ಚಿತ್ತಾಪುರ : ಮಕ್ಕಳಲ್ಲಿ ವೈಜ್ಞನಿಕ ಮನೋಭಾವ ಬೆಳೆಸುವ ಉದ್ದೇಶದಿಂದ ಮಕ್ಕಳ ಕುತೂಹಲ ಆಸಕ್ತಿ ಮನೋಸ್ಥೈರ್ಯ ಹೆಚ್ಚಿಸಲು ಇರುವ ಅತ್ಯುತ್ತಮ ಮಾರ್ಗ ವಿಜ್ಞಾನ ಮೇಳ. ಇಂತಹ ಅದ್ಭುತವಾದ ವಿಜ್ಞಾನ ಮೇಳ ಆಯೋಜಿಸಿ ಸೈ ಎನಿಸುವಂತಹ ಕೆಲಸವನ್ನು ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಭಂಕೂರ ಶಿಕ್ಷಕರು ಮಾಡಿದ್ದಾರೆ ಎಂದು ಉಪಯೋಜನಾ ಸಮನ್ವಾಯಾಧಿಕಾರಿ ವಿ.ಎಂ.ಪತ್ತಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಇಂದು ಚಿತ್ತಾಪುರ ತಾಲೂಕಿನ ಭಂಕೂರ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಮೇಳ ಉದ್ಘಾಟನೆ ಮಾಡಿದರು. ಸೊರಗಿತ್ತಿವೆ ಸರಕಾರಿ ಶಾಲೆಗಳು ಎನ್ನುವ ಕೂಗಿನ ಮದ್ಯೆ ಇಂತಹ ಅದ್ಭುತವಾದ ಕೆಲಸ ಮಾಡುತ್ತಿರುವ ಈ ಶಾಲೆ ಉತ್ತಮವಾಗಿದೆ. ಶಾಲೆಯ ಪರಿಸರ ಮಕ್ಕಳ ಸ್ನೇಹಿಯಾಗಿದ್ದು ಕಲಿಕಾ ವಾತಾವರಣವಿದೆ. ಇಲ್ಲಿನ ಶಿಕ್ಷಕರ ಶ್ರಮ ಮಕ್ಕಳ ಕಲಿಕೆಯಲ್ಲಿ ಎದ್ದು ಕಾಣುತ್ತದೆ. ವಿಜ್ಞಾನದ ಪ್ರಯೋಗಗಳನ್ನು ಅತ್ಯಂತ ಉತ್ತಮವಾಗಿ ಪ್ರದರ್ಶನದ ಮೂಲಕ ತಮ್ಮ ಪ್ರತಿಭೆ ಹೊರಹಾಕಿದ್ದಾರೆ ಇದು ಎಲ್ಲಾ ಶಾಲೆಗಳಿಗೆ ಮಾದರಿಯಾಗಲಿ ಎಂದು ಹೇಳಿದು.
ಮುಖ್ಯ ಅಥಿಯಾಗಿ ಭಾಗವಹಿಸಿದ ಶಿಕ್ಷಣ ತಜ್ಞ ಕೆ.ಎಂ.ವಿಶ್ವನಾಥ ಮರತೂರ ಮಾತನಾಡಿತ್ತಾ ಶಿಕ್ಷಕರು ಸತತ ಅಧ್ಯಯನಶೀಲರಾಗಬೇಕು, ಸದಾ ಓದಬೇಕು ಮಕ್ಕಳಿಗೆ ಕಲಿಸಬೇಕು, ತಮ್ಮ ಮನೆಯ ಮಕ್ಕಳಂತೆ ಸರಕಾರಿ ಶಾಲೆಯ ಮಕ್ಕಳನ್ನು ಕಾಣಬೇಕು. ಸದಾ ಕ್ರಿಯಾಶೀಲ ವ್ಯಕ್ತಿಯಾಗಿರಬೇಕು, ತರಗತಿ ಪ್ರಕ್ರಿಯೆ ಕ್ರಿಯಾಶೀಲಗೊಳಿಸಿ ಮಕ್ಕಳಲ್ಲಿ ಪ್ರಶ್ನೆ ಮಾಡುವ ತರ್ಕ ಮಾಡುವ ಕೌಶಲ್ಯ ಬೆಳೆಸಬೇಕು. ಇಪ್ಪತ್ತೊಂದನೆ ಶತಮಾನಕ್ಕೆ ಬದುಕಿಗೆ ಬೇಕಾಗಿರುವ ಶಿಕ್ಷಣದ ಜೊತೆಗೆ ಕೌಶಲಗಳನ್ನು ಕಲಿಯಲು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ವಿಜ್ಞಾನ ಮೇಳದಲ್ಲಿ ಶಾಲೆಯ ಮಕ್ಕಳೆಲ್ಲರೂ ತರಗತಿವಾರು ಪ್ರಯೋಗಗಳ ಪ್ರದರ್ಶನನ್ನು ಏರ್ಪಡಿಸಿದ್ದರು. ವಿಜ್ಞಾನ ಪ್ರಯೋಗಗಳ ಬಗ್ಗೆ ಮಕ್ಕಳು ವಿವಿರಣೆ ನೀಡುತ್ತಾ ಅತ್ಯುತ್ತಮವಾದ ಪ್ರದರ್ಶನ ನೀಡಿದರು. ಶಾಲೆಯ 100ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು 100 ಕ್ಕೂ ಹೆಚ್ಚಿನ ಥೀಮ್ ಗಳ ಮೇಲೆ ಪ್ರಯೋಗಗಳನ್ನು ಪ್ರದರ್ಶನ ಮಾಡಿ ಎಲ್ಲರ ಗಮನ ಸೆಳೆದರು. ಸುತ್ತಮುತ್ತಲಿನ ಶಾಲೆಗಳಿಂದ 200ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಪ್ರದರ್ಶನ ವೀಕ್ಷಿಸಿದರು.
“ನಾನು ಈ ಶಾಲೆಯ ವಿದ್ಯಾರ್ಥಿಯಾಗಿದ್ದು ರಾಷ್ಟ್ರೀಯ ವಿಜ್ಞಾನ ದಿನದಂದು ಇಂತಹ ಅದ್ಭುತವಾದ ವಿಜ್ಞಾನ ಮೇಳದಲ್ಲಿ ಭಾವವಹಿಸಿದ್ದು ಹೆಮ್ಮೆಯಿದೆ. ಈ ಮಕ್ಕಳ ಕಲಿಕೆಯನ್ನು ನೋಡಿ ಸಂತೋಷಪಡುತ್ತಿದ್ದೇನೆ. ವಿಜ್ಞಾನ ವಿಷಯದ ಅನೇಕ ಪ್ರಯೋಗಗಳನ್ನು ಉತ್ತಮವಾಗಿ ಪ್ರದರ್ಶನ ಮಾಡಿದ್ದಾರೆ. ಶಾಲೆಯ ವಿಜ್ಞಾನ ಶಿಕ್ಷಕರಿಗೆ ಹಾಗೂ ಶಾಲೆಯ ಎಲ್ಲಾ ಶಿಕ್ಷಕರಿಗೆ ಅಭಿನಂದನೆಗಳು.”-ಶ್ರೀ ಶಿವಯೋಗಿ ಬಣ್ಣೆಕರ. – ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರು.
ನಾನು ನನ್ನ ಶಾಲೆಯ ಮಕ್ಕಳ ಶ್ರೇಯೋಭಿವೃದ್ಧಿಗಾಗಿ, ಅವರ ಜ್ಞಾನದ ವಿಸ್ತರಣೆಗಾಗಿ ಈ ವಿಜ್ಞಾನ ಮೇಳ ಆಯೋಜನೆ ಮಾಡಿದ್ದೇನೆ. ನನ್ನ ವಿದ್ಯಾರ್ಥಿಗಳೆ ನನಗೆ ಪ್ರಪಂಚ ಅವರು ಉತ್ತಮವಾಗಿ ಕಲಿಯಬೇಕು, ಅವರಲ್ಲಿ ಧೈರ್ಯ, ಧನಾತ್ಮಕ ಮನೋಭಾವ, ವೈಜ್ಞಾನಿಕ ಮನೋಭಾವ ಮೂಡಿಸುವ ಉದ್ದೇಶದಿಂದ ಇಂತಹ ಕ್ರೀಯಾಶೀಲವಾದ ವಿಜ್ಞಾನ ಮೇಳ ಆಯೋಜನೆ ಮಾಡಿದ್ದೇನೆ. ನನ್ನ ಶಾಲೆ ನನ್ನ ಹೆಮ್ಮೆ ಎನ್ನುವ ಧ್ಯೇಯ ವಾಕ್ಯದೊಂದಿಗೆ ಶಾಲೆಯ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುವೆ ಅನೇಕರು ನನ್ನೊಂದಿಗೆ ಕೈಜೋಡಿಸಿದ್ದು ಇನ್ನಷ್ಟು ಕೆಲಸ ಮಾಡಲು ಇದು ಪ್ರೋತ್ಸಾಹಕವಾಗಿದೆ.” -ಶ್ರೀಮತಿ ರಾಜೇಶ್ವರಿ – ವಿಜ್ಞಾನ ಶಿಕ್ಷಕರು, ಸ.ಮಾ.ಪ್ರಾ.ಶಾಲೆ ಭಂಕೂರ.
ಕಾರ್ಯಕ್ರಮದಲ್ಲಿ ಶಿವಯೋಗಿ ಬೆಣ್ಣೆಕರ್, ವೀಣಾ, ಯೂನಿಫ್ ಜಾಫರ್, ಮರಿಯಪ್ಪ ಭಜಂತ್ರಿ ಮಾತನಾಡಿದರು. ಗ್ರಾಮ ಪಂಚಾಯತ್ ಸದಸ್ಯರು, ಅಧ್ಯಕ್ಷರು ಹಾಗೂ ಶಾಲೆಯ ಎಸ್.ಡಿ.ಎಂ.ಸಿ. ಸದಸ್ಯರು ಹಾಗೂ ಅಧ್ಯಕ್ಷರು ಗ್ರಾಮದ ಪಾಲಕರು, ಸುತ್ತಮುತ್ತಲಿನ ಶಾಲೆಯ ಶಿಕ್ಷಕರು ಮಕ್ಕಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿ ಕಲಾವತಿ ನಿರೂಪಿಸಿದರು, ಕು. ದೀಪಿಕಾ ಸ್ವಾಗತಿಸಿದರು, ಪ್ರಧಾನ ಗುರುಗಳಾದ ಶ್ರೀ ಕನಕಪ್ಪ ಮ್ಯಾಗೇರಿ ಅಧ್ಯಕ್ಷತೆ ವಹಿಸಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…