ಕಲಬುರಗಿ; ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ 1 ಮತ್ತು 2, ಶರಣಬಸವ ವಿಶ್ವವಿದ್ಯಾಲಯ ಹಾಗೂ ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ, ಹೈದ್ರಾಬಾದ್ ಇವರ ಸಂಯುಕ್ತ ಆಶ್ರಯದಲ್ಲಿ “ಸಿರಿಧಾನ್ಯ ಕಾರ್ಯಗಾರವು ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿಯಲ್ಲಿ ನಡೆಯಿತು.
ಕಾರ್ಯಕ್ರಮವು ಉದ್ಘಾಟಿಸಿದ ಕೃಷಿಕ ಸಜಾಜದ ಜಿಲ್ಲಾಧ್ಯಕ್ಷರಾದ ಡಾ. ಸಿದ್ರಾಮಪ್ಪಾ ಪಾಟೀಲ್ ಧಂಗಾಪೂರರವರು ಮಾತನಾಡಿ ಸಿರಿಧಾನ್ಯ ಉಪಯೋಗಗಳು ಗ್ರಾಮದ ಎಲ್ಲಾ ರೈತರಿಗೂ ಹಾಗೂ ನಗರ ವಾಸಿಗಳಿಗೂ ಇದರ ಆರೋಗ್ಯದ, ದೈಹಿಕ ದೃಡತೆಯ ಮಾಹಿತಿ ತಲುಪಲು ಕೃಷಿ ವಿಶ್ವವಿದ್ಯಾಲಯ, ಕೆವಿಕೆಗಳು, ಕೃಷಿ ಇಲಾಖೆ ಹಾಗೂ ಸಿರಿಧಾನ್ಯ ಸಂಸ್ಥೆಗಳು ಹೆಚ್ಚು ಚಟುವಟಿಕೆಗಳನ್ನು ರೂಪಿಸಿರುವುದನ್ನು ಸಂತೋಷದ ಬೆಳವಣಿಗೆ ಎಂದು ಹರ್ಷವ್ಯಕ್ತಪಡಿಸಿದರು. ಕೃಷಿಕ ಸಮಾಜವು ಸರ್ಕಾರದ ಕೃಷಿ ಪೂರ್ವಭಾವಿ ಬಜೆಟನಲ್ಲಿ ಸಿರಿಧಾನ್ಯ ಹಾಗೂ ಒಣ ಬೇಸಾಯಕ್ಕೆ ಒತ್ತು ನೀಡುವಂತೆ ಹಲವು ಯೋಜನೆಗಳನ್ನು ಜಾರಿಗೆ ತರಲು ಉತ್ತಮ ಸಲಹೆಗಳನ್ನು ನೀಡಿದೆ ಎಂದು ತಿಳಿಸಿದರು.
ಡಾ. ಎಂ.ಎಂ. ಧನೋಜಿ, ಡೀನ್ (ಕೃಷಿ), ಕೃಷಿ ಮಹಾವಿದ್ಯಾಲಯ, ಕಲಬುರಗಿರವರು ಮಾತನಾಡಿ ಮಕ್ಕಳಿಂದ ಹಿರಿಯ ವಯಸ್ಸಿನವರಿಗೂ ಆರೋಗ್ಯ ಸಮಸ್ಯೆ ಆಧುನಿಕ ಯುಗದಲ್ಲಿ ಕಂಡು ಬಂದಿದ್ದು, ಸಿರಿಧಾನ್ಯ ಉತ್ಪನ್ನಗಳ ಆಹಾರ ಪ್ರಸ್ತುತ ಪೀಳಿಗೆಯ ಜನರು ಸೇವಿಸಬೇಕೆಂದು ಸಲಹೆ ನೀಡಿದರು. ಡಾ. ವಾಸುದೇವ ನಾಯ್ಕ್, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೆವಿಕೆ, ರದ್ದೇವಾಡೆಗಿರವರು ಮಾತನಾಡಿ 2023 ಸಿರಿಧಾನ್ಯ ವರ್ಷವನ್ನು ವಿವಿಧ ರೀತಿಯಲ್ಲಿ ಆಚರಿಸಿದ ಮುನ್ನೋಟ ಕುರಿತು ಮಾತನಾಡಿದರು.
ಡಾ. ಎಸ್.ಬಿ. ಗೌಡಪ್ಪ, ವಿಸ್ತರಣಾ ನಿರ್ದೇಶಕರು, ಕೃ.ವಿ.ವಿ, ರಾಯಚೂರುರವರು ತಮ್ಮ ಆಧ್ಯಕ್ಷಿಯ ಭಾಷಣದಲ್ಲಿ ಮಾತನಾಡಿ ಸಿರಿಧಾನ್ಯದ ಉತ್ಪನ್ನ, ಮೌಲ್ಯವರ್ಧನೆ, ಉಪಯೋಗ, ಔಷಧೀಯ ಗುಣಗಳ ಮಾಹಿತಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ತನ್ನ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆಯಗಳಲ್ಲೂ ಸಿರಿಧಾನ್ಯದ ಕುರಿತು ವಿವಿಧ ವಿಸ್ತರಣ ಚಟುವಟಿಕೆಗಳನ್ನು ಯಶಸ್ವಿಯಾಗಿ ಹಮ್ಮಿಕೊಂಡಿದೆ. ಪ್ರಧಾನ ಮಂತ್ರಿರವರ ತನ್ನ ಮನಧಾಳದ ಮಾತು ರೇಡಿಯೋ ಸಂದೇಶದಲ್ಲಿ ಕಲಬುರಗಿ ಮತ್ತು ಬೀದರ್ ಜಿಲ್ಲೆಯ ಎಪ್.ಪಿ.ಓಗಳು ಉತ್ತಮ ಕಾರ್ಯನಿರ್ವಹಿಸಿರುದು ಇಡೀ ದೇಶ ಹೆಮ್ಮ ಪಡುವಂತಹ ವಿಷಯ ಎಂದು ತಿಳಿಸಿದರು.
ಡಾ. ಸಂಗಪ್ಪಾ, ವಿಜ್ಞಾನಿಗಳು (ಕೃಷಿ ವಿಸ್ತರಣೆ) ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ, ಹೈದ್ರಾಬಾದ್ ಇವರ ಪ್ರಾಸ್ತಾವಿಕ ನುಡಿಯಲ್ಲಿ ಸಿರಿಧಾನ್ಯ ಬೆಳೆದು ಬಂದ ರೀತಿ ಎಫ್.ಪಿ.ಓ ಗಳ ಸ್ಥಾಪನೆ ಮೌಲ್ಯವರ್ಧನ ಚಟುವಟಿಕೆಗಳು ಹಾಗೂ ವಾಣಿಜ್ಯ ದೃಷ್ಟಿಯಲ್ಲಿ ಸಿರಿಧಾನ್ಯ ಮುಂದಿನ ರೂಪುರೇಷಗಳು ಕುರಿತು ಮಾಹಿತಿ ನೀಡಿದರು.
ಡಾ. ರಾಜು ಜಿ. ತೆಗ್ಗೆಳ್ಳಿ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕವಿಕೆ, ಕಲಬುರಗಿ ರವರು ಸ್ವಾಗತಿಸಿದರು. ಡಾ. ಪಂಡಿತ್ ರಾಠೋಡ, ಡಾ. ಅಂಬರೇಷ ಗಣಚಾರ್ಯ, ಕು. ರಕ್ಷಿತಾ, ಗೋಪಾಲ ಕುಲಕರ್ಣಿ, ಮಲ್ಲಿನಾಥ ಹೇಮಾಡಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಸಿರಿಧಾನ್ಯ ಬೇಸಾಯ, ಸಿರಿಧಾನ್ಯ ಮೌಲ್ಯವರ್ಧನೆ, ರೈತ ಉತ್ಪಾದಕಾ ಗುಂಪುಗಳ ಮಹತ್ವ, ಕೃಷಿ ಕ್ಷೇತ್ರದಲ್ಲಿ ಬ್ಯಾಂಕಿನ ಪಾತ್ರ, ರಾಸಾಯನಿಕ ಮುಕ್ತ, ಸಿರಿಧಾನ್ಯ ಪುಸ್ತಕಗಳ ಕುರಿತು ಮಾಹಿತಿ ನೀಡಿದರು.
ಡಾ. ಯುಸುಫ್‍ಅಲಿ ಅ. ನಿಂಬರಗಿ, ಡಾ. ಜಹೀರ್ ಅಹೆಮದ್, ಡಾ. ಶ್ರಿನಿವಾಸ ಬಿ.ವಿ, ಮತಿ ಫರ್ಜಾನಾ, ಸಿದ್ರಾಮಪ್ಪಾ ಮಣಿಗೆ, ನಾಗಿಂದ್ರ ಬಡದಾಳಿ, ಶಶಿಕÀಲಾ ಮೂಲಗೆ, ನಾಗಣ್ಣಾ, ಶರಣಬಸವ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಕೃಷಿ ಮಹಾವಿದ್ಯಾಲಯ, ಅಂತಿಮ ವರ್ಷದ ವಿದ್ಯಾರ್ಥಿಗಳು ವಿವಿಧ ಗ್ರಾಮದ ಬಂದ ರೈತರು ಸಿರಿಧಾನ್ಯ ಕಾರ್ಯಗಾರದಲ್ಲಿ ಹಾಜರಾಗಿದ್ದರು. ವಿವಿಧ ಸಿರಿಧಾನ್ಯ ಉತ್ಪನ್ನದ ಮಳಿಗೆಗಳು, ಯಂತ್ರೋಪಕರಣಗಳು, ಸಾವಯವ ಕೃಷಿ ಪುಸ್ತಕ, ಸಾವಯವ ಕುಸುಬೆ ಎಣ್ಣೆ ಮಳಿಗೆಗಳು ಕಾರ್ಯಗಾರದ ಪಕ್ಕ ಸ್ಥಾಪಿಸಲಾಗಿತ್ತು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…