ಕಲಬುರಗಿ: ಗಂಗಾ ನಗರದ ನಿವಾಸಿಗಳ ಬಹುದಿನಗಳ ಬೇಡಿಕೆಯಾಗಿರುವ ಬಸ್ ಸಂಚಾರ ಕೊನೆಗೂ ಬುಧವಾರ ಆರಂಭಗೊಂಡಿತು.
ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಬಸ್ ಸಂಚಾರಕ್ಕೆ ಚಾಲನೆ ನೀಡಿ ಶುಭ ಹಾರಿಸಿದರು.
ಸೂಪರ್ ಮಾರ್ಕೆಟ್ ನಿಂದ ನ್ಯೂ ರಾಘವೇಂದ್ರ ಕಾಲೋನಿವರೆಗೆ ಹೊರಡಲಿದ್ದು, ವಾಯಾ ಲಾಲಗೇರಿ ಕ್ರಾಸ್ ಮತ್ತು ಗಂಗಾನಗರ ಮೂಲಕ ಸಂಚರಿಸಲಿದೆ. ಈ ಭಾಗದಲ್ಲಿ ಬಡವರು, ಕೂಲಿ ಕಾರ್ಮಿಕರು ಅಧಿಕವಾಗಿರುವುದರಿಂದ ಬಸ್ ಬೇಡಿಕೆ ತುಂಬಾ ಅಗತ್ಯವಾಗಿತ್ತು.
ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ಅವರು ಮುತುವರ್ಜಿ ವಹಿಸಿ ಕೆಕೆಆರ್‌ಟಿಸಿ ಡಿಸಿ ಅವರಿಗೆ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಬಸ್ ಸಂಚಾರಕ್ಕೆ ಚಾಲನೆ ದೊರೆತ್ತಿದ್ದು, ತಿಪ್ಪಣ್ಣಪ್ಪ ಕಮಕನೂರ ಅವರು ಬಸ್ ಗೆ ಪೂಜೆ ಸಲ್ಲಿಸಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡುತ್ತಿದ್ದಂತೆ ಜನ ಬಸ್ ನಲ್ಲಿ ಕುಳಿತು ಸಂಭ್ರಮಿಸಿರುವುದು ಕಂಡು ಬಂತು.
ಈ ಬಸ್ ಬೆಳಗ್ಗೆ 8 ಗಂಟೆಗೆ ಮತ್ತು 8.30ಕ್ಕೆ ಹಾಗೂ ಮಧ್ಯಾಹ್ನ 3.40ಕ್ಕೆ ಮತ್ತು 4 ಗಂಟೆಗೆ ಸಂಚರಿಸಲಿದೆ.
ಈ ಸಂದರ್ಭದಲ್ಲಿ ಕೆಕೆಆರ್ ಟಿಸಿ ಡಿಸಿ ನಾರಾಯಣಪ್ಪ ಕುರುಬರ, ಡಿಟಿಓ ಈಶ್ವರ ಹೊಸಮನಿ, ಕಂಟ್ರೋಲರ್ ದೇವರಾಜ, ಚಾಲಕ ಸುಭಾಷ, ನಿರ್ವಾಹಕ ಪ್ರಕಾಶ,
ಪ್ರಕಾಶ ಕಮಕನೂರ, ಸಂದೇಶ ಕಮಕನೂರ, ವಿಜಯಕುಮಾರ್ ಹದಗಲ, ಅಮೃತ ಡಿಗ್ಗಿ, ಸುಭಾಷ ಜಾಧವ, ಶಾಂತಪ್ಪ ಕೂಡಿ, ರಾಯಪ್ಪ ಹೊನಗುಂಟಿ, ಅಶೋಕ ಬಿದನೂರ ಸೇರಿದಂತೆ ಇತರರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…