ಕಲಬುರಗಿ; ತಾಲ್ಲೂಕಿನ ಜೋಗುರ ಗ್ರಾಮದಲ್ಲಿ ಸೇವಾ ಸಂಗಮ ಸಂಸ್ಧೆ ಹಾಗೂ ಇಂಡಿಯನ್ ಕ್ಯಾನ್ಸರ್ ಸೊಸೈಟಿ ಇವರ ಸಂಯುಕ್ತಾಶ್ರಯದಲ್ಲಿ ಜೋಗುರ ಗ್ರಾಮದ ಮಹಾಲಕ್ಷಿ ದೇವಸ್ಧಾನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮಕ್ಕೆ ಸೇವಾ ಸಂಗಮ ಸಂಸ್ಧೆಯ ಸಹ ನಿರ್ದೇಶಕರಾದ ಫಾದರ್ ದೀಪಕ್, ಹಾಗೂ ಬಸವಪಟ್ಟಣ ಪಂಚಾಯತ Pಆಔ ಹರಳಯ್ಯರಾಯ ದೇಸಾಯಿ, ಮತ್ತು ಇಂಡಿಯನ್ ಕ್ಯನ್ಸರ್ ಸೊಸೈಟಿಯ ಸಂಯೋಜಕರಾದ ಶ್ರೀನೀಧಿ ಡಾಟಟ ಅಕ್ಷತಾ ಯಾದವ, ಹಾಗೂ ಶ್ರೀಮತಿ ಮಂಗಲಾ P.ಊ.ಅ ಯ ಸಹಾಯಕಿ ಜೋಗುರ, ಉಮೇಶ ಗ್ರಾಮ ಪಂಚಾಯತ ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ದೀಪ ಬೇಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಸೇವಾ ಸಂಗಮ ಸಂಸ್ಧೆಯ ಸಹ ನಿರ್ದೇಶಕರಾದ ಫಾದರ್ ದೀಪಕ್ ರವರು ಮಾತನಾಡುತ್ತಾ, ಕಾಲಕಾಲಕ್ಕೆ ಸರಿಯಾದ ತಪಸಣೆಯು ಕ್ಯಾನ್ಸರ್‍ನಿಂದ ಆಗುವ ದುಷ್ಪರಿಣಾಮಗಳನ್ನು ತಗ್ಗಿಸಬಹುದು. ಈ ಆರೋಗ್ಯ ತಪಾಸಣಾ ಶೀಬಿರದ ಸುಪಯೋಗ ಗ್ರಾಮದ ಜನರು ಹೆಚ್ಚಿನ ಪ್ರಮಾಣದಲ್ಲಿ ಪಡೆಯುವಂತೆ ತಿಳಿಸಿದರು.
ಬಸವಪಟ್ಟಣ ಗ್ರಾಮ ಪಂಚಾಯತಿಯ ಹರಳಯ್ಯರಾಯ ದೇಸಾಯಿ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, ಈ ಆರೋಗ್ಯ ತಪಾಸಣಾ ಶಿಬಿರವು ಊರಿನ ಜನರೆಲ್ಲರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಈ ಶೀಬಿರದಲ್ಲಿ ವಿಶೇಷವಾಗಿ ಗರ್ಭಕೋಶ ಕ್ಯಾನ್ಸರ್, ಬಾಯಿ ಕ್ಯಾನ್ಸರ್, ಮತ್ತು ಸ್ತನ ಕ್ಯಾನ್ಸರ್, ಪರಿಕ್ಷೆ ಮಾಡಲಾಗುವುದು, ಆದ್ದರಿಂದ ಎಲ್ಲಾ ಊರಿನ ಜನರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿ ಶಿಬಿರದ ಸುಪಯೋಗವನ್ನು ಪಡೆಯಬಹುದು ಎಂದು ತಿಳಿಸಿದರು.
ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಕ್ಯಾನ್ಸರ್ ತಜ್ಞರಾದ ಡಾಟಟ ಅಕ್ಷತಾ ಯಾದವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ. ಈ ಭಾಗದ ಜನರಿಗೆ ಇದು ಒಂದು ಒಳ್ಳೆಯ ಅವಕಾಶ ಹಾಗೆಯೆ ಎಲ್ಲಾ ಜನರು ಈ ಒಂದು ಉಚಿತ ಆರೋಗ್ಯ ತಪಾಸಣಾ ಶೀಬಿರವು ನಿಮಗೋಸ್ಕರ ನಿಮ್ಮ ಹಳ್ಳಿಯಲ್ಲಿ ಏರ್ಪಡಿಸಲಾಗಿದೆ. ಇದರ ಪ್ರಯೋಜನವು ನಿವೆಲ್ಲರು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಶಿಬಿರದಲ್ಲಿ ಒಟ್ಟು 80 ಜನ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಂಡರು. ಶ್ವೇತಾ ಸ್ವಾಗತಿಸಿ, ಸ್ವಾತಿ ವಂದಿಸಿ, ರಾಜಕುಮಾರ ನಿರೂಪಿಸಿದರು.ಇದರಲ್ಲಿ ಬಸವಪಟ್ಟಣದ ಗ್ರಾಮ ಪಂಚಾಯತಿಯ ಆಡಳಿತ ವರ್ಗ, ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಮೈದ್ಯಕಿಯ ತಂಡ ಹಾಗೂ ಫರಹತಾಬಾದ P.ಊ.ಅ ಯ ಸಹಾಯಕಿ ಜೋಗುರ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಸೇವಾ ಸಂಗಮ ಸಂಸ್ಧೆಯ ಸಿಬ್ಬಂದಿ ವರ್ಗದವರು & ಗ್ರಾಮದ ಜನರು ಭಾಗವಹಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…