ಬಿಸಿ ಬಿಸಿ ಸುದ್ದಿ

ರಾಧಾಕೃಷ್ಣ ಅವರು ರಾಷ್ಟ್ರರಾಜಕಾರಣಕ್ಕೆ ಪ್ರವೇಶಿಸಬೇಕು

ಕಲಬುರಗಿ: ಈ ಬಾರಿ ಲೋಕಸಭೆ ಚುನಾವಣೆಗೆ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆ ಸ್ಪರ್ಧೆಗೆ ನಿರಾಕರಿಸಿದ್ದು, ಈ ಸ್ಥಾನಕ್ಕೆ ಖ್ಯಾತ ಉದ್ಯಮಿ, ಕರ್ನಾಟಕ ಪೀಪಲ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ರಾಧಾ ಕೃಷ್ಣ ಆರ್ ಅವರ ಹೆಸರು ಮುಂಚುಣಿಯಲ್ಲಿದ್ದು ಅವರು ರಾಜಕಾರಣ ಪ್ರವೇಶಿಸುವ ಮನಸ್ಸು ಮಾಡಬೇಕೆಂದು ಮೆ.ಮಾಯಾ ಆಫಸೆಟ್ ಮಲ್ಟಿಕಲರ್ ಪ್ರಿಂಟರ್ಸ್ ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಕ್ಕೊತ್ತಾಯ ಮಾಡಲಾಯಿತು.

ನಗರದ ಹೊರವಲಯದ ಕಪನೂರ ಎರಡನೇ ಹಂತದಕೈಗಾರಿಕಾ ಪ್ರದೇಶದಲ್ಲಿ ನಡೆದ ನೃಪತುಂಗ ಪ್ರಾದೇಶಿಕ ಕನ್ನಡ ದಿನಪತ್ರಿಕೆಯ ಮೆ.ಮಾಯಾ ಆಫಸೆಟ್ ಮಲ್ಟಿಕಲರ್ ಪ್ರಿಂಟರ್ಸ್ ನ ಉದ್ಘಾಟನಾ ಸಮಾರಂಭ ಜರುಗಿತು.

ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ನಿವೃತ್ತ ಇಇ ಹಾಗೂ ಪ್ರಗತಿಪರ ಚಿಂತಕ ಮಾರುತಿ ಎಂ.ಗೋಖಲೆ, ಸದ್ಯದ ಸಂದರ್ಭದಲ್ಲಿ ಬೌದ್ಧಿಕ ರಾಜಕಾರಣಿಗಳು ಕಡಿಮೆ. ಚಿಂತಕರೂ ಆಗಿರುವ ರಾಧಾಕೃಷ್ಣ ಅವರು ಬಹಳ ಓದಿ ಕೊಂಡಿದ್ದಾರೆ.ಬಹಳ ಡೆಮಾಕ್ರಟಿಕ್ ಮನುಷ್ಯ. ಎಲ್ಲ ವರ್ಗದ ಜನರ ಮಾತು ಕೇಳಿಸಿಕೊಳ್ಳುವ ಇಂತಹ ನಾಯಕರು ನಮಗೆ ಸಿಗುವುದುವಿರಳ. ಹಾಗಾಗಿ ಒದಗಿ ಬಂದಿರುವ ಅವಕಾಶ ವನ್ನು ನಿರಾಕರಿಸಬಾರದುಎಂದು ಮನವಿ ಮಾಡಿದರು.

ಕಲಬುರಗಿ ಕೆಕೆಆರ್ ಟಿಸಿ ನೌಕರರ ಸಂಘದ ಅಧ್ಯಕ್ಷ ಚಂದ್ರಕಾAತ ಗದ್ದಿಗೆ ಮಾತನಾಡಿ, ರಾಧಾಕೃಷ್ಣ ಆರ್ ಅವರೇ ಅಭ್ಯರ್ಥಿ ಎಂದು ಮಾಧ್ಯಮಗಳ ಮೂಲಕ ತಿಳಿದು ಬಂದಿದೆ. ಹಾಗಾಗಿಇಷ್ಟು ದಿನ ಕಿಂಗ್ ಮೇಕರ್ ಆಗಿದ್ದ ರಾಧಾಕೃಷ್ಣಅವರು ಈಗ ರಾಜಕಾರಣ ಪ್ರವೇಶಿಸಿ ರಾಜನಾ ಗಬೇಕು. ಅದಕ್ಕೆ ನಮ್ಮ ಸಂಪೂರ್ಣ ಸಹಕಾರ ಇರಲಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ್ ಮಾತನಾಡಿ,ಎಷ್ಟೊ ಮಂದಿ, ಶಾಸಕರು, ವಿಧಾನಪರಿ ಷತ್ ಸದಸ್ಯರಾಗಲು ರಾಧಾಕೃಷ್ಣ ಅವರುಕಾರಣ ಕರ್ತರಾಗಿ ದ್ದಾರೆ. ಎಷ್ಟು ಮಂದಿ ಇವರ ಕಡೆಯಿಂದ ನೌಕರಿ,ಸಹಾ ಯ, ನೆರವು ಪಡೆದುಕೊಂಡಿದ್ದಾರೆ. ಅಂತಹವರುರಾಜ ಕಾರಣದಲ್ಲಿ ಇರು ವುದು ಅಗತ್ಯ ಎಂದು ಹೇಳಿದರು.

ನಿವೃತ್ತ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಎಂ.ಯಾತನೂರ ಮಾತ ನಾಡಿ, ರಾಧಾಕೃಷ್ಣ ಅವರುಕಿಂಗ್ ಮೇಕರ್ ಅಲ್ಲ, ಯಾವಾಗಲೂರಾಜನೇ. ಅವರಿಗೆ ಈ ಭಾಗದ ಜನರ ಕಷ್ಟ-ಸುಖಗಳಲ್ಲಿ ಭಾಗಿಯಾಗಿ ಜನರೊಂದಿಗೆ ನೇರ ಒಡನಾಟವಿದೆ. ಹಾಗಾಗಿ ಪಕ್ಷವು ಅವಕಾಶ ನೀಡಿದರೆ ಅಭ್ಯರ್ಥಿಯಾಗಲು ಒಪ್ಪಿ ಕೊಳ್ಳಬೇಕು. ನಾವು ತನು-ಮನದಿಂದ ಅವರ ಗೆಲುವಿಗೆ ಶ್ರಮಿಸು ವುದಾಗಿ ಹೇಳಿದರು.
ಹಿರಿಯ ವೈದ್ಯ ಡಾ.ಎಚ್.ಎಸ್.ಕಟ್ಟಿ ಮಾತನಾಡಿ, ಸಂತ ಹಾಗೂ ಪವಾಡ ಪುರುಷರಂತೆ ಎಲೆ ಮರೆ ಕಾಯಿಯಾಗಿ ಕೆಲಸ ಮಾಡುವ ರಾಧಾಕೃಷ್ಣ ರಂತಹವರು ಇಂದಿನ ರಾಜಕಾರಣಕ್ಕೆ ಅಗತ್ಯವಿದೆ ಎಂದರು.

ವೇದಿಕೆಯಲ್ಲಿ ಹೀಗೆ ಹಲವರಿಂದ ಹಕ್ಕೊತ್ತಾಯ ಕೇಳಿ ಬಂದರೂ ಇದಕ್ಕೆ ಉತ್ತರಿಸದ ರಾಧಾಕೃಷ್ಣ ಅವರು ಕಾರ್ಯ ಕ್ರಮ ಮುಗಿಯುವವರೆಗೂ ಮೌನ ವಹಿಸಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

2 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

12 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

12 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

12 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago