ಬಿಸಿ ಬಿಸಿ ಸುದ್ದಿ

ಸ್ತ್ರೀವಾದ ಎಂದರೆ ಗಂಡಸರಿಂದ ಅಧಿಕಾರ ಕಸಿಯುವುದಲ್ಲ

ಸುರಪುರ:ಅನೇಕರು ಸ್ತ್ರೀವಾದ ಎಂದರೆ ಮಹಿಳೆಯರ ಪರವಾಗಿ ವಾದ ಮಾಡುವುದು,ಗಂಡಸರಿಂದ ಅಧಿಕಾರ ಕಸಿಯುವುದು ಎಂದು ಭಾವಿಸುತ್ತಾರೆ ಆದರೆ ಅದು ಸ್ತ್ರೀವಾದ ಅಲ್ಲ,ಸ್ತ್ರೀವಾದ ಎಂದರೆ ಸ್ತ್ರೀಯರ ಪರವಾಗಿ ಎನ್ನುವುದಕ್ಕಿಂತ ಅದರ ವ್ಯಾಖ್ಯಾನ ಬದಲಿಸುವುದಾಗಿದೆ ಎಂದು ಕಲಬುರ್ಗಿ ಕೇಂದ್ರೀಯ ವಿಶ್ವ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಕಿರಣ ಎಂ.ಗಾಜನೂರು ಮಾತನಾಡಿದರು.

ನಗರದ ಗರುಡಾದ್ರಿ ಕಲಾಮಂದಿರದಲ್ಲಿ ಸಾಹಿತ್ಯ ಅಕಾಡೆಮಿ,ಕನ್ನಡ ಸಾಹಿತ್ಯ ಸಂಘ ಸುರಪುರ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಯ ಸ್ವರೂಪ ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿ,ಸ್ತ್ರೀವಾದ ಎನ್ನುವುದು ಇದು ಮಹಿಳೆಯರಿಗಾಗಿ ಇರುವುದಲ್ಲ ಇದು ಗಂಡಸರು ಇದರ ಪರವಾಗಿ ನಿಲ್ಲುವಂತಾಗಬೇಕು,ಹಿಂದಿನ ಕಾಲದಿಂದಲೂ ಸ್ತ್ರೀವಾದ ಎನ್ನುವುದು ನಡೆದುಕೊಂಡು ಬಂದಿದೆ,ಅದಕ್ಕೆ ಹೆಚ್ಚು ಶಕ್ತಿ ವಚನಗಳ ಕಾಲದಲ್ಲಿ ಬಂದಿದೆ,ಸ್ತ್ರೀವಾದ ಎನ್ನುವುದೊಂದು ಪ್ರಜ್ಞೆ,ಜಗತ್ತಿನಲ್ಲಿ ನಡೆದ ಸ್ತ್ರೀವಾದ ಮೂರು ಅಲೆಗಳಲ್ಲಿ ಕಾಣುತ್ತೇವೆ ಸೌಮ್ಯ ರೂಪದ ಕಾಲಘಟ್ಟ,ಅನಾವರಣ ಕಾಲಘಟ್ಟ ಮತ್ತು ಆತ್ಮ ಘನತೆ ಕಾಲಘಟ್ಟ ಆದರೆ ಭಾರತದಲ್ಲಿ ಮತ್ತು ಕರ್ನಾಟಕದಲ್ಲಿ ಹೆಚ್ಚು ಪ್ರಭಾವ ಬೀರಿದೆ ಎಂದರು.

ನಂತರ ಮತ್ತೋರ್ವ ಕಲಬುರ್ಗಿ ಕೇಂದ್ರೀಯ ವಿ.ವಿ ಸಹಾಯಕ ಪ್ರಾಧ್ಯಾಪಕ ಮಹೇಂದ್ರ ಎಂ ಅವರು ನವೋದಯ ಕಾವ್ಯದ ಮೇಲೆ ವಡ್ಸ್‍ವರ್ತ್ ಪ್ರಭಾವ ಎನ್ನುವ ವಿಷಯದ ಮೇಲೆ ತಮ್ಮ ಉಪನ್ಯಾಸ ಮಂಡಿಸಿದರು.ಇದಕ್ಕೂ ಮುನ್ನ ಸಾಹಿತ್ಯ ಅಕಾಡೆಮಿ ನವದೆಹಲಿ ಸದಸ್ಯರಾದ ಚಿದಾನಂದ ಸಾಲಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು,ಇಬ್ಬರು ಉಪನ್ಯಾಸಕರ ವಿಷಯದ ಕುರಿತು ಕೊಡೇಕಲ್ ಕವಿ ವೈ.ಬಿ ಹಾಲಭಾವಿಯವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿದ್ದ ಕನ್ನಡ ಸಾಹಿತ್ಯ ಸಂಘದ ಉಪಾಧ್ಯಕ್ಷರುಗಳಾದ ಜೆ.ಅಗಸ್ಟಿನ್,ಜಯಲಲಿತಾ ಪಾಟೀಲ್ ಹಾಗೂ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅನೇಕರು ಪ್ರತಿಕ್ರೀಯೆ ವ್ಯಕ್ತಪಡಿಸಿದರು.

ಗಾಯಕಿ ನಿರ್ಮಲಾ ರಾಜಗುರು ಹಾಗೂ ಮಲ್ಲು ಮುಷ್ಠಳ್ಳಿ ಕೆ.ಸಿ.ಪಿ ಪ್ರಾರ್ಥಿಸಿದರು,ದೇವು ಹೆಬ್ಬಾಳ ನಿರೂಪಿಸಿದರು,ಕನಕಪ್ಪ ವಾಗಣಗೇರ ಸ್ವಾಗತಿಸಿದರು,ಶ್ರೀನಿವಾಸ ಜಾಲವಾದಿ ವಂದಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

54 mins ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

11 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

11 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

11 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago