ಕಲಬುರಗಿ: ನಗರದ ಸಂಗಮೇಶ್ವರ ಮಹಿಳಾ ಮಂಡಲದ 48ನೆಯ ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿಕ್ಷಣ ತಜ್ಞೆ ಡಾ.ಶಾಂತಿ ದೇಸಾಯಿಯವರು ಸಂಗಮೇಶ್ವರ ಮಹಿಳಾ ಮಂಡಳವು ಮಹಿಳಾ ಪರವಾಗಿ ಮತ್ತು ಸಮಾಜಮುಖಿಯಾಗಿ ಸುದೀರ್ಘವಾದ ದಾರಿಯನ್ನು ಕ್ರಮಿಸಿರುವುದು ಬಹುದೊಡ್ಡ ಸಾಧನೆಯ ಹೌದು. ಇದು ನಮ್ಮ ಕಲಬುರಿಗೆ ಹೆಮ್ಮೆಯ ಸಂಗತಿ ಎಂದರು.
ಇನ್ನೋರ್ವ ಮುಖ್ಯ ಅತಿಥಿಗಳಾದ ಮಹಿಪಾಲ ರೆಡ್ಡಿ ಮುನ್ನೂರು ಮಾತನಾಡುತ್ತಾ ಇನ್ನೆರಡು ವರುಷಗಳಲ್ಲಿ ಅರ್ಧ ಶತಮಾನವನ್ನು ಪೂರೈಸಲಿರುವ ಸಂಗಮೇಶ್ವರ ಮಹಿಳಾ ಮಂಡಲವು ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದು ಬಹುದೊಡ್ಡ ದಾಖಲೆ ನಿರ್ಮಿಸಿದೆ. ನಮ್ಮ ಭಾಗದ ಮಾದರಿಯ ಸಂಸ್ಥೆಯಾಗಿರುವ ಇದರ ದಾರಿ ಸುಲಭದ್ದಾಗಿರಲಿಲ್ಲ. ಸಂಗಮೇಶ್ವರ ಮಹಿಳಾ ಮಂಡಳದ ಕಾರ್ಯ ಸಾಧನೆ ಬಗ್ಗೆ ಮುಖ್ಯವಾಗಿ ಸರಕಾರಕ್ಕೆ ತಿಳಿಸಬೇಕಾಗಿದೆ ಎಂದರು.
ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ಮರಳಿ ನೀಡಬೇಕಾದದ್ದು ಮನುಷ್ಯಧರ್ಮ. ಈ ನಿಟ್ಟಿನಲ್ಲಿ ಸಂಗಮೇಶ್ವರ ಮಹಿಳಾ ಮಂಡಲವು ಇಲ್ಲಿಯವರೆಗೂ ನಡೆದು ಬಂದಿದೆ. ಅಂದಿನ ಸಾರ್ಥಕದ ಕಾರ್ಯಕ್ಕೆ ಇಂದಿನ ಸಡಗರದ ಕ್ಷಣಗಳು ಅರ್ಥಪೂರ್ಣವೆನಿಸುತ್ತಿದೆ ಎಂದು ಹೇಳುತ್ತಾ ಸಂಗಮೇಶ್ವರ ಮಹಿಳಾ ಮಂಡಲದ ಅಧ್ಯಕ್ಷರಾದ ದೇಶಮುಖ ಭಾವುಕರಾದರು.
ಓಂಕಾರ ನೃತ್ಯ ಸಾಧನ ಸಂಸ್ಥೆಯ ಅಧ್ಯಕ್ಷರಾದ ಡಾ. ಶುಭಾಂಗಿ ಸುಧೀಂದ್ರ ಹಾಗೂ ಮಧುರ ಮೈತ್ರಿ ಮಹಿಳಾ ಮಂಡಲದ ಅಧ್ಯಕ್ಷರು ಶ್ರೀಮತಿ ಛಾಯಾ ಮಳೂರ ಈ ಸಾಧಕಿಯರನ್ನು ಸನ್ಮಾನಿಸಲಾಯಿತು.
ಜಾನಪದ ಕಲಾವಿದೆ ಶಿಲ್ಪಾ ಮುಡುಬಿ ಜಾನಪದ ಕಲೆಯ ಸತ್ವ ಮತ್ತು ವಿಶೇಷತೆಯ ಬಗ್ಗೆ ಮಾತನಾಡುತ್ತಾ ತಮ್ಮ ಅನುಭವವನ್ನು ಬಿಚ್ಚಿಡುತ್ತಾ ತುಂತುಣಿಯನ್ನು ನುಡಿಸುತ್ತಾ ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಿದರು.
ಮೇ ಫ್ಲವರ್ ನರ್ಸರಿ ಶಾಲೆಯ ಮಕ್ಕಳಿಂದ ಮತ್ತು ಮಹಿಳಾ ಮಂಡಲದ ವಿಶೇಷ ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ಸಂ.ಮ.ಮಂ ಕಾರ್ಯದರ್ಶಿಗಳಾದ ಸಂಧ್ಯಾ ಹೊನಗುಂಟಿಕರ್ ಪ್ರಸ್ತಾವಿಕ ಮತ್ತು ಸ್ವಾಗತವನ್ನು ಕೋರಿದರು. ಶೃತಿ.ವಿ.ಸಗರ ಅವರೂ ಪ್ರಾರ್ಥನೆಯನ್ನು ಶಾಂತಾ ಭೀಮಸೇನರಾವ್ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಮಹಿಳಾ ಮಂಡಳದ ಸದಸ್ಯರು ಹಾಗೂ ಡಾ.ಸ್ವಾಮಿರಾವ್ ಕುಲಕರ್ಣಿ, ಶ್ರೀನಿವಾಸ ಸಿರನೂರು ಮೋಹನ್ ಸೀತನೂರು, ಪ್ರಭಾಕರ್ ಜೋಶಿ, ನಾರಾಯಣ ಬಿ. ಎಚ್ ನೀರ್ಗುಡಿ, ಕುಲಕರ್ಣಿ ಕೆ. ಪಿ. ಗಿರಿಧರ್, ರವಿ ಲಾತುರಕರ್,ವಿಠಲ್ ಕಟ್ಟಿ, ಶೀತಲ್ ದೇವಳಗಾಂವ, ಶಾರದ ಕಿತ್ತೂರ್, ನಂದಾ ಕುಲಕರಣಿ, ಸೀತಾ ಮಲ್ಲಾಬಾದಿ,ಮುಂತಾದವರು ಉಪಸ್ಥಿತರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…