ಹುಮ್ನಾಬಾದ್ ಬೇಸ್ – ರಾಮ ಮಂದಿರ ಮಧ್ಯೆ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಚಾಲನೆ

ಕಲಬುರಗಿ: ಮೋದಿಯವರ ಆಡಳಿತದಲ್ಲಿ ಕಲ್ಬುರ್ಗಿ ಈಗ ನಂಬರ್ ಒನ್ ಸ್ಥಾನ ಪಡೆಯುತ್ತಿದ್ದು ಮತ್ತೊಮ್ಮೆ ಮೋದಿ ಅವರು ಪ್ರಧಾನಿಯಾಗಲು ಜನತೆ ಸಾಥ್ ನೀಡಬೇಕಾಗಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಕರೆ ನೀಡಿದರು.

ಕಲ್ಬುರ್ಗಿಯ ರಿಂಗ್ ರಸ್ತೆಯ ವೀರಶೈವ ಕಲ್ಯಾಣ ಮಂಟಪದ ಹತ್ತಿರ ಇಂದು ಹುಮ್ನಾಬಾದ್ ಬೇಸ್ ನಿಂದ ರಾಮಮಂದಿರದ ವರೆಗಿನ ಸರ್ವಿಸ್ ರಸ್ತೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಭಾರತವು ಮುಂದಿನ ಐದು ವರ್ಷಗಳ ಕ್ರಿಯಾಯೋಜನೆ ಈಗಾಗಲೇ ಸಿದ್ಧಪಡಿಸಿಕೊಂಡಿದ್ದು ಇದರಲ್ಲಿ ಕಲಬುರ್ಗಿ ಭಾಗಕ್ಕೂ ಅನೇಕ ಯೋಜನೆಗಳನ್ನು ಒಳಪಡಿಸಲಾಗಿದೆ ಎಂದರು.

ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಸುಮಾರು 57 ಕೋಟಿ ರೂಪಾಯಿ ಮಂಜೂರಾಗಿದ್ದು ಇನ್ನೂ ಅವಶ್ಯಕತೆ ಇರುವ 28 ಕೋಟಿ ರೂ. ನೀಡಲು ಇಲಾಖೆ ಮುಂದಾಗಿದೆ. ಮೋದಿ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಕ್ಕೆ ಹಣಕಾಸಿನ ಬರ ಇಲ್ಲ. ಸಾಮಾನ್ಯ ಜನರ, ವೃದ್ಧರ, ಮಹಿಳೆಯರ ಪಾಲಿಗೆ ಸರ್ವಿಸ್ ರಸ್ತೆಯು ಅತ್ಯಂತ ಉಪಯುಕ್ತವಾಗಿದ್ದು ಜೀವ ಹಾನಿ ತಡೆದು ಸುರಕ್ಷಿತ ಪ್ರಯಾಣಕ್ಕೆ ಅನುವು ಮಾಡಿಕೊಡಲು ಸರ್ವೀಸ್ ರಸ್ತೆ ಅತ್ಯಂತ ಉಪಯುಕ್ತವಾಗಿದೆ ಎಂದರು.

ಸತತ ಪ್ರಯತ್ನದಿಂದ ಸುಮಾರು 10 ಇಲಾಖೆಗಳಿಂದ ಅಡೆ ತಡೆ ರಹಿತ ಅನುಮತಿ ಪತ್ರ (ಎನ್ ಓ ಸಿ) ಪಡೆದು ಕೆಲಸ ಈಗ ಪ್ರಾರಂಭಗೊಂಡಿದೆ. ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಹಾಗೂ ಮೇಯರ್ ವಿಶಾಲ್ ದರ್ಗಿ ಸಹಕಾರದಿಂದ ಇದು ಸಾಧ್ಯವಾಗಿದ್ದು ಉತ್ತಮ ಕೆಲಸಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

ಸ್ವತಂತ್ರ ಭಾರತದಲ್ಲಿ ಕಾಂಗ್ರೆಸ್ ನವರ 65 ವರ್ಷಗಳ ಆಡಳಿತ ಹಾಗೂ ಮೋದಿಯವರ ಹತ್ತು ವರ್ಷಗಳ ಆಡಳಿತವನ್ನು ತುಲನೆ ಮಾಡಿದರೆ ನಿಜ ಏನೆಂದು ತಿಳಿದು ಬರುತ್ತದೆ. ಈ ಬಗ್ಗೆ ಕಾಂಗ್ರೆಸ್ಸಿನವರು ಮುಕ್ತ ಚರ್ಚೆಗೆ ಆಹ್ವಾನಿಸಿದರೆ ಚರ್ಚಿಸಲು ನಾನು ಸಿದ್ಧ ಎಂದು ಅವರು ಸವಾಲೆಸೆದರು.

ಒಂದು ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬರಲಿರುವ ಮೆಗಾ ಜವಳಿ ಪಾರ್ಕ್ ಗೆ ನಾಳೆ ಎಸ್ ವಿ ಪಿ ಗೆ(SPV – Special Purpose Vehicle) ಅನುಮತಿ ಸಿಗಲಿದೆ. ಚೆನ್ನೈ – ಸೂರತ್ ಭಾರತ್ ಮಾಲಾ ಗ್ರೀನ್ ಫೀಲ್ಡ್ ರಸ್ತೆ ನಿರ್ಮಾಣವಾಗಿತ್ತಿದೆ.

ಅನಿವಾರ್ಯವಾದರೆ ಇದರಲ್ಲಿ ವಿಮಾನವನ್ನೂ ಇಳಿಸಲು ಸಾಧ್ಯವಾಗಬಲ್ಲ ರಸ್ತೆಯು ನಿರ್ಮಾಣ ಹಂತದಲ್ಲಿದೆ, ಸಿಂಗಾಪುರ ಮಾದರಿ ಸರ್ಕಲ್ ತಲೆಎತ್ತಲಿದೆ. ಸ್ವಾತಂತ್ರ್ಯ ನಂತರ ಇದೇ ಮೊಟ್ಟಮೊದಲ ಬಾರಿಗೆ ಕಲಬುರಗಿ- ಬೆಂಗಳೂರು ನಡುವೆ ನೂತನ ರೈಲು ಓಡಾಟ ಪ್ರಾರಂಭಿಸಿದ್ದು ಸಾವಿರ ಜನರು ಹೊಸ ರೈಲಿನಲ್ಲಿ ಪ್ರಯಾಣಿಸುವುದನ್ನು ನೋಡಿದಾಗ ಇದೊಂದು ದಾಖಲೆ ಮತ್ತು ಸಂತಸದ ವಿಷಯ ಎಂದರು. ವಂದೇ ಭಾರತ್ ರೈಲು ಮಾರ್ಚ್ 12 ರಿಂದ ಆರಂಭವಾಗುತ್ತಿದ್ದು ಒಂದೇ ದಿನದಲ್ಲಿ ಬೆಂಗಳೂರಿಗೆ ತೆರಳಿ ಕೆಲಸ ಮುಗಿಸಿ ಮತ್ತೆ ಉದ್ಯಾನ ಎಕ್ಸ್ ಪ್ರೆಸ್ ರೈಲಿನಲ್ಲಿ ಮರಳಿ ಬರುವ ಅವಕಾಶವಿದೆ.

ಮಾರ್ಚ್ 12ರಂದು ಬೆಳಿಗ್ಗೆ ಮೋದಿಯವರು ವಂದೇ ಭಾರತ್ ರೈಲಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕಲಬುರಗಿ ರೈಲು ನಿಲ್ದಾಣಕ್ಕೆ ಆಗಮಿಸಬೇಕು ಎಂದು ವಿನಂತಿ ಮಾಡಿದರು.

‘ಅಬ್ ಕೀ ಬಾರ್ ಚಾರ್ ಸೌ ಪಾರ್’ ಸ್ಥಾನಗಳಿಸಲು ಮೋದಿ ಅವರು ಮಾಡಿದ ಕೆಲಸ ಕಾರ್ಯಗಳನ್ನು ಜನರ ಬಳಿಗೆ ಮುಟ್ಟಿಸಬೇಕು ಮುಂದಿನ 40 ದಿನಗಳಲ್ಲಿ ಅವಿಶ್ರಾಂತವಾಗಿ ಎಲ್ಲರೂ ಕೆಲಸ ಮಾಡಿ ಭಾರತಕ್ಕೆ ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿಯವರನ್ನಾಗಿ ಮಾಡಬೇಕಾಗಿದೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರೂ ಒಗ್ಗಟ್ಟಾಗಬೇಕಾಗಿದೆ.

ಹಿಂದೂ ಸನಾತನ ಧರ್ಮವನ್ನು ಹೀಯಾಳಿಸುವವರು ದೇಶದ್ರೋಹಿಗಳಾಗಿದ್ದು 500 ವರ್ಷಗಳ ಕರಾಳ ಇತಿಹಾಸ ತೊಡೆದು ಹಾಕಿ ರಾಮ ಮಂದಿರ ನಿರ್ಮಿಸಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ. ಟಿವಿಯಲ್ಲಿ ಮೋದಿಯವರ ಮುಖ ದರ್ಶನ ಮಾಡಿದರೆ ಅಪಶಕುನ ಎಂಬ ಹೇಳಿಕೆಯನ್ನು ನೀಡಿದ ಅಪಪ್ರಬುದ್ಧ ರಾಜಕಾರಣಿಯ ಅವಿವೇಕತನದ ಹೇಳಿಕೆಯು ಖಂಡನೀಯ ಅಂಥವರಿಗೆ ತಕ್ಕ ಪಾಠ ಕಲಿಸಬೇಕಾಗಿದೆ. ರಾಜ್ಯದಲ್ಲಿ ವಿಜಯೇಂದ್ರ ಅವರು ಬಿಜೆಪಿಯ ಸಾರಥ್ಯ ಹಿಡಿದ ಮೇಲೆ ಪಕ್ಷ ಪ್ರಬಲ ಶಕ್ತಿಯಾಗಿ ಬೆಳೆದಿದೆ. ಈ ಬಾರಿ 28 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಜಯಶಾಲಿಗಳಾಗಲಿದ್ದಾರೆ ಎಂದು ಜಾಧವ್ ಹೇಳಿದರು.

ಈ ಕಾರ್ಯಕ್ರಮದಲ್ಲಿ ಜೆಡಿಎಸ್ ನ ಜಿಲ್ಲಾಧ್ಯಕ್ಷರಾದ ಬಾಲರಾಜ ಗುತ್ತೇದಾರ್,ಯುವ ಮುಖಂಡರಾದ ಚಂದು ಪಾಟೀಲ್ ಮಾತನಾಡಿ ಶುಭ ಕೋರಿದರು. ವಿಧಾನ ಪರಿಷತ್ ಸದಸ್ಯರಾದ ಬಿಜಿ ಪಾಟೀಲ್, ಮೇಯರ್ ವಿಶಾಲ ದರ್ಗಿ, ಬಿಜೆಪಿಯ ಜಿಲ್ಲಾಧ್ಯಕ್ಷರಾದ ಶಿವರಾಜ ಪಾಟೀಲ್ ರದ್ದೇವಾಡಗಿ, ಉಪಮೇಯರ್ ಶಿವಾನಂದ ಪಿಸ್ತಿ, ರಾಜಶೇಖರ್ ಮಹಾಗಾಂವ, ರವಿರಾಜ್ ಕೊರವಿ, ಕೃಷ್ಣಾ ರೆಡ್ಡಿ, ಉಮೇಶ್ ಪಾಟೀಲ, ಶಾಂತಾಬಾಯಿ ಮಂಜುನಾಥ ಕಳಸ್ಕರ್ ರೇವಣಸಿದ್ದಪ್ಪ, ಶಂಕರ್, ಸಿಂಡಿಕೇಟ್ ಸದಸ್ಯ ರಾಘವೇಂದ್ರ ಮತ್ತಿತರ ಅನೇಕರು ಹಾಜರಿದ್ದರು.

emedialine

Recent Posts

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

4 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

4 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

6 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

18 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

20 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

20 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420