ಬಿಸಿ ಬಿಸಿ ಸುದ್ದಿ

ಬಂತೆಜೀ ಭಗವಾನ ಗೌತಮ ಬುದ್ಧರ ಮೂರ್ತಿ ಅನಾವರಣ ಮ್ಮಸಭಾ ಮಂಟಪ ಲೋಕಾರ್ಪಣೆ

ಕಲಬುರಗಿ: ಕಮಲಾಪೂರ ತಾಲೂಕಿನ ಅಂಬಲಗಾ ಗ್ರಾಮದಲ್ಲಿ ದಮ್ಮ ದೀಪ ಬುದ್ಧ ವಿಹಾರದಲ್ಲಿ “ಭಗವಾನ ಗೌತಮ ಬುದ್ಧರ ಮೂರ್ತಿ ಪ್ರತಿಸ್ಥಾಪನೆ ಮತ್ತು ಸಂಬಣ್ಣಾ ಚಂದಪ್ಪಾ ಸಿಂಗೆ ಇವರ ಸ್ಮರಣಾರ್ಥ” ದಮ್ಮ ಸಭಾ ಮಂಟಪ ಲೋಕಾರ್ಪಣೆ ಸಮಾರಂಭ ಹಮ್ಮಿಕೊಳ್ಳಲಾಯಿತು.

ರೇಕುಳಕಿ ಬೌದ್ಧ ವಿಹಾರದ ಬಂತೆಜೀ ಮತ್ತು ಸಿಕಿಂದರಾಬಾದಿಂದ ಬಂದಿರುವ ಬಂತೆಜೀ ಭಗವಾನ ಗೌತಮ ಬುದ್ಧರ ಮೂರ್ತಿ ಅನಾವರಣ ಹಾಗೂ ಶ್ರಿ ಸಂಬಣ್ಣಾ ಚಂದಪ್ಪಾ ಇವರ ಸ್ಮರಣಾರ್ಥ ದಮ್ಮ ಸಭಾ ಮಂಟಪವನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಜಿ. ಸಾಗರ ಉದ್ಘಾಟಿಸಿದರು.

ನಂತರ ಅವರು ಮಾತನಾಡಿದ ಅವರು ಮತ ಧರ್ಮಗಳ ಹೆಸರಿನಲ್ಲಿ ವರ್ಗವರ್ಣಗಳ ನೆಪದಲ್ಲಿ ಅಸಮಾನತೆಯನ್ನು ಮೌಡ್ಯವನ್ನು ಸೃಷ್ಟಿಸಿ, ಪರಂಪರಾಗತವಾದ ಅಪ್ರಗತಿಪರ ಧರ್ಮಗಳು ಇವತ್ತು ಮನುಷ್ಯನ ಜೀವನವನ್ನು ಪ್ರತಿನಿತ್ಯ ನರಕಗೊಳಿಸುತ್ತಿರುವಾಗ ಮನುಷ್ಯ ಮನುಷ್ಯರ ನಡುವೆ ಸಮಾನತೆಯನ್ನು ಪರಸ್ಪರ ಗೌರವವನ್ನು ಪ್ರೀತಿ- ವಿಶ್ವಾಸಗಳನ್ನು ಬಿತ್ತುವ ಅತೀ ಮೌಲ್ಯಯುತವಾದ ವಿಚಾರಗಳನ್ನು ಬೌದ್ಧದಲ್ಲಿರುತ್ತವೆ.

ಬುದ್ಧನ ಸಂದೇಶ ಆತನ ತತ್ವದ ಸಾರಗಳು ಇವತ್ತು ವಿಶ್ವಕ್ಕೆ ಶಾಂತಿ ನೆಲೆಸಲು ಅವಶ್ಯಕವಾಗಿವೆ. ಕೋಮುವಾದಿ ಪಕ್ಷ ಮತ್ತು ಸಂಘ ಪರಿವಾರದಿಂದ ದಲಿತರ, ಹಿಂದೂಳಿದವರು, ಅಲ್ಪಸಂಖ್ಯಾತರು, ದೂರ ಇರಬೇಕು ಎಂದು ಹೇಳಿದರು. ಅಂಬಲಗಿ ಪರಿವಾರದಿಂದ ತಥಾಗತ ಗೌತಮ ಬುದ್ಧರ ಮೂರ್ತಿ ಮತ್ತು ಧಮ್ಮ ಸಭಾ ಮಂಟಪ, ವಯಕ್ತಿವಾಗಿ ಈ ಘನಕಾರ್ಯಕ್ಕೆ ಅವರಿಗೆ ಅಭಿನಂಧಿಸಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರಾದ ಅಶೋಕ ಅಂಬಲಗಿ ಅವರು ಮಾತನಾಡಿ ರಾಜ್ಯಾಧಿಕಾರ, ರಾಜಪ್ರಭುತ್ವ, ಅಪಾರವಾದ ಸಂಪತ್ತನ್ನು ಎಲ್ಲವನ್ನು ತ್ಯಜಿಸಿ, ಮಾನವ ಸಮಾಜದ ಒಳಿತಾಗಿ ಸತ್ಯಾನ್ವೇಷಣೆಯಲ್ಲಿ ಕಠಿಣವಾದ ಮಾರ್ಗ ತುಳಿದು ನಮಗೆ ಒಳ್ಳೆಯ ರೀತಿಯಲ್ಲಿ ಬದುಕಲು ಬೌದ್ಧ ಧರ್ಮ ಕೊಟ್ಟಿದ್ದಾರೆ. ಬುದ್ಧನ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ, ಈ ಹಿನ್ನೆಲೆಯಲ್ಲಿ 1993ರಲ್ಲಿಯೇ ಅಂಬಲಗಿ ಕುಟುಂಬ ಗ್ರಾಮದಲ್ಲಿ ಬೌದ್ಧ ವಿಹಾರ ನಿರ್ಮಾಣ ಮಾಡಲಾಯಿತು.

ನನ್ನ ವಯಕ್ತಿಕ ಆದಾಯದಲ್ಲಿ ಬುದ್ಧನ ಪ್ರತಿಮೆ ಪ್ರತಿಸ್ಥಾಪನೆ ಮತ್ತು ದಿ. ನನ್ನ ತಂದೆಯವರಾದ ಸಂಬಣ್ಣಾ ಚಂದಪ್ಪ ಸಿಂಗೆ ಇವರ ಸ್ಮರಣಾರ್ಥವಾಗಿ “ಧಮ್ಮ ಸಭಾ ಮಂಟಪ” ಉದ್ಘಾಟನೆ ಮಾಡಲಾಗಿದೆ. ಬಡವರಾದ ನಮ್ಮ ಸಮೂದಾಯದವರು ಯಾವುದೇ ಸಾಂಸ್ಕøತಿಕ ಮತ್ತು ಮಂಗಲ ಕಾರ್ಯಕ್ರಮಗಳಿಗೆ ಉಚಿತವಾಗಿ ಉಪಯೋಗಿಸಲು ವ್ಯವಸ್ಥೆ ಮಾಡಲಾಗಿದೆ. ಡಾ. ಬಿ.ಆರ್. ಅಂಬೇಡ್ಕರ ರವರು ಹೇಳಿದ ಹಾಗೆ ನಾವೆಲ್ಲರು ಶಿಕ್ಷಣ ಪಡೆಯಬೇಕು. ಶಿಕ್ಷಣವೇ ನಮ್ಮ ಗುರಿಯಾಗಬೇಕು. ಡಾ. ಬಿ.ಆರ್. ಅಂಬೇಡ್ಕರ ಅವರ ತತ್ವಸಿದ್ಧಾಂತಗಳನ್ನು ಅನುಸರಿಸಿ ಧಮ್ಮ ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಚಿಂತಕ ದೇವಿಂದ್ರ ಹೆಗ್ಗಡೆ ಮತ್ತು ದಲಿತ ಮುಖಂಡ ಅರ್ಜುನ ಭದ್ರೆ ಮಾತನಾಡಿದರು. ಅಶೋಕ ಅಂಬಲಗಿ ಅವರು ಅಂಬಲಗಿ ಗ್ರಾಮದ ಸಮೂದಾಯಕ್ಕೆ ಕೊಡುಗೆ ನೀಡಿದಕ್ಕಾಗಿ ಈ ಸಂದರ್ಭದಲ್ಲಿ ಡೋಳ್ಳೆಯ ಪರವಾರದ ಮಾಯಾದೇವಿ, ಡಾ. ಮಂಜೀತ ಡೊಳ್ಳೆ ಹಾಗೂ ಪ್ರೇಮದತ ಸಹಾಯಕ ಆಯುಕ್ತರು ವಾಣಿಜ್ಯ ಇಲಾಖೆ, ಅಂಬಲಗಿ ಕುಟುಂಬಕ್ಕೆ ಮಂಜುಳಾ ಅಶೋಕ ಅಂಬಲಗಿ ಅವರಿಗೆ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ಮಹಾಂತೇಶ ಬಡದಾಳ, ಸುರೇಶ ಹಾದಿಮನಿ, ಪೆÇ್ರ. ಅಂಬಣ್ಣಾ ಜೀವಣಗಿ, ಬಿ.ಸಿ. ವಾಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಎಸ್.ಪಿ ಸುಳ್ಯದಯವರು ನೆರವೇರಿಸಿದರು. ಸ್ವಾಗತ ಡಾ. ಮಂಜೀತ ಡೊಳ್ಳೆಯವರು ಮಾಡಿದರು. ಡಾ. ಅಂಕಿತಾ ಅಶೋಕ ಅಂಬಲಗಿ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಕಾರ್ಯಕ್ರಮದಲ್ಲಿ ಅಪಾರವಾದ ಜನಸಂಖ್ಯೆ ಸೇರಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

12 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

22 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

22 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

22 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago