ವಾಡಿ; ಪಟ್ಟಣದ ಮೌಲಾನಾ ಅಬ್ದುಲ್ ಕಲಾಂ ಅಜಾದ್ ವೃತ್ತದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಎಂಬ ಬಿಜೆಪಿ ಪಕ್ಷದ ಗೋಡೆ ಬರಹ ಅಭಿಯಾನಕ್ಕೆ ಲೋಕಸಭಾ ಸದಸ್ಯ ಡಾ ಉಮೇಶ್ ಜಾಧವ ಅವರು ಗೋಡೆಗೆ ಕಮಲದ ಹೂವಿನ ಗುರುತು ಮೂಡಿಸುವುದರ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು ಮತ್ತೊಮ್ಮೆ ಮೋದಿ ಸರ್ಕಾರ ಎಂಬ ಬಿಜೆಪಿ ಪಕ್ಷದ ಗೋಡೆ ಬರಹ ಪಕ್ಷದ ಚುನಾವಣಾ ಪ್ರಚಾರ ತಂತ್ರಗಳಲ್ಲೊಂದಾಗಿ, ಪ್ರತಿ ಬೂತ್ ನಲ್ಲಿ 5 ಕಡೆ ಗೋಡೆ ಬರಹ ಬರೆಯುವಂತೆ ಪಕ್ಷದ ಆದೇಶ ಇದೆ. ಪ್ರಧಾನಿ ಮೋದಿ ಅವರ ಜನಪರ ಕಾರ್ಯಗಳನ್ನು ಎಲ್ಲರ ಮನೆ ಮನದಲ್ಲಿ ಮೂಡಿಸಿ ಮತ್ತೊಮ್ಮೆ ಮೋದಿ ಜಿ ಅವರನ್ನು ಪ್ರಧಾನಿ ಯಾಗಿಸುವ ಸಂಕಲ್ಪ ಮಾಡಬೇಕಾಗಿದೆ.
ಅದರಂತೆ ನಮ್ಮ ವಾಡಿ ಮಹಾಶಕ್ತಿ ಕೇಂದ್ರದಲ್ಲಿ ಈ ಅಭಿಯಾನ ಯಶಸ್ವಿ ಆಗುತ್ತಿದೆ.ಇಲ್ಲಿ ಶ್ರಮಿಸುತ್ತಿರುವ ನಮ್ಮ ಪಕ್ಷದ ಎಲ್ಲಾ ಬಾಂಧವರಿಗೆ ಧನ್ಯವಾದಗಳು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ, ಪುರಸಭೆ ವಿರೋಧ ಪಕ್ಷದ ಮಾಜಿ ನಾಯಕ ಭೀಮಶಾ ಜಿರೋಳ್ಳಿ,ಕೇಂದ್ರ ಆಹಾರ ನಿಗಮದ ನಿರ್ದೇಶಕ ರವಿಕುಮಾರ ರಾಠೋಡ,ಎಸ್ ಸಿ ಮೂರ್ಚಾದ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್, ಯುವ ಮೂರ್ಚಾದ ಅಧ್ಯಕ್ಷ ಭಾಗಣ್ಣ ದೊರೆ, ಮುಖಂಡರಾದ ವಿಠಲ ನಾಯಕ,ರಮೇಶ ಕಾರಬಾರಿ, ಭೀಮರಾವ ದೊರೆ, ತುಕಾರಾಮ ರಾಠೋಡ,ಶಿವಶಂಕರ ಕಾಶೆಟ್ಟಿ, ರಾಮಚಂದ್ರ ರಾಠೋಡ,ರವಿ ಕಾರಬಾರಿ,ಅಯ್ಯಣ್ಣ ದಂಡೋತಿ,ಹೀರಾ ನಾಯಕ, ಮಲ್ಲಿಕಾರ್ಜುನ ಸಾತಖೇಡ,ಪ್ರೇಮ ರಾಠೋಡ,ಮಹೇಂದ್ರ ಕುಮಾರ ಪುಜಾರಿ,ಸಿದ್ದಗೌಡ ನಾಲವಾರ, ಶಿವಕುಮಾರ ಹೂಗಾರ,ಅಭಿಷೇಕ ರಾಠೋಡ,ಜಗನ್ನಾಥ ಕಲ್ಲಶೆಟ್ಟಿ, ಅಶೋಕ ಪಂಚಾಳ, ದೇವೇಂದ್ರ ಪಂಚಾಳ,ರವಿ ರಾಠೋಡ, ಭಾರತ ರಾಠೋಡ,ಜಯಂತ ಪವಾರ, ಕುಮಾರ ಜಾಧವ, ಮಲ್ಲಿಕಾರ್ಜುನ ಸೇರಿದಂತೆ ಅನೇಕರು ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…