ಬಿಸಿ ಬಿಸಿ ಸುದ್ದಿ

ಕೃಷಿ ವಿಸ್ತರಣಾ ಚಟುವಟಿಕೆಗಳ ಕುರಿತು ಸಭೆ

ಕಲಬುರಗಿ: ಐಸಿಎಆರ್ಕೃಷಿ ವಿಜ್ಞಾನ ಕೇಂದ್ರ, ವೈಜ್ಞಾನಿಕ ಸಲಹಾ ಸಮಿತಿ ಸಭೆಯಲ್ಲಿ ಜಿಲ್ಲೆಯ ಪ್ರಗತಿಗಾಗಿ ಹಾಗೂ 2024 ಕೃಷಿ ವಿಸ್ತರಣಾ ಕೈಗೊಳ್ಳಬೇಕದ ಚಟುವಟಿಕೆಗಳ ಸಭೆ ನಡೆಯಿತು.

ಕೃಷಿ ತಂತ್ರಜ್ಞಾನ ಪ್ರಯೋಗ ಕಾಲಕಾಲಕ್ಕೆ ಮಾರ್ಪಾಡು, ಗ್ರಾಮೀಣ ಕೃಷಿ ಮತ್ತು ಅರ್ಥಿಕ ಸ್ಥಿತಿ ಅಧ್ಯಯನ, ನೂತನ ಅವಿಷ್ಕಾರಗಳು, ತಂತ್ರಜ್ಞಾನಗಳು ರೈತರಿಗೆ ತಲುಪಿಸುವ ರೀತಿ ನೀತಿಗಳು, ಶುದ್ದ ಹಾಲು ಮತ್ತು ಬೇಸಿಗೆಯಲ್ಲಿ ಮೇವಿನ ಲಭ್ಯತೆ, ಬೆಳೆ ಸ್ಥಿತಿ, ಡ್ರೋನ್ ತಂತ್ರಜ್ಞಾನ, ಅಲಂಕಾರಿಕೆ ಮೀನುಗಾರಿಕೆ ಮತ್ತು ಜಲಾನಯನ ಮೀನುಗಾರಿಕೆ, ಪರಿಸರ ಮತ್ತು ಸಾಮಾಜಿಕ ಅರಣ್ಯ, ಮಣ್ಣು ನೀರು ಸಂರಕ್ಷಣೆ, ಸುರಕ್ಷಿತ ತೋಟಗಾರಿಕೆ, ತೊಗರಿ ಹೊಟ್ಟು ಸಾವಯವ, ತ್ಯಾಜ್ಯ ಸದ್ಬಳಕೆ, ಮಳೆಯಾಶ್ರಿತ ತೊಗರಿ ನೆಟೆರೋಗ ನರೋಧಕ ತೊಗರಿ ಬೀಜೋತ್ಪಾದನೆ, ರೈತ ಉತ್ಪಾದಕ ಸಂಸ್ಥೆಗಳಿಗೆ ಗುಣಮಟ್ಟದ ತರಬೇತಿ, ರೇಷ್ಮೆ ಕೃಷಿ, ಸೋಲಾರ ಸೌರಶಕ್ತಿ ಕೃಷಿ ಪಂಪುಗಳ ಬಳಕೆ, ಸೋಲಾರ ಬೇಲಿ, ಕೃಷಿ ಬೆಳೆಗಳಿಗೆ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಹಂದಿ ಕಾಟ ನಿರ್ವಹಣೆ, ಸ್ವಾವಲಂಬಿ ಕೃಷಿ, ತೇಲಾಂಗಾಣ ಮಾದರಿಯಲ್ಲಿ ಕರಿ ಎಳ್ಳು ಕೃಷಿ, ಸಜ್ಜೆ ಮತ್ತು ಸಿರಿಧಾನ್ಯಗಳು ಉತ್ಪನ್ನಗಳ ಬಳಕೆ, ಸೆಕೆಂಡರಿ ಕೃಷಿ, ಹೈಡ್ರೋಪೋನಿಕ್ಸ್, ಮಾರುಕಟ್ಟೆ ಮಾಹಿತಿ, ಕೃಷಿಯಲ್ಲಿ ಕೂಲಿ ಕಾರ್ಮಿಕರ ಕೊರತೆ ನೀಗಿಸಲು ಹೊಸ ಯಂತ್ರೋಪಕರಣಗಳ ಬಳಕೆ, ರೇಡಿಯೋ ಕೃಷಿ ಕಾರ್ಯಕ್ರಮಗಳಿಗೆ ತಜ್ಞರ ಸಮಿತಿ ರಚನೆ, ಹವಾಮಾನ ಸಲಹೆ ಆಧಾರಿತ ಗ್ರಾಮೀಣ ಕೃಷಿ ಕುರಿತು ಚರ್ಚೆ ನಡೆಯಿತು.

ಕಾರ್ಯಕ್ರಮದಲ್ಲಿ ಡಾ. ಎಸ್.ಬಿ. ಗೌಡಪ್ಪ, ವಿಸ್ತರಣಾ ನಿರ್ದೇಶಕರು, ಕೃ.ವಿ.ವಿ, ರಾಯಚೂರು ಇವರು ಅಧ್ಯಕ್ಷತೆಯನ್ನು ವಹಿಸಿ ನೂತನ ತಂತ್ರಜ್ಞಾನವನ್ನು ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಗ್ರಾಮಗಳಿಗೂ ಹಾಗೂ ವಿಸ್ತರಣಾ ಕಾರ್ಯಕರ್ತರಿಗೆ ತಲುಪಲು ಹೊಸ ಡಿಜಿಟಲ್ ಕೃಷಿ ತಂತ್ರಜ್ಞಾನದ ಮೂಲಕ ಆಧುನೀಕರಣಗೊಳಿಸಲಾಗುದೆಂದು ಹೇಳಿದರು.

ಆಟಾರಿ, ಬೆಂಗಳೂರಿನ ಮುಖ್ಯ ತಾಂತ್ರಿಕ ಅಧಿಕಾರಿಗಳಾದ ಡಾ. ಮಲ್ಲಿಕಾರ್ಜುನ ಬಿ. ಹಂಜಿ ರವರು ಮಾತನಾಡಿ ಕೃಷಿ ವಿಸ್ತರಣಾ ಚಟುವಟಿಕೆಗಳು ಕಾಲಕಾಲಕ್ಕೆ ಹವಾಮಾನಕ್ಕೆ ತಕ್ಕಂತೆ ಅವಿಷ್ಕಾರ ಮತ್ತು ತಂತ್ರಜ್ಞಾನಗಳ ಲಭ್ಯತೆ ಮೇರೆಗೆ ಗ್ರಾಮೀಣ ರೈತರಿಗೆ ತಲುಪಲಿ ಎಂದು ತಿಳಿಸಿದರು.ಡಾ. ರಾಜು ಜಿ. ತೆಗ್ಗೆಳ್ಳಿ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೆವಿಕೆ, ಕಲಬುರಗಿ ಇವರು ಪ್ರಗತಿ ವರದಿಯನ್ನು ಮಂಡಿಸಿದರು.

ಡಾ. ಬಿ.ಎಂ. ದೊಡಮನಿ, ಸಹ ಸಂಶೋಧನಾ ನಿರ್ದೇಶಕರು, ಡಾ. .ಆರ್. ಕುರಬರ್, ಸಹ ವಿಸ್ತರಣಾ ನಿರ್ದೇಶಕರು, ಡಾ. ಎಂ.ಎಂ. ಧಾನೋಜಿ, ಡೀನ್ (ಕೃಷಿ), ಡಾ. ಎನ್. . ಪಾಟೀಲ್, ವಿಸ್ತರಣಾ, ನಿರ್ದೇಶಕರು, ..ಪಮೀ.ವಿ.ವಿ, ಬೀದರ್, ಸೋಮಶೇಖರ ರೂಳಿ, ಕಾರ್ಯಕ್ರಮ ಸಂಯೋಜಕರು, ಆಕಾಶವಾಣಿ, ಕೃಷಿ ಇಲಾಖೆ, ಸಹಾಯಕ ಕೃಷಿ ಕೃಷಿ ನಿರ್ದೇಶಕ, ಡಾ. ಶರಣಕುಮಾರ, ಲೋಹಿತ್ ನಬಾರ್ಡ (ಡಿಡಿಎಮ್), ಉದ್ಯಮಿ, ಸಂತೋಷ ಜವಳಿ, ತೋಟಗಾರಿಕಾ ಅಧಿಕಾರಿ, ಮಹ್ಮದ್ ಸಮಿಯುದ್ದಿನ್, ಅತ್ಮ ಡಿಪಿಡಿ ನಿಖೀಲ್ ಕೆ, ಪಶು ಇಲಾಖೆಯ ಉಪ ನಿರ್ದೇಶಕರು, ಡಾ. ಎಸ್.ಡಿ. ಅವಟೆ, ಮೀನುಗಾರಿಕೆ ಇಲಾಖೆಯ ನಾಗರಾಜ್ ಎಸ್.ಆರ್, (ಉಪನಿರ್ದೇಶಕರು), ಡಾ. ಡಿ.ಕೆ. ಹಾದಿಮನಿ, ರೇಷ್ಮೆ ವಿಭಾಗದ ಮುಖ್ಯಸ್ಥರು, ಡಾ. ವಿ. ಹನುಮಂತ ನಾಯಕ್, ತಾಂತ್ರಿಕ ಅದಿಕಾರಿಗಳು, ಕೃ.ವಿ.ವಿ, ರಾಯಚೂರು, ಜಿ.ಕೆ ವೆಂಕಟೇಶ್, ವ್ಯವಸ್ಥಾಪಕರು (ಕೃಷಿ ಮಾರಾಟ ಮಂಡಳಿ), , ಸಂತೋಷ ಬುಡಗಿ, ಸಹಾಯಕ ಕಾರ್ಯದರ್ಶಿ, ಎಪಿಎಮ್ಸಿ, , ಬೀಜಾಧಿಕಾರಿಗಳಾದ ಬಸಯ್ಯ ಹಿರೇಮಠ, ಮುದುಕಪ್ಪಾ . ದೇವನಾಳ, ಉಪ ವ್ಯವಸ್ಥಾಪಕರು, ಕೆ.ಎಸ್.ಎಸ್.ಸಿ, ಪ್ರಗತಿಪರ ರೈತರಾದ ಲಕ್ಷ್ಮಿಕಾಂತ ಹಿಬಾರೆ, ಮಲ್ಲಿನಾಥ ಮೇಳಕುಂದಾ, ಶರಣಬಸಪ್ಪಾ ಪಾಟೀಲ್, ಬಾಬುರಾವ ಪಟ್ಟಣ ಮತ್ತು ಶಿವಶಣಪ್ಪ ಟೋಪನ್ ರವರು ಉಪಸ್ಥಿತರಿದ್ದರು. ಡಾ. ಜಹೀರ್ ಅಹೆಮದ್, ವಿಜ್ಞಾನಿ (ಸಸ್ಯರೋಗಶಾಸ್ತ್ರ) ಕವಿಕೆ, ಕಲಬುರಗಿ ರವರು ಕಾರ್ಯಕ್ರಮದ ವಂದನಾರ್ಪಣೆಯನ್ನು ಮಾಡಿದರು.

ವಿಜ್ಞಾನಿಗಳಾದ ಡಾ. ಯುಸುಪ್ಅಲಿ, . ನಿಂಬರಗಿ, ಡಾ. ಶ್ರೀನಿವಾಸ ಬಿ.ವಿ, ಡಾ. ಬಸವರಾಜ ಕೆ, ತಾಂತ್ರಿಕ ಅಧಿಕಾರಿಗಳಾದ ಸಿದ್ದು ಮಣಿಗೆ, ನಾಗಿಂದ್ರ ಬಡದಾಳಿ, ಶ್ರೀಮತಿ ಶಶಿಕಕಲಾ ಮೂಲಗೆ, ನಾಗಣ್ಣಾ, ನಿಕ್ರಾ ಯೋಜನೆಯ (ಎಸ್ಆರ್ಎಫ್), ವಿಜಯಸಿಂಗ್ ರವರು ಉಪಸ್ಥಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

5 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

15 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

15 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

15 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago