ಕಲಬುರಗಿ: ಹಲವರ ಮೇಲೆ ಈಡಿ ಧಾಳಿ ನಡೆಸಿ ಅವರಿಗೆ ಬೆದರಿಕೆ ಹಾಕಿ ಪಕ್ಷಕ್ಕೆ ಚುನಾವಣೆ ಬಾಂಡ್ ಖರೀದಿಸಿದ್ದಾರೆ. ಜೊತೆಗೆ ಎಲೆಟ್ರೋಲ್ ಬಾಂಡ್ ಪಡೆದು ದೊಡ್ಡ ಪ್ರಮಾಣದ ಪ್ರಾಜೆಕಟ್ ಗಳನ್ನು ನೀಡುವ ಮೂಲಕ ಮೋದಿ ಅವರು ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ಆರೋಪಿಸಿದರು.
ಕಲಬುರಗಿ ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಲೆಟ್ರೋಲ್ ಬಾಂಡ್ ಹಗರಣ ದೇಶದ ಅತಿದೊಡ್ಡ ಹಗರಣವಾಗಿದ್ದು, ಶನಿವಾರ ಎನ್ ವಿ ಮೈದಾನದಲ್ಲಿ ಚುನಾವಣೆ ಪ್ರಚಾರದಲ್ಲಿ ಕಾಂಗ್ರೆಸ್ ಭ್ರಷ್ಟಾಚಾರ ಮಾಡುವ ಪಕ್ಷವಾಗಿದೆ ಎಂದು ದುರಿದ್ದು ಹಾಸ್ಯಸ್ಪದ ಹೇಳಿಕೆಯಾಗಿದೆ ಎಂದರು.
ಕಾಂಗ್ರೆಸ್ ಮತ್ತು ಅದರ ಫ್ಯಾಮಿಲಿಗಳು ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದೆ ಎಂದು ಹೇಳಿರುವ ಮೋದಿ ಅವರು ಹಿಂದಿನ ಬಿಜೆಪಿ ಸರಕಾರದ ಅಧಿಕಾರದಲ್ಲಿ 40% ಕಮಿಷನ್ ದಂಧೆ ನಡೆಸಿರುವುದು ಮೋದಿ ಅವರು ಮರೆತಿದ್ದಾರೆ. ಕಾಂಗ್ರೆಸ್ ಪಕ್ಷ ರಾಜ್ಯದ ಬಡಜನರಿಗೆ ಗ್ಯಾರಂಟಿ ರೂಪದಲ್ಲಿ ಬಡವರ ದುಡ್ಡನ್ನು ಮರಳಿ ಬಡವರಿಗೆ ನೀಡುವ ಕೆಲಸ ಮಾಡುತ್ತಿದರೇ ಅದನ್ನು ಭ್ರಷ್ಟಾಚಾರ ಎಂದು ಹೇಳುತ್ತಿದ್ದಾರೆ. ಮೋದಿ ಅವರು ಅದಾನಿ ಮತ್ತು ಅಂಬಾನಿದಂತಹ ಫ್ಯಾಮಿಲಿಗಳೊಂದಿಗೆ ನಿಂತಿದ್ದಾರೆ ಕೀಡಿಕಾರಿದರು.
ಬಿಜೆಪಿಯಿಂದ ಒಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ: ಕಳೇದ ಲೋಕಸಭೆಯಲ್ಲಿ ರಾಜ್ಯದಿಂದ 25 ಎಂಪಿಗಳನ್ನು ಗೆದ್ದಿದರು. ಆದರೂ ಮೋದಿ ಅವರು ರಾಜ್ಯಕ್ಕೆ ಕೊಟ್ಟಿದ್ದು ಶೂನ್ಯ. ಈ ಬಾರಿ ಕಲಬುರಗಿಯಿಂದಲ್ಲೇ ಲೋಕಸಭೆ ಚುನಾವಣೆ ಪ್ರಾಚಾರಕ್ಕೆ ಚಾಲನೆ ನೀಡಿರುವ ಮೋದಿ ಅವರು ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕ್ಕೆ ಅವರ ಕುಡುಗೆ ಏನು ಎಂಬುದು ಹೇಳಬೇಕಿತ್ತು. 11 ವರ್ಷದ ಆಡಳಿತ ನಡೆಸಿರುವ ಬಿಜೆಪಿ ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಂದು ಉತ್ತಮವಾದ ಸಂಸ್ಥೆ ತೆರೆಯಲು ಸಾಧ್ಯವಾಗಿಲ್ಲ. ಒಂದು ಅಭಿವೃದ್ಧಿ ಕೆಲಸಕ್ಕೆ ಶಿಲಾನ್ಯಾಸ ಮಾಡಲು ಸಾಧ್ಯವಾಗಿಲ್ಲ. ಕನಿಷ್ಠ ಪಕ್ಷ ಕಲ್ಯಾಣ ಕರ್ನಾಟಕ ಮತ್ತು ಕಲಬುರಗಿ ಜಿಲ್ಲೆಯ ಒಬ್ಬರನ್ನು ಸಚಿವರಾಗಿ ಮಾಡಲಿಲ್ಲ. ಬಿಜೆಪಿಯವರಿಗೆ ಈ ಭಾಗದ ಜನರನ್ನು ಕಂಡರೆ ಅಗಲ್ಲ. ಅಸುಹೆ ಪಡುತ್ತಾರೆ ಎಂದು ದುರಿದರು.
ಬಿಜೆಪಿಯಿಂದ ಕಲಬುರಗಿಗೆ ಮಲತಾಯಿ ಧೋರಣೆ ಸಿಕ್ಕಿದೆ. ಕಲ್ಯಾಣ ಕರ್ನಾಟಕದ ಬಗ್ಗೆ ಬಿಜೆಪಿ ಮತ್ತು ನರೇಂದ್ರ ಮೋದಿಗೆ ಸಾಕಷ್ಟು ಅಸುಹೆ ಇದೆ. ಐದು ವರ್ಷ ಲೋಕಸಭಾ ಸದಸ್ಯರಾಗಿರುವ ಡಾ. ಉಮೇಶ್ ಜಾಧವ್ ಹೊಸ ಅಭ್ಯರ್ಥಿಯಂತೆ ಕಾರ್ಯಕ್ರಮದಲ್ಲಿ ಜನರಿಗೆ ಪರಿಚಯಿಸಿಕೊಟ್ಟಿದ್ದು ಒಳೆಯದಾಯಿತು. ಏಕೆಂದರೆ ಅವರ ಸಾಧನೆ ಶೂನ್ಯಾಗಿರುವುದರಿಂದ ಪರಿಚಯಿಸುವ ಅಗತ್ಯವಿತು ಎಂದರು.
ಜಾಧವ್ ಅವರು ಐದು ವರ್ಷಗಳ ವರೆಗೆ ಈ ಭಾಗದ ಸಮಸ್ಯೆಯನ್ನು ಸಂಬಂಧ ಪಟ್ಟ ಇಲಾಖೆಯ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ಮನವಿ ಕೋಡುವುದರಲ್ಲಿ ಕಳೆದಿದ್ದಾರೆ. ಜನಪ್ರತಿನಿಧಿಯಾಗಿ ಜನರ ಕೆಲಸ ಮಾಡಿಸಿಕೊಡುವುದು ಅವರ ದಾಯಿತ್ವವಾಗಿದೆ. ಅದನ್ನು ಅವರು ಮಾಡಿಲ್ಲ ಎಂದರು.
ಮೋದಿ ಪತ್ರಿಕಾಗೋಷ್ಠಿ ಏಕೆ ಮಾಡಿಲ್ಲ: ಪ್ರಜಾಪ್ರಭುತ್ವ ದೇಶದಲ್ಲಿ ಪ್ರಧಾನಿಯಾದವರು ಪತ್ರಿಕಾ ಗೋಷ್ಠಿಗಳು ಮಾಡುವುದು ಸಂಪ್ರದಾಯ. ಆದರೆ 10 ವರ್ಷಗಳು ಕಳೆದರು ಮೋದಿ ಅವರಿಂದ ಒಂದೇ ಒಂದು ಪತ್ರಿಕಾ ಗೋಷ್ಠಿ ಅಗಿಲ್ಲ. ಈ ಬಗ್ಗೆ ಮಾಧ್ಯಮಗಳು ಪ್ರಶ್ನೆನೇ ಮಾಡಲ್ಲ. ವಿರೋಧ ಪಕ್ಷಗಳಿಗೆ ಮಾತ್ರ ಪ್ರಶ್ನೆಸುವುದು ಮಾಧ್ಯಮಗಳ ಕೆಲಸವಾಗಿದೆ. ಮಾಧ್ಯಮ ಸಂವಿಧಾನದ ನಾಲ್ಕನೇ ಅಂಗ ಎಂದು ಹೇಳಲಾಗುತ್ತಿದೆ. ಮೋದಿ ಅವರು ಡಿಕ್ಟೆಟರ್ ಶೀಪ್ ನಡೆಸುತ್ತಿದ್ದಾರೆ. ಅವರಿಗೆ ಪ್ರಶ್ನೆ ಮಾಡುವಂತಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಕೆಲಸ ಮೋದಿ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗದೇವ್ ಗುತ್ತೇದಾರ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಸುಭಾಷ ರಾಠೋಡ್ ಸೇರಿದಂತೆ ಹಲವರು ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…