ಕಲಬುರಗಿ: ಎಂ.ಎಸ್.ಕಿ ಮಿಲ್ ಪ್ರದೇಶದ ಎಕ್ಬಾಲ್ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ಮಲಗಿದ ಒಂದೇ ಕುಟುಂಬದ ನಾಲ್ವ ಜನರನ್ನು ಜೀವಂತವಾಗಿ ಸುಟ್ಟುಹಾಕಿ ಹತ್ಯೆ ಮಾಡಿದ ಅಪರಾಧಿಗೆ ಜೀವಾವಧಿ ಶಿಕ್ಷ ಮತ್ತು 4 ಲಕ್ಷ ದಂಡ ವಿಧಿಸಿ ಇಲ್ಲಿನ 1ನೇ ಅಪಾರ ಮತ್ತು ಜಿಲ್ಲಾ ಸತ್ರ ನ್ಯಾಯಲಯ ಆದೇಶ ಹೊರಡಿಸಿದೆ.
ಇಕ್ಬಾಲ್ ಕಾಲೋನಿ ನಿವಾಸಿಯಾಗಿರುವ ಮುಸ್ತಫಾ ಸುಲ್ತಾನ್ ಮಿರ್ಜಾ ಸಲೀಮ್ (25) ಶಿಕ್ಷೆಗೆ ಒಳಗಾದ ಅಪರಾಧಿ. 04/07/2018 ರಂದು ಇಕ್ಬಾಲ್ ಕಾಲೋನಿಯ ನಿವಾಸಿಯಾಗಿದ್ದ ಸೈಯದ್ ಅಕ್ಬರ್, ಶಹನಾಜ್ ಬೇಗಂ ಮತ್ತು ಇಬ್ಬರು ಮಕ್ಕಳಾದ ಸೈಯದ್ ಯಾಸೀನ್ ಹಾಗೂ ಸೈಯದಾ ಸಾನಿಯಾ ಬೇಗಂ ಅವರನ್ನು ಜೀವಂತವಾಗಿ ಸುಟ್ಟುಹಾಕಿ ವಿಕೃತ ಮೆರೆದಿದ್ದು, ಕೃತ್ಯ ಸಾಬಿತಾಗಿದೆ.
ಮಧ್ಯರಾತ್ರಿ ನಾಲ್ವರು ಮನೆಯಲ್ಲಿ ಮಲಗಿರುವ ವೇಳೆ ಕ್ಯಾನ್ ನಲ್ಲಿ ಪೆಟ್ರೋಲ್ ಹಾಕಿ ಹೊರಗಿನಿಂದ ಬಾಗಿಲಿಗೆ ಕೊಂಡಿಯನ್ನು ಜಡಿದು ಬೆಂಕಿ ಹಚ್ಚಿದನ್ನು. ಘಟನೆಯಲ್ಲಿ ಸಂಪೂರ್ಣವಾಗಿ ಸುಟ್ಟಿರುವ ದೇಹಗಳಿಗೆ ಚಿಕಿತ್ಸೆ ಫಲಕಾರಿಯಾಗದೆ ನಾಲ್ವರು ಮೃತಪಟ್ಟಿದರು. ಕುರಿತು ರಾಘವೇಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ 1ನೇ ಅಪರಾ ಜಿಲ್ಲಾ ಮತ್ತು ಸತ್ರ ನ್ಯಾಲಯದ ನ್ಯಾಯಾಧೀಶರಾದ ಮೋಹನ್ ಬಾಡಗಂಡಿ ಸಾಕ್ಷಿ ಆದರವಾಗಿ ಇಟ್ಟುಕೊಂಡು ಅಪರಾಧಿ ಮುಸ್ತಫಾಗೆ ಜೀವಿತ ಅವಧಿಯವರೆಗೆ ಶಿಕ್ಷೆ ಹಾಗೂ ನಾಲ್ಕು ಲಕ್ಷ ದಂಡ ವಿಧಿಸಿ ದಂಡ ವಿಧಿಸುವಲಿ ವಿಫಲವಾಗಿದಲ್ಲಿ 2 ವರ್ಷ ಕಠಿಣ ಶಿಕ್ಷೆ ವಿಧಿಸಬೇಕೆಂದು ಆದೇಶ ಹೊರಡಿಸಿದ್ದಾರೆ. ಎಸ್.ಆರ್ ನರಸಿಂಹ ಅವರು ನ್ಯಾಯಲದಲ್ಲಿ ಸರಕಾರದ ಪರವಾಗಿ ವಾದ ಮಂಡಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…