ಬಿಸಿ ಬಿಸಿ ಸುದ್ದಿ

ಗರುಡಾದ್ರಿ ಕಲಾ ಮಂದಿರದಲ್ಲಿ ರಾಜಾ ವೆಂಕಟಪ್ಪ ನಾಯಕಗೆ ಶ್ರದ್ಧಾಂಜಲಿ

ಸುರಪುರ: ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ವಾಲ್ಮೀಕಿ ನಾಯಕ ಸಮುದಾಯ ದಿಂದ ಕಳೆದ ಕೆಲ ದಿನಗಳ ಹಿಂದೆ ನಿಧನರಾದ ಕರ್ನಾಟಕ ಉಗ್ರಾಣ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಅವರಿಗೆ ರಾಜಾ ಮುಕುಂದ ನಾಯಕ ಅವರ ನೇತೃತ್ವದಲ್ಲಿ ಶ್ರದ್ಧಾಂಜಲಿ ಹಾಗೂ ನುಡಿ-ನಮನ ಕಾರ್ಯಕ್ರಮ ನಡೆಸಲಾಗಿದೆ.ಕಾರ್ಯಕ್ರಮದ ಆರಂಭದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ನಂತರ ಎರಡು ನಿಮಿಷಗಳ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.

ನಂತರ ನಡೆದ ನುಡಿ-ನಮನ ಕಾರ್ಯಕ್ರಮದಲ್ಲಿ ಅನೇಕ ಮುಖಂಡರು ಮಾತನಾಡಿ,ರಾಜಾ ವೆಂಕಟಪ್ಪ ನಾಯಕ ಎಂದರೆ ಮಾತು ತಪ್ಪದ ಮಹಾ ನಾಯಕ,ಅವರು ಎಂದೂ ಕೊಟ್ಟ ಮಾತನ್ನು ತಪ್ಪಿದವರಲ್ಲ ಇಂದು ಅವರು ಇಲ್ಲ ಎನ್ನುವುದು ಅರಗಿಸಿಕೊಳ್ಳಲಾಗುತ್ತಿಲ್ಲ,ಅವರೊಬ್ಬ ಪಕ್ಷಾತೀತ ನಾಯಕರಾಗಿದ್ದರು,ಬೇರೆ ಪಕ್ಷದವರಾಗಿದ್ದರು ಅವರನ್ನು ಎಂದೂ ಬೇರೆ ಪಕ್ಷದವರೆನ್ನದೆ ಅವರ ಕೆಲಸ ಕಾರ್ಯ ಮಾಡಿಕೊಟ್ಟವರು,ಶೈಕ್ಷಣಿಕ ರಂಗಕ್ಕೆ ಅವರು ಸದಾಕಾಲ ನೆರವಾಗುತ್ತಿದ್ದರು,ಅಲ್ಲದೆ ಕ್ಷೇತ್ರದ ಅಭಿವೃಧ್ಧಿಗೆ ಅವರ ಕೊಡುಗೆ ತುಂಬಾ ಇದೆ,ಅವರು ಇನ್ನೂ ಅನೇಕ ಕಾಲ ನಮ್ಮೊಂದಿಗೆ ಇರಬೇಕಿತ್ತು ಎನ್ನುವ ನೋವು ಎಲ್ಲರನ್ನು ಕಾಡುತ್ತಿದೆ ಎಂದು ಅನೇಕರು ಭಾವುಕರಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಸಿದ್ದನಗೌಡ ಕರಿಬಾವಿ,ಡಾ:ಉಪೇಂದ್ರ ನಾಯಕ ಸುಬೇದಾರ,ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಉಪಾಧ್ಯಕ್ಷ ಭೀಮರಾಯ ಠಾಣಾಗುಂದಿ,ಬುಚ್ಚಪ್ಪಗೌಡ ಗುರಿಕಾರ,ವೆಂಕಟೇಶ ಬೇಟೆಗಾರ,ಲಕ್ಷ್ಮಣ ಬಿರಾದಾರ,ನಬಿಲಾಲ ಮಕಾಂದಾರ,ನಾಗರಾಜ ಪ್ಯಾಪ್ಲಿ,ಕೃಷ್ಣಾ ಸುಬೇದಾರ,ಸಚಿನ ಕುಮಾರ ನಾಯಕ,ಅಯ್ಯಣ್ಣ ಹಾಲಬಾವಿ,ಹೆಚ್.ರಾಠೋಡ,ಮಲ್ಲಯ್ಯ ಕಮತಗಿ,ಹಣಮಂತ ಕಟ್ಟಿಮನಿ ಬೊಮ್ಮನಹಳ್ಳಿ,ಮಹಾಂತೇಶ ದೇವರಗೋನಾಲ ಕೊನೆಯದಾಗಿ ಅಧ್ಯಕ್ಷತೆ ವಹಿಸಿದ್ದ ರಾಜಾ ಮುಕುಂದ ನಾಯಕ ಮಾತನಾಡಿದರು.

ಸಭೆಯಲ್ಲಿ ರಮೇಶ ದೊರೆ ಆಲ್ದಾಳ,ರಾಜಾ ಪಾಮನಾಯಕ,ವಿಜಯಕುಮಾರ ಚಿಟ್ಟಿ,ರಾಜಾ ಪಿಡ್ಡನಾಯಕ,ಮಹೇಶ ಜಾಗಿರದಾರ,ದತ್ತು ಗುತ್ತೇದಾರ,ಪರಶುರಾಮ ಗುಡ್ಡಕಾಯಿ,ವಿಜಯಲಕ್ಷ್ಮೀ,ವೆಂಕಟೇಶ ಗುಡ್ಡಕಾಯಿ,ದುರಗಪ್ಪ ಡೊಣ್ಣಿಗೇರ,ಹಣಮಂತ್ರಾಯ ಅಮ್ಮಾಪುರ,ಕನಕಾಚಲ ಜಾಗಿರದಾರ,ಮಹಾಂತೇಶ ಸುಬೇದಾರ,ರಾಜಾ ಪಿಡ್ಡ ನಾಯಕ ಪ್ಯಾಪ್ಲಿ,ಡಾ. ಮಲ್ಲಿಕಾರ್ಜುನ ಕಲ್ಮನಿ,ಅಬ್ದುಲ್ ಗಫೂರ ನಗನೂರಿ,ರಾಮು ನಾಯಕ ಅರಳಳ್ಳಿ,ರಾಜಕುಮಾರ ಪಿಡಿಓ,ಗೋಪಾಲ ಜಾಗಿರದಾರ,ನಿಂಗಪ್ಪ ನಾಯಕ ವಾಗಣಗೇರ,ರವಿ ಬೆನಕನಳ್ಳಿ,ರಾಜು ಬನ್ನಿಗಿಡ,ಯಂಕೋಬ ಸತ್ಯಂಪೇಟೆ ಸೇರಿದಂತೆ ಅನೇಕರಿದ್ದರು.ಉಪನ್ಯಾಸಕ ಮಲ್ಲಿಕಾರ್ಜುನ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

3 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

3 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

3 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

20 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

22 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago