ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ : ಶಂಕರ ಬೆಳ್ಳುಬ್ಬಿ

ಕೊಪ್ಪಳ: ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ ವಿದ್ಯಾರ್ಥಿಗಳು ಉತ್ತಮವಾದ ಶಿಕ್ಷಣ ಪಡೆದು ಒಳ್ಳೆಯ ಸಂಸ್ಕಾರ, ಮೌಲ್ಯ ಪಡೆಯುವುದರ ಮೂಲಕ ತಂದೆ ತಾಯಿಯವರಿಗೆ ಉತ್ತಮ ಮಕ್ಕಳಾಗಿ ಬೆಳೆಯಬೇಕು ಅಂದಾಗ ನಮ್ಮ ಬದುಕು ಸಾರ್ಥಕವಾಗುವುದು ಎಂದು ಹುಬ್ಬಳ್ಳಿ ಧಾರವಾಡದ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾದ ಶಂಕರ ಬೆಳ್ಳುಬ್ಬಿ ಸಲಹೆ ನೀಡಿದರು.

ಅವರು ನಗರದ ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಜೀವನದರ್ಶನ ವಿಶೇಷ ಮೌಲ್ಯಾಧಾರಿತ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಭಾಗವಹಿಸಿ ಉಪನ್ಯಾಸ ನೀಡಿ ಮಾತನಾಡಿ, ವಿದ್ಯಾರ್ಥಿ ಜೀವನ ಸದಾ ಅಧ್ಯಯನಶೀಲತೆಯಿಂದ ಕೂಡಿರಬೇಕು. ಉತ್ತಮ ಪ್ರಯತ್ನ ಮತ್ತು ಜ್ಞಾನದ ಹಸಿವು ಇದ್ದಾಗ ಮಾತ್ರ ಉನ್ನತವಾದ ಯಶಸ್ಸು ಗಳಿಸಲು ಸಾಧ್ಯಾವಾಗುವುದು. ನಾವು ಕೇವಲ ಯಶಸ್ಸು ಗಳಿಸಲು ವ್ಯಕ್ತಿಗಳಿಗೆ ಗುಣಗಾನ ಮಾಡುವ ವ್ಯಕ್ತಿಗಳಾಗಿರದೇ ನಾವು ಸಹ ಜೀವನದಲ್ಲಿ ಯಶಸ್ಸು ಗಳಿಸಿ ಪ್ರಶಂಸಗೆ ಒಳಗಾಗುವ ವ್ಯಕ್ತಿಗಳಾಗಬೇಕು. ಬಡತನ ಎಂದೂ ಸಹ ಅಧ್ಯಯನಕ್ಕೆ ಅಡ್ಡಿ ಬರುವುದಿಲ್ಲ. ಬಡತನವನ್ನು ಬಂಡವಾಳವಾಗಿಸಿಕೊಂಡು ನಾವು ಮೆಟ್ಟಿ ನಿಲ್ಲಬೇಕು. ಸ್ವನಂಬಿಕೆ, ಸತತವಾದ ಕಠಿಣ ಪರಿಶ್ರಮದಿಂದ ಎಂತಹ ಯಶಸ್ಸು ಕೂಡ ಸಾಧ್ಯ. ಓದಿನ ಮಾರ್ಗಗಳನ್ನು ಸರಿಯಾಗಿ ಅರಿತು ಸಾಧನೆಗೈಯಬೇಕು. ಎಲ್ಲ ಸೌಲಭ್ಯಗಳಿದ್ದೂ ಸಾಧನೆ ಮಾಡುವುದು ದೊಡ್ಡ ಸಾಧನೆ ಅಲ್ಲ. ಸೌಲಭ್ಯದಿಂದ ವಂಚಿತರಾಗಿದ್ದರೂ ಸಮಸ್ಯೆಗಳನ್ನು ಸ್ವೀಕರಿಸಿ ಸಾಧಿಸುವುದು ನಿಜವಾದ ಸಾಧನೆ ಎಂದರು.

ನಂತರ ಕಾಲೇಜಿನಲ್ಲಿ ಇರುವ ವಿಜೇತ ಸ್ಫರ್ಧಾತ್ಮ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಸ್ಫರ್ಧಾರ್ಥಿಗಳ ಜೊತೆ ಸಂವಾದದಲ್ಲಿ ಭಾಗವಹಿಸಿದರು.

ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಎಂ.ಎಸ್.ದಾದ್ಮಿ, ಪದವಿ ಪೂರ್ವ ಪ್ರಾಚಾರ್ಯ ಬಿ. ಶ್ರೀನಿವಾಸ ಹಾಗೂ ಗವಿಸಿದ್ಧೇಶ್ವರ ಪದವಿ, ಪದವಿ ಪೂರ್ವ, ಬಿ.ಎಡ್, ಶ್ರೀಮತಿ ಶಾರದಮ್ಮ ಕೊತಬಾಳ ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಆಯೋಜಕರಾದ ಶರಣಬಸಪ್ಪ ಬಿಳೆಯಲಿ ಅತಿಥಿಗಳ ಪರಿಚಯ ಮಾಡಿದರು. ಡಾ. ಚನ್ನಬಸವ ಜೀವನದರ್ಶನ ಕಾರ್ಯಕ್ರಮದ ಮಾಹಿತಿ ನೀಡಿದರು. ಕು.ವರ್ಷಿಣಿ ಸಂಕಲಾಪೂರ ಪ್ರಾರ್ಥಿಸಿದರೆ, ಡಾ. ನಾಗರಾಜ ದಂಡೋತಿ ಹೆಬ್ಬಾಳ ನಿರೂಪಿಸಿದರು. ಪ್ರಾಧ್ಯಪಕ ಟಿ.ಜಿ.ದೇಸಾಯಿ ವಂದಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

16 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago