ಸುರಪುರ:ಮಹಿಳೆ ಇಂದು ಎಲ್ಲಾ ರಂಗದಲ್ಲೂ ಮುಂದಿದ್ದು ಸಾಧನೆ ಮಾಡಿದ್ದಾಳೆ,ಸಾವಿತ್ರಿಬಾಯಿ ಫುಲೆ ಇಂದ ಮಹಿಳಾ ಶಿಕ್ಷಣಕ್ಕೆ ಆದ್ಯತೆ ಸಿಕ್ಕಿದ್ದು ಇಂದು ಮಹಿಳೆ ಅಬಲೆಯಲ್ಲ ಸಬಲೆಯಾಗಿದ್ದಾಳೆ ಎಂದು ಕನ್ನಡ ಸಾಹಿತ್ಯ ಸಂಘದ ಉಪಾಧ್ಯಕ್ಷೆ,ವಕೀಲೆ ಜಯಲಲಿತಾ ವಿ ಪಾಟೀಲ್ ಮಾತನಾಡಿದರು.
ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಬಣಗಾರ ಫೌಂಡೇಶನ್ ಸುರಪುರ ಹಾಗೂ ಕನ್ನಡ ಸಾಹಿತ್ಯ ಸಂಘ ಸುರಪುರ ವತಿಯಿಂದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸಾಧಕ ಮಹಿಳೆಯರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ,ಮಹಿಳೆಯರು ಹೆಚ್ಚು ಶಿಕ್ಷಣವನ್ನು ಪಡೆಯಬೇಕು,ಇಂದು ಎಲ್ಲಾ ರಂಗದಲ್ಲೂ ಮಹಿಳೆಯರಿಗೆ ವಿಫುಲ ಅವಕಾಶಗಳಿದ್ದು ಕಾನೂನುಗಳನ್ನು ಬಳಸಿಕೊಂಡು ಮುಂದೆ ಬರಬೇಕು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ರಾಣಿ ಪುಷ್ಪಲತಾ ರಾಜಾ ಮುಕುಂದ ನಾಯಕ ಉದ್ಘಾಟಿಸಿದರು,ಮುಖ್ಯ ಅತಿಥಿಗಳಾಗಿ ಸುನಂದಾ ಮೌನೇಶ ನಾಲವಾರ,ಶಕುಂತಲಾ ಶ್ರೀನಿವಾಸ ಜಾಲವಾದಿ,ಅರುಣಾ ರಮೇಶ ಚಿನ್ನಾಕಾರ,ಬೋರಮ್ಮಾ ಎಸ್.ಯಾಳವಾರ,ಸುಜಾತಾ ಸಾಯಿಬಣ್ಣ ಪುರ್ಲೆ,ಸುವರ್ಣಾ ಜಾನ್ ದೊಡ್ಮನಿ,ವಂದನಾ ವಿಜಯಕುಮಾರ ಬಣಗಾರ,ಸೈಯ್ಯದಾಬಿ ಬಿ.ಜಮಾದಾರ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿದ್ದ ಲಿಂಗಸೂಗುರಿನ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಉಪಾಧ್ಯಕ್ಷರಾದ ಸಂಗೀತಾ ಮಜ್ಜಿಗೆ ಮಾತನಾಡಿ,ಮನುಸ್ಮøತಿ,ವೇದಗಳ ಕಾಲದಿಂದಲೂ ಮಹಿಳೆಗೆ ಸ್ವಾತಂತ್ರ್ಯವಿತ್ತು,ಇಂದುಕೂಡ ಮಹಿಳೆ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ,ಅದಕ್ಕೆ ಇಂದು ದ್ರೌಪದಿ ಮುರ್ಮ ಅವರು ರಾಷ್ಟ್ರಪತಿಯಾಗಿರುವುದು,ಸುಧಾ ಮೂರ್ತಿಯವರು ರಾಜ್ಯಸಭಾ ಸದಸ್ಯರಾಗಿರುವುದು,ಅಷ್ಟೆ ಯಾಕೇ ಇಂದು ವೇದಿಕೆಯಲ್ಲಿರುವ ಎಲ್ಲಾ ಮಹಿಳೆಯರು ಒಂದೊಂದು ರಂಗದಲ್ಲಿ ಸಾಧನೆ ಮಾಡಿದವರೆ ಆಗಿದ್ದೇವೆ,ಇನ್ನೂ ಹೆಚ್ಚೆಚ್ಚು ಸಾಧನೆ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಸಾಧಕ ಮಹಿಳೆಯರಾದ ಸುರಪುರ ನಗರಸಭೆ ಪೌರಾಡಳಿತ ಇಲಾಖೆಯ ತಿಪ್ಪಮ್ಮ ಶರಣಗೌಡ ಬಿರಾದಾರ,ಸಾಹಿತ್ಯ ಕ್ಷೇತ್ರದ ಕಲ್ಲದೇವನಹಳ್ಳಿಯ ಶರಣಮ್ಮ ಹೆಚ್.ದೊಡ್ಮನಿ,ಸಹಕಾರ ಕ್ಷೇತ್ರದಲ್ಲಿ ಸುರಪುರದ ಅನ್ನಪೂರ್ಣ ವಿರೇಶ ಜಕರಡ್ಡಿ,ಆರೋಗ್ಯ ಇಲಾಖೆಯ ಸುರಪುರ ನಗರದ ರಂಗಂಪೇಟೆಯ ಭಾಗ್ಯಶ್ರೀ ಚನ್ನಪ್ಪ ಎಲಿಗಾರ,ಕಂದಾಯ ಇಲಾಖೆಯ ಮಲ್ಲಮ್ಮ,ಭರತನಾಟ್ಯ ಕಲಾವಿದೆ ಯಶಸ್ವಿ ಭವಾನಿ ಭಟ್ಟ,ಶಿಕ್ಷಣ ಕ್ಷೇತ್ರದ ದೇವಾಪುರದ ಆರತಿ ಎಮ್,ತಿಮ್ಮಾಪುರ ಶಿಕ್ಷಕಿ ಸೈಯದ ಸಬಿಹಾ ಬಾನು,ಸಮಾಜ ಸೇವೆಯಲ್ಲಿ ಸವಿತಾ ಬಸವರಾಜ ಬಿರಾದಾರ ಹಾಗೂ ಸಂಗೀತ ಕ್ಷೇತ್ರದಲ್ಲಿ ಪದ್ಮಾಕ್ಷಿ ಬಶೆಟ್ಟಿ ಇವರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.ಅಲ್ಲದೆ ಇದೇ ಸಂದರ್ಭದಲ್ಲಿ ಗಿನ್ನಿಸ್ ದಾಖಲೆ ಸೇರಿದ ಲಿಂಗಸೂಗುರಿನ ಡಾ:ವೀರಭದ್ರ ವಿರೇಶ ಮಜ್ಜಿಗೆಯನ್ನು ವಿಶೇಷವಾಗಿ ಸನ್ಮಾನಿಸಿದರು.ವಿವಿಧ ಶಾಲಾ ಮಕ್ಕಳಿಂದ ಭರತನಾಟ್ಯ ಹಾಗೂ ಮೊಹನ ಮಾಳದಕರ್,ಮಹಾಂತೇಶ ಶಹಾಪುರಕರ್ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಲತಾಬಾಯಿ ಅಮೃತಲಾಲ್ ಜೈನ್,ರೂಪಾ ಗಂಗಾಧರ ರುಮಾಲ್ ಹಾಗೂ ನಿರ್ಮಲಾ ಗಂಗಪ್ಪ ಗುಳಗಿ ಉಪಸ್ಥಿತರಿದ್ದರು.ಲಲಿತಾ ಯಾದವ್,ಸೌಮ್ಯ ತಿರ್ಲೆ ಹಾಗೂ ಜ್ಯೋತಿ ಕಲಾಲ್ ಅವರು ನಿರೂಪಿಸಿದರು,ಪ್ರಕಾಶ ಬಣಗಾರ ಸ್ವಾಗತಿಸಿದರು,ವಿಜಯಕುಮಾರ ಬಣಗಾರ ವಂದಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಬಸವರಾಜ ಜಮದ್ರಖಾನಿ,ಶ್ರೀನಿವಾಸ ಜಾಲವಾದಿ,ನಬಿಲಾಲ ಮಕಾಂದಾರ,ಶರಣಬಸಪ್ಪ ಯಾಳವಾರ,ಹೆಚ್.ರಾಠೋಡ ಸೇರಿದಂತೆ ನೂರಾರು ಜನ ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…