ಕಲಬುರಗಿ: ವಿವಿಧ ಬಗೆಯ ವಿಕಲಚೇತನ ವ್ಯಕ್ತಿಗಳನ್ನು ರಾಷ್ಟ್ರದ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಸಕ್ಷಮ ಎಂಬುವ ರಾಷ್ಟ್ರೀಯ ಸಂಘಟನೆಯನ್ನು ನಾಗಪುರನಲ್ಲಿ 2008 ರಲ್ಲಿ ಸ್ಥಾಪಿಸಲಾಗಿದೆ. ಇದು ವಿಶೇಷಚೇತನ ಬಂದುಗಳ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ರಾಷ್ಟ್ರೀಯ ಸಂಘಟನೆ. ಪ್ರತಿಯೊಬ್ಬರಲ್ಲೂ ಪ್ರೇರಣಾ ಶಕ್ತಿ ತುಂಬುವುದೇ ಸಕ್ಷಮದ ಪ್ರಮುಖ ದ್ಯೇಯ. ಸಮದೃಷ್ಟಿ ಕ್ಷಮತಾ ವಿಕಾಸ ಹಾಗೂ ಅನುಸಂದಾನ ಮಂಡಲ (ಸಕ್ಷಮ)ದ ಕಲಬುರಗಿ ಜಿಲ್ಲಾ ಶಾಖೆಯನ್ನು ಭಾನುವಾರ ನಗರದ ಕನ್ನಡ ಭವನದಲ್ಲಿ ಕಲಬುರಗಿ ಮಹಾನಗರ ಪಾಲಿಕೆಯ ಉಪಮಹಾಪೌರರಾದ ಶಿವಾನಂದ ಪಿಸ್ತಿ ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಲಬುರಗಿ ಮಹಾನಗರ ಪಾಲಿಕೆಯ ಉಪಮಹಾಪೌರರಾದ ಶಿವಾನಂದ ಪಿಸ್ತಿ ಅವರು ಅಂಗವಿಕಲರು ಸಮಾಜಕ್ಕೆ ಹೊರೆಯಲ್ಲ, ದೇಶದ ಆಸ್ತಿ ಎಂದು ಈಗಾಗಲೇ ಸಾಧಿಸಿ ತೋರಿಸಿದ್ದಾರೆ. ವಿಕಲಚೇತನರಿಗೆ ಸಾಧಿಸುವ ಛಲ ದೇವರು ಕೊಟ್ಟಿರುತ್ತಾನೆ. ವಿಕಲಚೇತನರು ಸ್ವಾಭಿಮಾನದ ಜನರು ಅವರ ದೈರ್ಯ ಮೆಚ್ಚಬೇಕು. ವಿಶೇಷಚೇತನರ ಸಮಗ್ರ ಅಭಿವೃದ್ಧಿಗಾಗಿ ಸಂಘಟನೆ ಬಹಳ ಮುಖ್ಯವಾಗಿದೆ. ವಿಕಲಚೇನರಿಗೆ ಅನುಕಂಪದ ಅಗತ್ಯವಿಲ್ಲ, ಸೂಕ್ತ ಅವಕಾಶ ನೀಡಿದರೆ ಸಾಕು ಎಂದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ “ಸಕ್ಷಮ” ಉತ್ತರ ಕರ್ನಾಟಕ ಪ್ರಾಂತದ ಅಧ್ಯಕ್ಷ ಸಿಎ ಎಸ್.ಬಿ ಶೆಟ್ಟಿ ಜನರಲ್ಲಿ ತ್ಯಾಗದ ಮನೋಭಾವನೆ ಹೆಚ್ಚಾಗಬೇಕು. ಅಂಗಾಂಗ ದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಬದುಕಿರುವ ತನಕ ರಕ್ತದಾನ- ಬದುಕಿನ ನಂತರ ನೇತ್ರದಾನ ಮಾಡುವ ಮೂಲಕ ಇನ್ನೊಬ್ಬರ ಬಾಳಿಗೆ ಬೆಳಕಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಕಲಬುರಗಿ ಮಹಾನಗರ ಪಾಲಿಕೆಯ ಸದಸ್ಯ ಸಚಿನ ಕಡಗಂಚಿ, ಸುನಿಲಕುಮಾರ ವಂಟಿ, ಕಸಾಪ ಕಲಬುರಗಿ ಜಿಲ್ಲಾ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಸಕ್ಷಮ ಉತ್ತರ ಕರ್ನಾಟಕ ಪ್ರಾಂತದ ಅಧ್ಯಕ್ಷ ಸಿಎ ಎಸ್.ಬಿ ಶೆಟ್ಟಿ ಹಾಗೂ ಕಾರ್ಯದರ್ಶಿ ಡಾ.ಸುಭಾಸ ಬಬ್ರುವಾಡ ಅವರ ಸಮ್ಮುಖದಲ್ಲಿ ಕಲಬುರಗಿ ಜಿಲ್ಲಾ ಶಾಖೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಬಸವರಾಜ ಹೆಳವರ ಯಾಳಗಿ, ಉಪಾಧ್ಯಕ್ಷರಾಗಿ ಶಶಿಕಾಂತ ಮೇತ್ರೆ, ಶಾರದ ಕಂದಗೂಳೆ, ಶಾಂತಪ್ಪ ಕ್ಯಾತನ್, ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಕುಮಸಿ, ಜಂಟಿ ಪ್ರಧಾನ ಕಾರ್ಯದರ್ಶಿಯಾಗಿ ನಿತಿನ ರಂಗದಾಳ, ಖಜಾಂಚಿಯಾಗಿ ರಾಚಯ್ಯ ಸ್ವಾಮಿ ಅಲ್ಲೂರ್, ಸಹ-ಖಜಾಂಚಿಯಾಗಿ ಮಂಜುಳಾ ದಾವಣಗೆರೆ, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಕಾಂತ ಬಿರಾದರ, ಚನ್ನವಿರಯ್ಯ ಸ್ವಾಮಿ, ಜಂಟಿ-ಸಂಘಟನಾ ಕಾರ್ಯದರ್ಶಿಯಾಗಿ ನಾಗಯ್ಯ ಸ್ವಾಮಿ, ಭೀಮಷಾ ಘಾಳೆ, ಆಹ್ವಾನಿತ ಸದಸ್ಯರಾಗಿ ಡಾ.ಸುನಿಲಕುಮಾರ ಒಂಟಿ, ಹೆಚ್.ಬಿ ಪಾಟೀಲ್, ಡಾ.ಲೋಕೆಶ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಂತೋಷ ಚನ್ನಪ್ಪಗೋಳ, ಸಿದ್ದರಾಮ ತಳವಾರ, ಅಸ್ಲಾಂ ಶೇಖ್, ಮಲ್ಲಿಕಾರ್ಜುನ ಅಣಕಲ, ಗೋಪಾಲ ಕಟ್ಟಿಮನಿ, ಸಿದ್ದಣ್ಣ ಬರಡಿ, ವಿಜಯಕುಮಾರ ಮಾಂಜ್ರೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ರಾಚಯ್ಯ ಸ್ವಾಮಿ ಅಲ್ಲೂರ್, ನಿರೂಪಿಸಿದರು. ಶಾಂತಪ್ಪ ಕ್ಯಾತನ್ ಪ್ರಾರ್ಥಿಸಿದರು, ಮಲ್ಲಿಕಾರ್ಜುನ ಕುಮಸಿ ಸ್ವಾಗತಿಸಿದರು.
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…