ಚಿಂಚೋಳಿ: ಪುರುಷರು ಮಹಿಳೆಯರನ್ನು ಅಡುಗೆ ಮನೆಗೆ ಸೀಮಿತಗೊಳಿಸದೇ ಅವಳ ಸಾಮರ್ಥ್ಯ ಅರಿತು ಬೆಂಬಲ ನೀಡಬೇಕು ಆಗ ಮನೆಯಲ್ಲಿ ಪತಿ ಪತ್ನಿ ಇಬ್ಬರೂ ಆದಾಯ ತರಲು ಸಾಧ್ಯವಾಗುತ್ತದೆ. ಇದರಿಂದ ಕೌಟುಂಬಿಕ ನೆಮ್ಮದಿ ಉಂಟಾಗುತ್ತದೆ ಎಂದು ಸಾಹಿತಿ ಜ್ಯೋತಿ ಡಾ. ಧನರಾಜ ಬೊಮ್ಮಾ ತಿಳಿಸಿದರು.
ಅವರು ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಎಲ್ ಆಯಂಡ್ ಟಿ ಫೈನಾನ್ಸ್ ಕಂಪೆನಿಯ ಡಿಜಿಟಲ್ ಸಖಿ ಜೀವನೋಪಾಯ ಪ್ರತಿಷ್ಠಾನ ಬುಧವಾರ ಹಮ್ಮಿಕೊಂಡ ಅಂತರರಾಷ್ಟಿçÃಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.
ನಗರದ ಮಹಿಳೆಯರನ್ನು ಹೋಲಿಸಿದರೆ ಗ್ರಾಮೀಣ ಭಾಗದ ಮಹಿಳೆಯರು ಸರ್ವಶಕ್ತಳಾಗಿದ್ದಾಳೆ. ನಗರದ ಮಹಿಳೆಯರಿಗೆ ಬ್ಯಾಂಕು, ಆರ್ಥಿಕ ಜ್ಞಾನ ವಿರಳ ಇಲ್ಲಿ ಎಲ್ಲವೂ ಪುರುಷರು ಮಾಡಿದರೆ ಗ್ರಾಮೀಣ ಭಾಗದಲ್ಲಿ ಮಹಿಳೆ ಮತ್ತು ಪುರುಷ ಇಬ್ಬರೂ ಈ ಕೆಲಸ ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸರ್ಕಾರಿ ಸಾರ್ವಜನಿಕ ತಾಲ್ಲೂಕು ಆಸ್ಪತ್ರೆಯ ತಜ್ಞವೈದ್ಯೆ ಡಾ. ದೀಪಾ ಮಾತನಾಡಿ ಮಹಿಳೆ ಎಂದರೆ ಕೀಳಲ್ಲ. ಮಹಿಳೆಯಾಗಿದ್ದಕ್ಕೆ ಹೆಮ್ಮೆ ಪಡಬೇಕು. ಮಹಿಳೆಯರು ಪುರುಷರಿಗಿಂತಲೂ ಕಡಿಮೆಯಿಲ್ಲ. ಎಲ್ಲಾ ರಂಗಗಳಲ್ಲೂ ಅವಳು ವಿಶೇಷ ಸಾಧನೆ ಮಾಡುತ್ತಿದ್ದಾಳೆ ಎಂದರು.
ಮಹಿಳೆಗೆ ಅನುಕಂಪದ ಅಗತ್ಯವಿಲ್ಲ ಅವಕಾಶಗಳ ಅಗತ್ಯವಿದೆ ಎಂದು ಪ್ರತಿಪಾದಿಸಿದ ಅವರು ನಾಡಿನ ಏಳ್ಗೆಗೆ ಮಹಿಳೆಯರ ಕೊಡುಗೆ ಅಪಾರವಾಗಿದೆ ಎಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಹಾಗೂ ಪತ್ರಕರ್ತರಾದ ಜಗನ್ನಾಥ ಶೇರಿಕಾರ ಮಾತನಾಡಿ ಎಲ್ ಆಯಂಡ್ ಟಿ ಫೈನಾನ್ಸ್ ಹಣಕಾಸಿನ ವ್ಯವಹಾರದ ಜತೆಗೆ ಡಿಜಿಟಲ್ ಸಖಿಯರ ಮೂಲಕ ಸಮಾಜದ ಅಗತ್ಯತೆಯನ್ನು ಪೂರೈಸುವ ಕೆಲಸ ಮಾಡುತ್ತಿದೆ. ಗ್ರಾಮೀಣ ಭಾಗದಲ್ಲಿ ಮಹಿಳೆಯರು ಆರ್ಥಿಕಾಭಿವೃದ್ಧಿಯಲ್ಲಿ ತೊಡಗಲು ಪ್ರೇರಣೆ ನೀಡುವುದರ ಜತೆಗೆ ಹಣಕಾಸಿನ ನಿರ್ವಹಣೆ ಮತ್ತು ಉದ್ಯಮಿಗಳಾಗಲು ಸರ್ಕಾರದ ಯೋಜನೆಗಳ ಕುರಿತು ಅರಿವು ಮೂಡಿಸುತ್ತಿರುವುದು ಮತ್ತು ಸ್ವಾವಲಂಬಿ ಬದುಕಿಗೆ ಉತ್ತೇಜನ ನೀಡುತ್ತಿರುವುದನ್ನು ಶ್ಲಾಘಿಸಿದರು.
ಡಿಜಿಟಲ್ ಸಖಿ ಕಾರ್ಯಕ್ರಮ ವ್ಯವಸ್ಥಾಪಕ ಮಹಮದ್ ಶಿರಾಜ್ ಮಾತನಾಡಿ ಡಿಜಿಟಲ್ ಸಖಿಯರು ಮಹಿಳೆಯರ ಸಬಲೀಕರಣಕ್ಕೆ ಉತ್ತೇಜಿಸುತ್ತ ಮಹಿಳೆಯರನ್ನು ಉದ್ಯಮಿಗಳಾಗಿ ರೂಪಿಸಲು ಕೆಲಸ ಮಾಡುತ್ತಿದ್ದಾರೆ. ಕಲಬುರಗಿ ಮತ್ತು ಬೀದರ್ ಜಿಲ್ಲೆಯಲ್ಲಿ 177 ಡಿಜಿಟಲ್ ಸಖಿಯರು ಕೆಲಸ ಮಾಡುತ್ತಿದ್ದಾರೆ ಇದು ಎಲ್ ಆಯಂಡ್ ಫೈನಾನ್ಸ್ರವರ ಕೈಗಾರಿಕೆಗಳ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಕೆಲಸ ಮಾಡುತ್ತಿದೆ ಎಂದರು.
ಡಿಜಿಟಲ್ ಸಖಿಯರಾದ ಪೋಲಕಪಳ್ಳಿಯ ಮಲ್ಲಮ್ಮ ಮಠಪತಿ, ಲಕ್ಷಿö್ಮÃ ಚೇಂಗಟಾ, ಗುಂಡಮ್ಮ ಕೊರಡಂಪಳ್ಳಿ, ಕುಂಚಾವರAನ ಸ್ವಯಂ ಉದ್ಯೋಗಿ ಜಯಶ್ರೀ ಮಾತನಾಡಿ ತಾವು ಕೆಲಸ ಮಾಡುತ್ತಿರುವುದರಿಂದ ಮಹಿಳೆಯರಿಗೆ ಹೇಗೆ ಪ್ರಯೋಜನ ಲಭಿಸಿದೆ ಎಂಬುದು ವಿವರಿಸಿದರು.
ತಾಲ್ಲೂಕು ವ್ಯವಸ್ಥಾಪಕ ಸಲೀಮ ಪಾಶಾ ವೇದಿಕೆಯಲ್ಲಿದ್ದರು. ಅಶೋಕ ಗುಲಗುಂಜಿ ಸ್ವಾಗತಿಸಿದರು. ರೇಣುಕಾ ಕಟ್ಟಿಮನಿ ನಿರೂಪಿಸಿದರು. ಕ್ಲಸ್ಟರ್ ವ್ಯವಸ್ಥಾಪಕ ಗುರು ವಂದಿಸಿದರು. ಇದೇ ಕಾರ್ಯಕ್ರಮದಲ್ಲಿ 37 ಸಖಿಯರಿಗೆ ಸೀರೆಗಳನ್ನು ವಿತರಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…