ಕಲಬುರಗಿ: ಶಾಂತಿ ಎನ್ನುವುದು ಇಂದು ಇಡೀ ಜಗತ್ತಿಗೆ ಅತ್ಯಂತ ಅವಶ್ಯಕವಾಗಿ ಬೇಕಾಗಿದೆ. ಇದು ಬಾಹ್ಯವಾಗಿ ದೊರೆಯುವುದಿಲ್ಲ. ಬೇವಿನ ಮರ ನೆಟ್ಟು, ಮಾವಿನ ಫಲ ಪಡೆಯಲು ಹೇಗೆ ಸಾಧ್ಯವಿಲ್ಲವೋ, ಹಾಗೆಯೇ, ವ್ಯಕ್ತಿಯಲ್ಲಿ ಕೆಟ್ಟ ವಿಚಾರಗಳು ತುಂಬಿದ್ದರೆ, ಆ ವ್ಯಕ್ತಿ ಮತ್ತು ಸಮಾಜ ಅಶಾಂತವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ದ್ವೇಷ, ಅಸೂಯೆ, ಸ್ವಾರ್ಥತೆಯಂತಹ ದುರ್ಗುಣಗಳನ್ನು ತ್ಯಜಿಸಿ, ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಾಗ ವ್ಯಕ್ತಿ ಮತ್ತು ಸಮಾಜ ಶಾಂತವಾಗಿರಲು ಸಾಧ್ಯವಿದೆ ಎಂದು ಚಿಂತಕ ಬಸಯ್ಯಸ್ವಾಮಿ ಹೊದಲೂರ ಅಭಿಮತಪಟ್ಟರು.
ನಗರದ ಸುಪರ ಮಾರ್ಕೆಟ್ ಸಪ್ತಗಿರಿ ಸಭಾಂಗಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ‘ವಿಶ್ವ ಶಾಂತಿ ಮತ್ತು ತಿಳವಳಿಕೆ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಉಪನ್ಯಾಸಕ, ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ ಮಾತನಾಡಿ, ಶಾಂತಿ ಒಂದು ಪ್ರಮುಖವಾದ ಮೌಲ್ಯವಾಗಿದೆ. ಇಂದು ಜಗತ್ತು ಭಯೋತ್ಪಾದನೆ, ಶೋಷಣೆ, ದರೋಡೆ, ಅತ್ಯಾಚಾರ, ಅನೀತಿ, ಮೌಢ್ಯತೆ, ಭ್ರಷ್ಟಾಚಾರದಂತೆ ಮುಂತಾದ ಸಮಸ್ಯೆಗಳಿಂದ ನಲುಗಿ ಶಾಂತಿಯಿಲ್ಲದಂತಾಗಿದೆ. ಇದು ಮಾರುಕಟ್ಟೆಯಲ್ಲಿ ಸಿಗುವ ವಸ್ತುವಲ್ಲ. ಬದಲಿಗೆ ಮನಸ್ಸಿನ ದೃಢನಿರ್ಧಾರ ಮೂಲಕ, ಸಹನೆಯಿಂದ ಸಾಧಿಸಬೇಕಾಗುತ್ತದೆ. ಹೃದಯದಲ್ಲಿ ಸುಂದರ ಭಾವನೆ, ಕೈಯಿಂದ ಉತ್ತಮವಾದ ಕಾರ್ಯ ಮತ್ತು ಜ್ಞಾನವನ್ನು ಸರಿಯಾದ ಕೆಲಸಕ್ಕೆ ಬಳಸಿಕೊಳ್ಳುವದರಿಂದ ಶಾಂತಿಯನ್ನು ಪಡೆಯಬಹುದಾಗಿದೆ. ಪರಸ್ಪರ ತಿಳವಳಿಕೆ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ದೇವೇಂದ್ರಪ್ಪ ಗಣಮುಖಿ, ಸಿದ್ದರಾಮ ತಳವಾರ, ಸುರೇಶ ಪಂಚಾಳ, ಸಿದ್ರಾಮಪ್ಪ ಜಮಾದಾರ, ಪ್ರಕಾಶ ಚವ್ಹಾಣ ಸೇರಿದಂತೆ ಇನ್ನಿತರರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…