ಬಿಸಿ ಬಿಸಿ ಸುದ್ದಿ

ಜಂತು ಹುಳು ನಿವಾರಣೆಗೆ ಆಲ್‍ಬಡಂಡಾಜೋಲ್ ಮಾತ್ರೆ ರಾಮಭಾಣ

ಶಹಾಬಾದ: ಜಂತು ಹುಳು ನಿವಾರಣೆಗೆ ಆಲ್‍ಬ ಡಂಡಾಜೋಲ್ ಮಾತ್ರೆ ರಾಮಭಾಣವಾಗಿ ಕೆಲಸ ಮಾಡುತ್ತದೆ ಎಂದು ಸಮುದಾಯ ಆರೋಗು ಕೇಂದ್ರದ ಡಾ.ಅಶ್ವಿನಿ ನೀಡಗುಂದಿ ಹೇಳಿದರು.

ಅವರು ಶನಿವಾರ ನಗರದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಂತು ಹುಳು ಮಾನವನ ಕರುಳಿನಿಂದ ಪೋಷಕಾಂಶಗಳನ್ನು ಹೀರಿಕೊಂಡು ಜೀವಿಸುವ ಪರಾವಲಂಬಿಗಳಾಗಿದ್ದು, ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ ಮತ್ತು ರಕ್ತ ಹೀನತೆಗೆ ಕಾರಣವಾಗುತ್ತಿದೆ.ಮಕ್ಕಳು ಬರಿಗಾಲಿನಿಂದ ಹೊರಗಡೆ ಆಟವಾಡುವದರಿಂದ, ಕೈಗಳನ್ನು ತೊಳೆಯದೇ ಆಹಾರ ಸೇವಿಸುವುದರಿಂದ, ಬಯಲು ಮಲ ವಿಸರ್ಜಿಸುವುದರಿಂದ, ಅಶುಚಿತ್ವದ ಪರಿಸರದಿಂದಾಗಿ ಮಕ್ಕಳು ಮತ್ತು ದೊಡ್ಡವರು ಜಂತು ಹುಳು ಭಾದೆಗೆ ಒಳಗಾಗುತ್ತಿದ್ದು ರಾಷ್ಟ್ರೀಯ ಜಂತು ನಿವಾರಣಾ ದಿನ ಜಂತುಹುಳು ಮಾತ್ರೆ ಸೇವಿಸುವ ಮೂಲಕ ಜಂತುರಹಿತರಾಗಬೇಕು ಎಂದು ಹೇಳಿದರು.

ಆಪ್ತ ಸಮಾಲೋಚಕ ಅಂಬರೀಷ ಇಟಗಿಕರ್ ಮಾತನಾಡಿ, 1ರಿಂದ19 ವರ್ಷದ ವಯಸ್ಸಿನ ಎಲ್ಲಮಕ್ಕಳಿಗೂ ವರ್ಷದಲ್ಲಿಎರಡು ಬಾರಿ ಆರು ತಿಂಗಳಿಗೊಮ್ಮೆ ತಪ್ಪದೆ ಜಂತುಹುಳು ನಿವಾರಣಾ ಮಾತ್ರೆ ಕೊಡಿಸಬೇಕು.

ಹದಿಹರೆಯದವರಲ್ಲಿಮತ್ತು ಮಕ್ಕಳಲ್ಲಿ ಅತೀ ಮುಖ್ಯವಾಗಿ ಕಾಡುತ್ತಿರುವ ಸಮಸ್ಯೆಗಳಲ್ಲಿರಕ್ತ ಹೀನತೆ ಮತ್ತು ಅಪೌಷ್ಟಿಕತೆ ಮುಖ್ಯವಾದುದಾಗಿದ್ದು ಅದಕ್ಕೆ ಕಾರಣ ಜಂತು ಹುಳುವಿನ ಸಮಸ್ಯೆಯಾಗಿದ್ದು ಬಯಲಿನಲ್ಲಿಮಲವಿಸರ್ಜನೆ ಮಾಡಿರುವುದರಿಂದ ಜಂತುಹುಳುವಿನ ಸಮಸ್ಯೆಯಿಲ್ಲದೆ ಹಲವಾರು ಸಾಂಕ್ರಾಮಿಕ ಕಾಯಿಲೆ ಬರುತ್ತಿದ್ದು ಅವುಗಳನ್ನು ತಡೆಗಟ್ಟಬೇಕಾದರೆ ಬಯಲು ಮಲವಿಸರ್ಜನೆ ಮಾಡದೆ ಶೌಚಾಲಯ ನಿರ್ಮಿಸಿಕೊಳ್ಳಬೇಕು. ಅಲ್ಲದೇ ಮಲವಿಸರ್ಜನೆ ನಂತರ ಆಹಾರ ಸೇವಿಸುವ ಮೊದಲು ಕೈಗಳನ್ನು ಸಾಬೂನಿನಿಂದ ಸ್ವಚ್ಚವಾಗಿ ತೊಳೆದುಕೊಳ್ಳಬೇಕು. ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಚಟುವಟಿಕೆ ಕುಂಠಿತಗೊಂಡು ಕಲಿಕೆಯಲ್ಲಿ ಹಿಂದೆ ಬೀಳುತ್ತವೆ. ದೇಶಾದ್ಯಂತ ರಾಷ್ಟ್ರೀಯ ಜಂತು ನಿವಾರಣ ದಿನದ ಮೂಲಕ 1ರಿಂದ19 ವರ್ಷದ ಮಕ್ಕಳಿಗೆ ಜಂತು ನಿವಾರಣಾ ಔಷಧಿ ವಿತರಿಸುವ ಮೂಲಕ ರಕ್ತ ಹೀನತೆಗೆ ಕಾರಣವಾಗುವ ಜಂತುಗಳನ್ನು ನಾಶ ಮಾಡಲಾಗುತ್ತಿದೆ ಎಂದು ಹೇಳಿದರು.

ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲ ಜಗನ್ನಾಥ ಹೊಸಮನಿ, ಉಪನ್ಯಾಸಕರಾದ ಬಸವರಾಜ ಕೋಳಕೂರ, ಮಹಾದೇವ ಪಾಟೀಲ, ರವಿ ಚವ್ಹಾಣ, ಅಂಬಿಕಾ ಹಂಗರಿಗಿ ಇತರರು ಇದ್ದರು.

emedialine

Recent Posts

ವಿಭಾಗ ಮಟ್ಟದ ದಾಸ ಸಾಹಿತ್ಯ ಸಮ್ಮೇಳನದಲ್ಲಿ ವೈದ್ಯ ಶ್ರೀ ಪುರಸ್ಕೃತ ಡಾ. ಶರಣಬಸಪ್ಪ ಕ್ಯಾತನಾಳ ಪುರಸ್ಕಾರ

ಕಲಬುರಗಿ: ನಗರದ ಸಂಗಮೇಶ್ವರ ಸಭಾಗೃಹದಲ್ಲಿ  ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ವಲಯದ ವಿಭಾಗ ಮಟ್ಟದ 2ನೇ ದಾಸ ಸಾಹಿತ್ಯ ಸಮ್ಮೇಳನ…

28 mins ago

ಜಪಾನ್ ವಿ. ವಿಯಲ್ಲಿ ಪ್ರಬಂಧ ಮಂಡನೆ ಮಾಡಿದ ಡಾ. ಪಾಸೋಡಿ

ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ. ಎಂ ಎಸ್ ಪಾಸೋಡಿ ಅವರು ಜಪಾನ್…

2 hours ago

ಕಲಬುರಗಿ: ಡೆಂಗ್ಯೂ, ಮಲೇರಿಯಾ ರೋಗಗಳನ್ನು ನಿಯಂತ್ರಿಸಲು ಬಾಲರಾಜ್ ಗುತ್ತೇದಾರ ಆಗ್ರಹ

ಕಲಬುರಗಿ: ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಹಿಸಿ ಚರಂಡಿ ನೀರನ್ನು ಸ್ವಚ್ಛಗೊಳಿಸಿ, ಸೊಳ್ಳೆಗಳು ಬಾರದಂತೆ ಫಾಗಿಂಗ್ ಮಾಡಿಸಬೇಕು…

2 hours ago

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

4 hours ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

5 hours ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

5 hours ago