ಬೆಂಗಳೂರು; ಸಿಐಡಿ ಘಟಕದ ತನಿಖಾಧಿಕಾರಿಗಳಿಂದ ತನಿಖೆಯಾಗಿರುವ, ಬೆಂಗಳೂರು ನಗರ, ರಾಮಮೂರ್ತಿನಗರ ಪೆÇಲೀಸ್ ಠಾಣೆ ಮೊ.ಸಂ:61/2011, ಕಲಂ 465, 468, 471, 420 ಐ.ಪಿ.ಸಿ, ಕೋಲಾರ ಜಿಲ್ಲೆ, ಬೇತಮಂಗಲ ಪೆÇಲೀಸ್ ಠಾಣೆ ಮೊ.ಸಂ:82/2013, ಕಲಂ 419, 465, 468, 470, 120(ಬಿ) ಐ.ಪಿ.ಸಿ ಹಾಗೂ ಸೈಬರ್ ಕ್ರೈಂ ಪೆÇಲೀಸ್ ಠಾಣೆ, ಸಿಐಡಿ, ಬೆಂಗಳೂರು ಮೊ.ಸಂ:01 / 2017, ಕಲಂ 67(ಂ) oಜಿ Iಟಿಜಿoಡಿmಚಿಣioಟಿ ಖಿeಛಿhಟಿoಟogಥಿ ಂಛಿಣ 2000 ಪ್ರಕರಣಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಿ ಆರೋಪಿತರ ವಿರುದ್ಧ ದೋμÁರೋಪಣೆ ಪಟ್ಟಿಯನ್ನು ಸಲ್ಲಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗಳಿಗೆ ಸಜೆಯನ್ನು ವಿಧಿಸಿ ಆದೇಶಿಸಿರುತ್ತದೆ.
1. ಬೆಂಗಳೂರು ನಗರ, ರಾಮಮೂರ್ತಿನಗರ ಪೆÇಲೀಸ್ ಠಾಣೆ ಮೊ.ಸಂ: 61/2011, ಕಲಂ 465, 468, 471, 420 ಐ.ಪಿ.ಸಿ – ಗೌರವಾನ್ವಿತ ಮಾನ್ಯ 48ನೇ ಸಿಸಿಹೆಚ್ ನ್ಯಾಯಾಲಯದ ನ್ಯಾಯಾಧೀಶರು ಆರೋಪಿತನಾದ ಜಾನ್ ಮೈಕೆಲ್, ಜಿಂಕೆ ತಿಮ್ಮನಹಳ್ಳಿ, ಟಿಸಿ ಪಾಳ್ಯ, ಬೆಂಗಳೂರು, ಈತನಿಗೆ 05 ವರ್ಷಗಳ ಕಠಿಣ ಶಿಕ್ಷೆ ಮತ್ತು ರೂ. 44,10,000/- ಗಳ ದಂಡವನ್ನು ವಿಧಿಸಿ ದಿನಾಂಕ: 16.03.2024 ರಂದು ತೀರ್ಪನ್ನು ನೀಡಿ ಆದೇಶ ಹೊರಡಿಸಿರುತ್ತಾರೆ.
ಆರೋಪಿತನಾದ ಜಾನ್ ಮೈಕೆಲ್ ತಾನು ಮುಖ್ಯ ಮಂತ್ರಿಯವರ ಆಪ್ತ ಕಾರ್ಯದರ್ಶಿ, ಹಾಗೂ ಆಡಳಿತಾತ್ಮಕವಾಗಿ, ರಾಜಕೀಯವಾಗಿ ತುಂಬಾ ಪ್ರಭಾವವಿರುವವನು ಎಂದು ನಂಬಿಸಿ, ತನ್ನ ಪ್ರಭಾವದಿಂದ ಮುಖ್ಯಮಂತ್ರಿಗಳ ವಿವೇಚನಾ ಕೋಟಾದಲ್ಲಿ ಬಿಡಿಎ ಇಂದ ಸೈಟ್‍ಗಳನ್ನು ಮಾಡಿಸಿಕೊಡುತ್ತೇನೆಂದು ತಪ್ಪು ಮಾಹಿತಿಯನ್ನು ನೀಡಿ ಇಬ್ಬರಿಂದ ರೂ. 30,82,032/- ಗಳ ಹಣವನ್ನು ಪಡೆದುಕೊಂಡು ಸೈಟ್‍ಗಳಿಗೆ ಸಂಬಂದಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವುಗಳನ್ನು ನೈಜವೆಂದು ಸಾಕ್ಷಿದಾರರಿಗೆ ನೀಡಿ, ಅವರಿಗೆ ನಷ್ಟವನ್ನುಂಟು ಮಾಡಿ ತಾನು ಅನಧೀಕೃತವಾಗಿ ಲಾಭ ಗಳಿಸಿ ನಿವೇಶನವನ್ನು ನೀಡದೇ ಹಣವನ್ನು ಸಹ ವಾಪಸ್ಸು ನೀಡದೇ ಮೋಸ ಮಾಡಿದ್ದರಿಂದ ಜಾನ್ ಮೈಕೆಲ್ ವಿರುದ್ದ ರಾಮಮೂರ್ತಿನಗರ ಪೆÇಲೀಸ್ ಠಾಣೆ ಬೆಂಗಳೂರು ಇಲ್ಲಿ ಪ್ರಕರಣ ದಾಖಲಾಗಿರುತ್ತದೆ.
2. ಕೋಲಾರ ಜಿಲ್ಲೆ, ಬೇತಮಂಗಲ ಪೆÇಲೀಸ್ ಠಾಣೆ ಮೊ.ಸಂ: 82/2013, ಕಲಂ 419, 465, 468, 470, 120(ಬಿ) ಐ.ಪಿ.ಸಿ – ಗೌರವಾನ್ವಿತ ಮಾನ್ಯ ಸೀನಿಯರ್ ಸಿಜೆ ಮತ್ತು ಜೆಎಂಎಫ್‍ಸಿ ಕೆಜಿಎಫ್, ನ್ಯಾಯಾಲಯದ ನ್ಯಾಯಾಧೀಶರು ಈ ಪ್ರಕರಣದ ಆರೋಪಿತನಾದ ಮರಿಯಪ್ಪ ಈತನಿಗೆ 06 ತಿಂಗಳ ಸಾದಾ ಶಿಕ್ಷೆ ಮತ್ತು ರೂ. 6,000/- ಗಳ ದಂಡವನ್ನು ವಿಧಿಸಿ ದಿನಾಂಕ: 15.03.2024 ರಂದು ತೀರ್ಪನ್ನು ನೀಡಿ ಆದೇಶ ಹೊರಡಿಸಿರುತ್ತಾರೆ.
ಬಂಗಾರಪೇಟೆ ತಾಲ್ಲೂಕು ಕಗ್ಗಲಳ್ಳಿ ಗ್ರಾಮದ ಸರ್ವೇ ನಂ. 61/3 ರಲ್ಲಿ 01 ಎಕರೆ 23 ಗುಂಟೆ ಜಮೀನಿಗೆ ಬೀರಪ್ಪ ಬಿನ್ ಮುನಿಯಪ್ಪ ರವರು ಮಾಲೀಕರಾಗಿರುತ್ತಾರೆ. ಶಿಕ್ಷೆಗೈದ ಆರೋಪಿ ಮರಿಯಪ್ಪ ಈತ ತಾನೇ ಬೀರಪ್ಪ ಎಂದು ನಟಿಸಿ ಮೇಲ್ಕಾಣಿಸಿದ ಜಮೀನಿನಲ್ಲಿ 28 ಗುಂಟೆ ಜಮೀನನ್ನು ರಾಮಪ್ಪ ಇವರಿಗೆ ನೊಂದಾಯಿತ ಜಿಪಿಎ ಅಧಿಕಾರ ಪತ್ರ ನೀಡಿ ಹಕ್ಕು ಬದಲಾವಣೆ ಮಾಡಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಿ ಪಿರ್ಯಾದಿ ಬೀರಪ್ಪ ರವರಿಗೆ ಅಕ್ರಮ ನಷ್ಟ ಉಂಟು ಮಾಡಿದ ಕೃತ್ಯಕ್ಕಾಗಿ ಕೋಲಾರ ಜಿಲ್ಲೆ ಬೇತಮಂಗಲ ಪೆÇೀಲಿಸ್ ಠಾಣೆಯಲ್ಲಿ ಆರೋಪಿ ಮರಿಯಪ್ಪನ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ.
3. ಸೈಬರ್ ಕ್ರೈಂ ಪೆÇಲೀಸ್ ಠಾಣೆ, ಸಿಐಡಿ, ಬೆಂಗಳೂರು ಮೊ.ಸಂ: 01/2017, ಕಲಂ 67(ಂ) oಜಿ Iಟಿಜಿoಡಿmಚಿಣioಟಿ ಖಿeಛಿhಟಿoಟogಥಿ ಂಛಿಣ 2000 – ಗೌರವಾನ್ವಿತ 1ನೇ ಅಧಿಕ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರು ಆರೋಪಿತನಾದ ರಾಘವನ್ ಸಂಪತ್, ಸುಬ್ರಹ್ಮಣ್ಯ ನಗರ ಬೆಂಗಳೂರು, ಈತನಿಗೆ 01 ತಿಂಗಳ ಸಾದಾ ಶಿಕ್ಷೆ ಮತ್ತು ರೂ 45,000/- ಗಳ ದಂಢವನ್ನು ವಿಧಿಸಿ ದಿನಾಂಕ: 14.03.2024 ರಂದು ತೀರ್ಪು ನೀಡಿ ಆದೇಶ ಹೊರಡಿಸಿರುತ್ತಾರೆ.
ಆರೋಪಿತನಾದ ರಾಘವನ್ ಸಂಪತ್, ಈತನು ತನ್ನ ಇ-ಮೇಲ್ ಮುಖಾಂತರ ಆಶ್ಲೀಲ ವಿಡಿಯೋ ವನ್ನು ಪಿರ್ಯಾದುದಾರರ ಇ-ಮೇಲ್ ಐಡಿ ಗೆ ಕಳುಹಿಸಿದ್ದು, ಕಾರಣ ಪಿರ್ಯಾದುದಾರಳು ಆರೋಪಿತನ ವಿರುದ್ಧ ದೂರನ್ನು ಸಲ್ಲಿಸಿದ್ದು, ಸಿಐಡಿ ಘಟಕದ ಸೈಬರ್ ಕ್ರೈಂ ಪೆÇಲೀಸ್ ಠಾಣೆ, ಬೆಂಗಳೂರು ಇಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪೆÇಲೀಸ್ ಮಹಾನಿರ್ದೇಶಕರು, ಸಿಐಡಿ, ಬೆಂಗಳೂರು ರವರು ಮೇಲ್ಕಂಡ ಪ್ರಕರಣಗಳ ತನಿಖಾಧಿಕಾರಿಗಳ ಹಾಗೂ ಮೇಲ್ವಿಚಾರಣಾಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶಂಶಿಸಿ ಅಭಿನಂದಿಸಿರುತ್ತಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…