ರಾಯಚೂರು: ಆಡಳಿತ ಪಕ್ಷದವರ ಅಪೇಕ್ಷೆಗೆ ತಕ್ಕಂತೆ ಇವಿಎಂಗಳನ್ನು ತಿರುಚಬಹುದು ಎಂಬುದನ್ನು ತಾಂತ್ರಿಕ ತಜ್ಞರು ಸಾಬೀತುಪಡಿಸಿದ್ದರಿಂದ ಇವಿಎಂ ಬೇಡ! ಬ್ಯಾಲೆಟ್ ಮತ ಪತ್ರದ ಮೂಲಕ ಚುನಾವಣೆ ನಡೆಯಬೇಕೆಂದು ಸಿಪಿಐಎಂಎಲ್ ರೆಡ್ ಸ್ಟಾರ್ ರಾಯಚೂರು ತಾಲೂಕು ಸಮಿತಿ ಒತ್ತಾಯಿಸಿದೆ.
ನಗರದ ಡಾ ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಸಿಪಿಐಎಂಎಲ್ ರೆಡ್ ಸ್ಟಾರ್ ಪಕ್ಷದ ವತಿಯಿಂದ 2024ನೇ ಲೋಕಸಭಾ ಚುನಾವಣೆಯಲ್ಲಿ ಇಗಿಒ ಮತಯಂತ್ರ ಬೇಡವೆ ಬೇಡ ಮತಪತ್ರದ ಮೂಲಕ ಲೋಕಸಭಾ ಚುನಾವಣೆ ನಡೆಸಲು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
“ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಸಮೀಕ್ಷೆಯಲ್ಲಿ ವಿಫಲರಾದ ಅನೇಕ ಅಭ್ಯರ್ಥಿಗಳು ನಿಜವಾದ ಚುನಾವಣೆಯಲ್ಲಿ ಗೆದ್ದಿರುವುದು ಆಶ್ಚರ್ಯವೇನಿಲ್ಲ. ಇದಕ್ಕೆ ಯಂತ್ರಗಳ ಟ್ಯಾಂಪರ್ ಆಗಿರುವುದು ಮುಖ್ಯ ಕಾರಣ. ಕನಿಷ್ಠ, ಜನರು ಮತದಾನದ ನಂತರ, ಅವರು ಯಾವ ಪಕ್ಷಕ್ಕೆ ಮತ ಚಲಾಯಿಸಿದ್ದಾರೆ ಎಂಬುದನ್ನು ಸೂಚಿಸಲು ಸ್ವೀಕೃತಿ ಚೀಟಿಯನ್ನು ಸ್ವೀಕರಿಸಬೇಕು ಮತ್ತು ಅದನ್ನು ಸಂಗ್ರಹಿಸಬೇಕು ಮತ್ತು ಆ ಸ್ವೀಕೃತಿ ಚೀಟಿಗಳ ಆಧಾರದ ಮೇಲೆ ಮತಗಳನ್ನು ಎಣಿಸಬೇಕು ಎಂದು ಒತ್ತಾಯಿಸಿದರು.
ವಿವಿಧ ರಾಜ್ಯಗಳಲ್ಲಿ ಹಲವು ಪಕ್ಷಗಳು ಇವಿಎಂಗಳ ಮೇಲೆ ಇದೇ ರೀತಿಯ ಸಮಸ್ಯೆಗಳನ್ನು ಎತ್ತಿದ್ದವು ಆದರೆ ಭಾರತೀಯ ಚುನಾವಣಾ ಆಯೋಗವು (ಇಸಿಐ) ಅವುಗಳನ್ನು ಪರಿಹರಿಸುವ ಭರವಸೆ ನೀಡಲು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಆರೋಪಗಳನ್ನು ತಳ್ಳಿಹಾಕಲು ಸರಿಯಾದ ಉತ್ತರವನ್ನೂ ನೀಡುತ್ತಿಲ್ಲ. “ಇಸಿಐ ಮೂಕ ಪ್ರೇಕ್ಷಕರಾಗಿರುವುದರಿಂದ, ಇದು ಚುನಾವಣಾ ಆಯೋಗದ ಮೇಲೂ ಅನುಮಾನವನ್ನು ಹುಟ್ಟುಹಾಕುತ್ತದೆ” ಎಂದರು.
ಮೊದಲಿದ್ದಂತೆ ಮತಪತ್ರದ(ಬ್ಯಾಲೆಟ್)ಮೂಲಕ ಪಾರದರ್ಶಕ ಚುನಾವಣೆಯನ್ನು ನಡೆಸಲು ನಮ್ಮ ಪಕ್ಷವು ಆಗ್ರಹಿಸುತ್ತದೆ. ಹಾಗಾಗಿ ಯಂತ್ರಚಾಲಿತ ಮತ ಯಂತ್ರವನ್ನು ಬಂದ್ ಮಾಡಿ ಜನತಾಂತ್ರಿಕ ಮತ ಪತ್ರದ ಚುನಾವಣೆಗೆ ಮುಂದಾಗಬೇಕೇಂದು ರಾಷ್ಟ್ರದ ಮುಖ್ಯ ಚುನಾವಣಾ ಆಯುಕ್ತರಿಗೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿ. ಅಮರೇಶ್, ಅಜೀಜ್ ಜಾಗೀರ್ದಾರ್,ಮಲ್ಲಯ್ಯ ಕಟ್ಟಿಮನಿ, ನಿರಂಜನ್ ಕುಮಾರ್, ಆನಂದ್ ಕುಮಾರ್, ಲಕ್ಷ್ಮಣ್ ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…