ಬಿಸಿ ಬಿಸಿ ಸುದ್ದಿ

ಕಲಬುರಗಿ: ದುಷ್ಕರ್ಮಿಗಳಿಂದ ಬಿಜೆಪಿ ಮುಖಂಡನ ಹತ್ಯೆ

ಕಲಬುರಗಿ: ಕಾರಿನಲ್ಲಿ ಏಕಾಏಕಿ ಬಂದ ದುಷ್ಕರ್ಮಿಗಳಿಂದ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಮುಖಂಡ ಓರ್ವನನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಸರಸಂಬಾ ಗ್ರಾಮದಲ್ಲಿ ನಡೆದಿದೆ.

ಬಿಜೆಪಿ ಮುಖಂಡ ಮಹಾಂತಪ್ಪ ಸಿದ್ದರಾಮಪ್ಪ ಆಲೂರೆ(45) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಸರಸಂಬಾ ಗ್ರಾಮದಲ್ಲಿ ಧನ ಲಕ್ಷ್ಮೀ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದ ಮಹಾಂತಪ್ಪ, ಸತತ ಮೂರು ಬಾರಿ ಗ್ರಾಮ ಪಂಚಾಯತಿ ಸದಸ್ಯರಾಗಿಯೂ ಆಯ್ಕೆಯಾಗಿದ್ದರು.

ಕಾರಿನಲ್ಲಿ ಏಕಾಏಕಿ ಬಂದ ದುಷ್ಕರ್ಮಿಗಳಿಂದ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ದುಷ್ಕರ್ಮಿಗಳು ಪರಾರಿಯಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಾಂತಪ್ಪ ಅವರನ್ನು ಮಹಾರಾಷ್ಟ್ರದ ಸೋಲಾಪೂರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದು, ಇದುವರೆಗೆ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಮಾದನ ಹಿಪ್ಪರಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

emedialine

Recent Posts

ಕಲಬುರಗಿ: ನೂತನ ಗ್ರಂಥಾಲಯ ಉದ್ಘಾಟನೆ

ಕಲಬುರಗಿ: ಕಲ್ಯಾಣ ಕರ್ನಾಟಕ ವಿಭಾಗದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾದ ಮಾರ್ಗದರ್ಶಿ ತರಬೇತಿ ಕೇಂದ್ರ ಕಲಬುರಗಿಯಲ್ಲಿ ನೂತನ ಗ್ರಂಥಾಲಯವನ್ನು…

54 mins ago

ಬಸವ ಜಯಂತಿ ಆಚರಣೆ ಅಂಗವಾಗಿ ಹುಣಸಗಿಯಲ್ಲಿ ಪೂರ್ವಭಾವಿ ಸಭೆ

ಸುರಪುರ: ಕಳೆದ ಒಂದುವರೆ ತಿಂಗಳಿನಿಂದ ರಾಜ್ಯದಲ್ಲಿ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಸರಕಾರ ದಿಂದ ಸಾಂಸ್ಕøತಿಕ ನಾಯಕ ವಿಶ್ವಗುರು ಬಸವಣ್ಣನವರ…

2 hours ago

ಹುಣಸಿಹೊಳೆ: ಕಣ್ವಮಠದಲ್ಲಿ ಯತಿತ್ರಯರ ಆರಾಧನೆ ಜೂನ್ 22 ರಿಂದ ಜುಲೈ 3ರ ವರೆಗೆ

ಸುರಪುರ: ಕಣ್ವಮಠದ ಯತಿಗಳಾದ ವಿದ್ಯಾ ತಪೋನಿಧಿ ತೀರ್ಥರ ಆರಾಧನೆ ಜೂನ್ 22 ರಿಂದ 24 ರವರೆಗೆ, ವಿದ್ಯಾಮನೋಹರ ತೀರ್ಥರ ಆರಾಧನೆ…

2 hours ago

ಆರ್ಟ್ ಆಫ್ ಲಿವಿಂಗ್ ಮಕ್ಕಳಿಗಾಗಿ ಯೋಗ ತರಬೇತಿ 23ಕ್ಕೆ

ಸುರಪುರ: ಶ್ರೀ ಶ್ರೀ ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಯಾದಗಿರಿ ಜಿಲ್ಲೆ ವತಿಯಿಂದ ಬೇಸಿಗೆ ಸಂದರ್ಭದಲ್ಲಿ ಮಕ್ಕಳಿಗಾಗಿ ಯೋಗ…

2 hours ago

ಈಶಾನ್ಯ ಪದವೀಧರ ಚುನಾವಣೆ,ಅಂತಿಮ ಮತದಾನಕ್ಕೆ 1,56,623 ಮತದಾರರು ಅರ್ಹ

ಕಲಬುರಗಿ: ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಗೆ ಜೂನ್ 3 ರಂದು ನಡೆಯುವ ಮತದಾನಕ್ಕೆ ಕ್ಷೇತ್ರದಾದ್ಯಂತ 99,121 ಪುರುಷರು, 57,483…

3 hours ago

ಡೊನೇಷನ್ ಹಾವಳಿಗೆ ಕಡಿವಾಣಕ್ಕೆ ಎಸ್ಎಫ್ಐಯಿಂದ ಶಾಲಾ ಶಿಕ್ಷಣ ಪ್ರಧಾನ ಕಾರ್ಯದರ್ಶಿ, ಆಯುಕ್ತರಿಗೆ ಮನವಿ

ಬೆಂಗಳೂರು: ರಾಜ್ಯದಲ್ಲಿ ಬಹುತೇಕ ಖಾಸಗಿ ಶಾಲೆಗಳು 2024-25ನೇ, ಸಾಲಿನಲ್ಲಿ ಪ್ರವೇಶ ಶುಲ್ಕ, ಬಟ್ಟೆ. ಶೂ-ಸಾಕ್ಸ್. ಟೈ, ಬೆಲ್ಟ್, ಸ್ಮಾರ್ಟ್ ಕ್ಲಾಸ್,…

6 hours ago