್‌ರವರ ಕೃತಿಗಳ ಕುರಿತು ಮಾತನಾಡುತ್ತಾ ಅವರ ಬಡತನ ಬದುಕು ಅವರಿಗೆ ಸಾಹಿತ್ಯತ್ಮಕವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಯ್ತು. ಈ ನಾಟಕಗಳ ಪಾತ್ರಗಳು ನಿರೂಪಿಸುವಾಗ ಬುದ್ಧನ ಕಾಲಘಟ್ಟದ ಆಶಯಗಳನ್ನು ಸಮನ್ವಯಗೊಳಿಸುವ ರೀತಿಯಲ್ಲಿ ನಿರೂಪಿಸಿದ್ದಾರೆಂದು ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಚಂದ್ರಕಿರಣ ಕುಳವಾಡಿ ಅವರು ಹೇಳಿದರು. ಡಾ. ಸ್ವಾಮಿರಾವ ಕುಲಕರ್ಣಿ ಅವರು ಸಾಹಿತ್ಯದ ಅಗತ್ಯತೆ ಪ್ರಸ್ತುತ ದಿನಗಳಲ್ಲಿ ಏಕೆ? ಎನ್ನುವದನ್ನು ತಿಳಿಸಿದರು.
ಸಂಧ್ಯಾ ಹೊನಗುಂಟಿಕರ್ ಮತ್ತು ಮಹಿಪಾಲರಡ್ಡಿ ಮುನ್ನೂರು ಅವರ ಕೃತಿಗಳನ್ನು ಒಳಗೊಂಡಿರುವ ಸಾರವನ್ನು ಕುರಿತು ಚಿತ್ರಿಸಿದರು. ಡಾ. ಮಾರುತಿರಾವ್ ಮಾಲೆ ಅವರು ಸಾಹಿತ್ಯ ಮನುಷ್ಯನಿಗೆ ಅವಶ್ಯಕ ಎಂದು ಹೇಳಿದರು. ಪ್ರೊ. ಎಚ್.ಟಿ. ಪೋತೆಯವರು ಅಧ್ಯಕ್ಷೀಯ ಮಾತನಾಡಿದರು. ಪ್ರೊ. ಈಶ್ವರ ಇಂಗನ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಂತಪ್ಪ ಸೂರನ್ ಶಿವಶರಣಪ್ಪ ಅಣವಾರ, ಗವೀಶ್ ಹಿರೇಮಠ ಬಿ.ಎಚ್. ನಿರಗೂಡಿ ಸುಭ್ರವ್ ಕುಲಕರ್ಣಿ, ಶಂಕರಯ್ಯ ಘಂಟಿ, ಡಾ. ಜಗನ್ನಥಾ ಸಿಂಧೆ, ಡಾ. ಶ್ರೀಗುರು ರಾಮಲು, ಡಾ. ಎಚ್.ಎಸ್. ಜಂಗೆ, ಸಿದ್ರಾಮ ಹೊನಕಲ್, ಉಪಸ್ಥಿತಿರಿದ್ದರು. ಡಾ. ಎಂ.ಬಿ. ಕಟ್ಟಿ ಸ್ವಾಗತಿಸಿದರು, ಡಾ. ಸಂತೋಷ ಕಂಬಾರ ನಿರೂಪಿಸಿದರು, ಡಾ. ಸುವರ್ಣಾ ಹಿರೇಮಠ ವಂದಿಸಿದರು, ಕುಮಾರಿ ಸ್ವಾತಿ ಶಂಕರ ಜೋಶಿ ಪ್ರಾರ್ಥನ ಗೀತೆ ಹಾಡಿದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…