ಬಿಸಿ ಬಿಸಿ ಸುದ್ದಿ

ಅಂಬೇಡ್ಕರ ಜಯಂತಿ ಆಚರಣೆ ಸಮಿತಿಗೆ ವೆಂಕಟೇಶ ನೇಮಕ

ಸುರಪುರ: ಜಗತ್ತಿನ ಎಲ್ಲಾ  ರಾಷ್ಟ್ರಗಳು ಮೆಚ್ಚುವಂತಹ ಸಂವಿಧಾನ ರಚಿಸಿಕೊಟ್ಟ ಡಾ:ಬಾಬಾ ಸಾಹೇಬ ಅಂಬೇಡ್ಕರರನ್ನು ಸ್ಮರಿಸಬೇಕಾಗಿದ್ದು ದೇಶದ ಎಲ್ಲರ ಕರ್ತವ್ಯವಾಗಿದೆ ಎಂದು ದಲಿತ ಮುಖಂಡ ವೆಂಕಟೇಶ ಹೊಸ್ಮನಿ ಮಾತನಾಡಿದರು.

ಡಾ:ಬಾಬಾ ಸಾಹೇಬ ಅಂಬೇಡ್ಕರರ 128ನೇ ಜಯಂತಿ ಆಚರಣೆ ಅಂಗವಾಗಿ ನಗರದ ಬುಧ್ಧ ವಿಹಾರದಲ್ಲಿ ನಡೆದ ಪೂರ್ವಭಾವಿ ಸಭೇಯಲ್ಲಿ ಭಾಗವಹಿಸಿ ಮಾತನಾಡಿ,ದೇಶದಲ್ಲಿ ಇಂದು ದೀನ ದಲಿತ ಬಡವ ಶೋಷಿತ ಎಲ್ಲರಿಗು ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಸೌಲಭ್ಯ ಸಿಗಲು ಬಾಬಾ ಸಾಹೇಬರ ಸಂವಿಧಾನ ಕಾರಣವಾಗಿದೆ.ಅಂತಹ ಮಹನಿಯರ ಜಯಂತಿಯನ್ನು ಎಲ್ಲರು ಸೇರಿ ವಿಜೃಂಭಣೆಯಿಂದ ಆಚರಿಸೋಣ ಎಂದರು.

ಸಭೆಯಲ್ಲಿದ್ದ ಬಹುಜನ ಅಂಬೇಡ್ಕರ ಸಂಘದ ಜಿಲ್ಲಾಧ್ಯಕ್ಷ ರಾಹುಲ್ ಹುಲಿಮನಿ ಮಾತನಾಡಿ,ದೇಶದೆಲ್ಲೆಡೆ ಬಾಬಾ ಸಾಹೇಬರ ಜಯಂತಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ,ಅದರಂತೆ ನಮ್ಮ ತಾಲ್ಲೂಕಿನಲ್ಲಿಯೂ ಅಧ್ಧೂರಿಯಾಗಿ ಜಯಂತಿ ಆಚರಿಸಲಾಗುವುದು,ಆದ್ದರಿಂದ ಇಂದು ರಚಿಸಲಾದ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷರನ್ನಾಗಿ ಎಲ್ಲರು ಸರ್ವಾನುಮತದಿಂದ ವೆಂಕಟೇಶ ಹೊಸ್ಮನಿಯವರನ್ನು ನೇಮಕಗೊಳಿಸಲಾಗಿದೆ,ಅದರಂತೆ ಸಮಿತಿ ಗೌರವಾಧ್ಯಕ್ಷರನ್ನಾಗಿ ಧರ್ಮಣ್ಣ ಹುಲಿ,ಉಪಾಧ್ಯಕ್ಷರನ್ನಾಗಿ ನಾಗಣ್ಣ ಕಲ್ಲದೇವನಹಳ್ಳಿ,ನಿಂಗಣ್ಣ ಗೋನಾಲ,ಪ್ರಧಾನ ಕಾರ್ಯದರ್ಶಿಯನ್ನಾಗಿ ರಾಜು ಕೆ. ಕಾರ್ಯದರ್ಶಿಯನ್ನಾಗಿ ಶಿವಲಿಂಗ ಹಸನಾಪುರ,ಸಂಘಟನಾ ಕಾರ್ಯದರ್ಶಿಯ್ನನಾಗಿ ಮಲ್ಲಿಕಾರ್ಜುನ ವಾಗಣಗೇರಾ ಹಾಗು ಖಜಾಂಚಿಯನ್ನಾಗಿ ಮಾಳಪ್ಪ ಕಿರದಳ್ಳಿಯವರನ್ನು ನೇಮಿಸಲಾಗಿದೆ ಎಂದರು.

ಅದೇರೀತಿಯಲ್ಲಿ ಹಣಕಾಸು ಸಮಿತಿ ಅಧ್ಯಕ್ಷರನ್ನಾಗಿ ರಾಹುಲ್ ಹುಲಿಮನಿ,ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ರಾಮಣ್ಣ ಕಲ್ಲದೇವನಹಳ್ಳಿ,ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಭೀಮರಾಯ ಸಿಂಧಗೇರಿ,ಆಹಾರ ಸಮಿತಿ ಅಧ್ಯಕ್ಷರನ್ನಾಗಿ ಅಮೇಶ ಅರಕೇರಿ,ಮೆರವಣಿಗೆ ಸಮಿತಿ ಅಧ್ಯಕ್ಷರನ್ನಾಗಿ ವೆಂಕಟೇಶ ಸುರಪುರಕರ್,ವೇದಿಕೆ ಸಮಿತಿ ಅಧ್ಯಕ್ಷರನ್ನಾಗಿ ಆದಪ್ಪ ಹೊಸ್ಮನಿಯವರನ್ನು ಹಾಗು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷರನ್ನಾಗಿ ದೇವಿಂದ್ರಪ್ಪ ಪತ್ತಾರವರನ್ನು ನೇಮಿಸಲಾಯಿತು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

10 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

10 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

10 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago