ಬಿಸಿ ಬಿಸಿ ಸುದ್ದಿ

ಸುರಪುರ ಸುತ್ತಮುತ್ತಲ ಗ್ರಾಮಗಳ ಗುಡ್ಡದಲ್ಲಿ ಚಿರತೆ ಇರುವ ಅನುಮಾನ; ಸಾರ್ವಜನಿಕರಲ್ಲಿ ಆತಂಕ

ಸುರಪುರ: ತಾಲೂಕಿನ ದೇವರಗೋನಾಲ ಸಿದ್ದಾಪುರ ಹಾಗೂ ಸುರಪುರಕ್ಕೂ ಹೊಂದಿಕೊಂಡಿರುವ ಗುಡ್ಡದಲ್ಲಿ ಚಿರತೆ ಬಂದಿದೆ ಎನ್ನುವ ಅನುಮಾನ ವ್ಯಕ್ತವಾಗಿದ್ದು ಸಾರ್ವಜನಿಕರಲ್ಲಿ ದೊಡ್ಡಮಟ್ಟದ ಆತಂಕಕ್ಕೆ ಕಾರಣವಾಗಿದೆ.

ಎರಡು ದಿನಗಳ ಹಿಂದೆಯೇ ಸಿದ್ದಪುರ ಹೊರವಲಯದ ದೊರೆಯ ಮನೆ ಮುಂದೆ ಕಟ್ಟಲಾಗಿದ್ದ ನಾಯಿ ಒಂದಕ್ಕೆ ಕಚ್ಚಿದೆ ಎಂದು ಹೇಳಲಾಗಿತ್ತು ಆದರೆ ಗುರುವಾರ ರಾತ್ರಿ ದೇವರಗೋನಲ ಬಳಿಯ ಜಮೀನಿನಲ್ಲಿ ಇರುವ ಮನೆಯ ಮುಂದೆ ಕಟ್ಟಿ ಹಾಕಲಾಗಿದ್ದ ನಾಯಿಯನ್ನು ಚಿರತೆ ಗುಡ್ಡದಲ್ಲಿನ ತಿಮ್ಮಪ್ಪನ ಗವಿಯಲ್ಲಿ ತಿಂದು ಹಾಕಿದೆ.

ಇದನ್ನು ತಿಳಿದು ನಾಯಿಯ ಮಾಲೀಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಅಧಿಕಾರಿಗಳು ಹಾಗೂ ಅನೇಕ ಮುಖಂಡರು ದೇವರಗೋನಾಲ ಬಳಿಯ ಗುಡ್ಡದಲ್ಲಿ ಚಿರತೆಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಅರಣ್ಯ ಅಧಿಕಾರಿ ಬುರಾನುದ್ದಿನ್ ಶಹಾ ಮಾತನಾಡಿ ಎರಡು ದಿನದ ಹಿಂದೆ ಚಿರತೆ ಬಂದಿದೆ ಎಂದಾಗ ಸಿದ್ದಾಪುರದಲ್ಲಿ ಧ್ವನಿವರ್ಧಕದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿತ್ತು, ಈಗ ಚಿರತೆ ಇರುವ ಬಗ್ಗೆ ಅನುಮಾನ ದಟ್ಟವಾಗಿದ್ದು ನಮ್ಮ ಮೇಲಾಧಿಕಾರಿಗಳಿಗೆ ಮಾಹಿತಿಯನ್ನು ನೀಡಿ ಅವರ ನಿರ್ದೇಶನದಂತೆ ಕ್ಯಾಮರಾಗಳನ್ನು ಅಳವಡಿಸಿ ಡ್ರೋನ್ ಮೂಲಕ ಪತ್ತೆಹಚ್ಚಲು ಕಾರ್ಯಾಚರಣೆ ಮಾಡುವುದಾಗಿ ತಿಳಿಸಿದ್ದಾರೆ.

ಸ್ಥಳದಲ್ಲಿದ್ದ ಮುಖಂಡರು ಮಾತನಾಡಿ ನಿರ್ಲಕ್ಷಿಸದೆ ಕೂಡಲೇ ಕಾರ್ಯಾಚರಣೆಯನ್ನು ನಡೆಸಿ ಚಿರತೆ ಹಿಡಿಯುವ ಕೆಲಸ ಆಗಬೇಕು ಯಾಕೆಂದರೆ ಅಡವಿಯಲ್ಲಿ ಜನರು ಕೆಲಸ ಕಾರ್ಯಗಳಿಗೆ ಹೋಗುತ್ತಾರೆ. ಕುರಿ ಮೇಯಿಸಲು ದನಕರುಗಳ ಕಾಯಲು ಹೋಗುತ್ತಾರೆ ಅಂತವರ ಮೇಲೆ ಚಿರತೆ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಶರಣಪ್ಪ ಕುಂಬಾರ್, ಸೇರಿದಂತೆ ಮುಖಂಡರಾದ ವೆಂಕಟೇಶ ಬೇಟೆಗಾರ ರಮೇಶ ದೊರೆ ಗೋಪಾಲ ದೊರೆ ವಿನೋದ ನಾಯಕ ವಿಜಯ ನಾಯಕ ಶಂಕರಗೌಡ ಭೀಮಣ್ಣ ನಬಿಲಾಲ ಸೇರಿದಂತೆ ಅನೇಕರು ಇದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

40 mins ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

11 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

11 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

11 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago