ಬಿಸಿ ಬಿಸಿ ಸುದ್ದಿ

ಶರಣರ ಚರಿತ್ರೆ ನಮ್ಮ ಬದುಕಿಗೆ ಅಮೃತವಾಗಬೇಕು

ಸುರಪುರ: ಶರಣರ ಚರಿತ್ರೆ ಎನ್ನುವುದು ನಮ್ಮ ಬದುಕಿಗೆ ಅಮೃತವಾಗಬೇಕು ಎನ್ನುವ ಉದ್ದೇಶ ದಿಂದ ಈ ಕಾರ್ಯಕ್ರಮವನ್ನು ಶರಣರ ಚರಿತಾಮೃತ ಎಂದು ಇಡಲಾಗಿದೆ ಎಂದು ದೇವಾಪುರ ಜಡಿಶಾಂತಲಿಂಗೇಶ್ವರ ಹಿರೇಮಠದ ಪೂಜ್ಯರಾದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನುಡಿದರು.

ನಗರದ ಕಬಾಡಗೇರದಲ್ಲಿ ಕಡ್ಲೆಪ್ಪನವರ ನಿಷ್ಠಿ ವಿರಕ್ತ ಮಠದಲ್ಲಿ ಮಲ್ಲಿಕಾರ್ಜುನ ಮಹಾಸ್ವಾಮಿಗಳ 48ನೇ ಪುಣ್ಯಸ್ಮರಣೆ ಅಂಗವಾಗಿ ಕಳೆದ ಒಂಬತ್ತು ದಿನಗಳಿಂದ ನಡೆದ ಶರಣರ ಚರಿತಾಮೃತ ಪ್ರವಚನ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ,ಶರಣರು ನಡೆಯಲ್ಲಿ ಎಚ್ಚೆತ್ತು ನುಡಿಯಲ್ಲಿ ತಪ್ಪಿದರೆ ಹಿಡಿಯಲ್ಲಿದ್ದ ಲಿಂಗ ಘಟಸರ್ಪ ನೋಡ ಎಂದು ಎಚ್ಚರಿಸಿದರು,ಅಲ್ಲದೆ ನಡೆ ನುಡಿ ಒಂದಾಗಿಸಿಕೊಂಡು ನಡೆದರು,ಬಸವಣ್ಣನವರು ಇಂದಿನ ಎಲ್ಲಾ ಮಠಗಳು ಮಾಡುತ್ತಿರುವ ಕೆಲಸವನ್ನು 12ನೇ ಶತಮಾನದಲ್ಲಿ ಸರ್ವ ಜನಾಂಗದ ಶರಣರೊಡಗೂಡಿ ಅನುಭವ ಮಂಟಪದ ಮೂಲಕ ಮಾಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ ನಾಯಕ ಮಾತನಾಡಿ,ಈ ಮಠದಿಂದ ತುಂಬಾ ಉತ್ತಮವಾದ ಕಾರ್ಯಗಳು ನಡೆಯುತ್ತಿದ್ದು,ಮಠದ ಎಲ್ಲಾ ಕಾರ್ಯಗಳಿಗೆ ನಾನು ಸದಾಕಾಲ ಜೊತೆಗಿರುವೆ ಎಂದರು.

ಇದೇ ಸಂದರ್ಭದಲ್ಲಿ ಕಲಬುರ್ಗಿ ಯಾದಗಿರಿ ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಡಾ:ಸುರೇಶ ಸಜ್ಜನ್ ಮಾತನಾಡಿ,ಬಸವಾದಿ ಶರಣರ ವಚನಗಳನ್ನು ನಾವೆಲ್ಲರು ಬದುಕಿನಲ್ಲಿ ಅಳವಡಿಸಿಕೊಂಡು ನಮ್ಮ ಬದುಕು ಹಸನಾಗಲಿದೆ ಎಂದು,ಮಾಡಿ ಮಾಡಿ ಕೆಟ್ಟರೊ ಮನವಿಲ್ಲದೆ,ನೀಡಿ ನೀಡಿ ಕೆಟ್ಟರೋ ನಿಜವಿಲ್ಲದೆ ಮಾಡುವ ನಿಡುವ ನಿಜಗುಣವುಳ್ಳಡೆ ಬೇಡಿತ್ತ ನೀವ ನಮ್ಮ ಕೂಡಲ ಸಂಗಮದೇವ ಎನ್ನುವುದನ್ನು ನಾವೆಲ್ಲರು ಅರಿತುಕೊಳ್ಳಬೇಕು ಎಂದರು.

ಕಾರ್ಯಕ್ರಮದ ನೇತೃತ್ವವಹಿಸಿದ್ದ ಪ್ರಭುಲಿಂಗ ಮಹಾಸ್ವಾಮೀಜಿಯವರ ಮಾತನಾಡಿ,ನಾವೆಲ್ಲರು ಶರಣರ ವಿಚಾರಗಳನ್ನು ಬಿಟ್ಟು ನಡೆಯುತ್ತಿರುವುದರಿಂದ ಕಷ್ಟಗಳು ಬರುತ್ತವೆ,ಕೊರಳಲ್ಲಿ ಲಿಂಗ,ಹಣೆಯಲ್ಲಿ ವಿಭೂತಿ,ರುದ್ರಾಕ್ಷಿಯನ್ನು ಧರಿಸಿದರೆ ಯಾವುದೇ ಕೆಟ್ಟ ಯೋಚನೆಗಳು ಮನುಸ್ಸನಲ್ಲಿ ಬರುವುದಿಲ್ಲ, ನಾವು ಶರಣರ ಆಚಾರ ವಿಚಾರ ಬಿಟ್ಟು ನಡೆಯುತ್ತಿರುವುದು ದುಖಃಕ್ಕೆ ಕಾರಣವಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಗಜೇಂದ್ರಗಡದ ಕಾಲಜ್ಞಾನ ಮಠದ ಡಾ:ಶರಣಬಸವೇಶ್ವರ ಮಹಾಸ್ವಾಮಿಯವರು ಮುಂಬರುವ ದಿನಗಳಲ್ಲಿಯ ದೇಶದಲ್ಲಿನ ಆಗುಹೋಗುಗಳ ಕುರಿತು ಕಾಲಜ್ಞಾನದ ವಿಚಾರವನ್ನು ತಿಳಿಸಿದರು.ವೇದಿಕೆ ಮೇಲೆ ಮುಖಂಡರಾದ ಬಸವರಾಜಪ್ಪ ನಿಷ್ಠಿ ದೇಶಮುಖ,ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ದೊಡ್ಡಪ್ಪ ಎಸ್.ನಿಷ್ಠಿ,ವೇಣುಮಾಧವ ನಾಯಕ ಇದ್ದರು.

ಇದೇ ಸಂದರ್ಭದಲ್ಲಿ ಪತ್ರಕರ್ತರನ್ನು ಹಾಗೂ ಕಾರ್ಯಕ್ರಮದಲ್ಲಿ ಒಂಬತ್ತು ದಿನಗಳ ಕಾಲ ವಿವಿಧ ಸೇವೆಗೈದವರನ್ನು ಸತ್ಕರಿಸಲಾಯಿತು.ಹೆಚ್.ರಾಠೋಡ ನಿರೂಪಿಸಿದರು,ಕಸಾಪ ಅಧ್ಯಕ್ಷ ಶರಣಬಸಪ್ಪ ಯಾಳವಾರ ಸ್ವಾಗತಿಸಿದರು,ದೇವು ಹೆಬ್ಬಾಳ ವಂದಿಸಿದರು.

ಕ್ರೋಧಿನಾಮ ಸಂವತ್ಸವ ಬರುವುದರಿಂದ ದೇಶದ ಜನರಲ್ಲಿ ಪರಸ್ಪರ ಕ್ರೋಧ ಹೆಚ್ಚಲಿದೆ.ಈಬಾರಿ 13 ಮಳೆಗಳು ಸಂಪೂರ್ಣವಾಗಿ ಬರುವುದರಿಂದ ರೈತನಿಗೆ ತುಂಬಾ ಸಂತೋಷ ಲಭಿಸಲಿದೆ.ಭತ್ತ 3 ಸಾವಿರ ರೂಪಾಯಿಗೆ ಕ್ವಿಂಟಾಲ್ ಮಾರಾಟವಾಗಲಿದೆ.ಸಣ್ಣ ಸಣ್ಣ ಮಕ್ಕಳಿಗೆ ಮಾರಣಾಂತಿಕ ಕಾಯಿಲೆ ಬರುವ ಸಾಧ್ಯತೆ ಇದೆ.ಭಾರತ ದೇಶದ ಅತ್ಯೂನ್ನತ ಐಎಎಸ್ ಪರೀಕ್ಷೆಯಲ್ಲಿ ಕರ್ನಾಟಕದವರೆ ಹೆಚ್ಚು ಜನ ಉತ್ತೀರ್ಣರಾಗಲಿದ್ದು,ಸುರಪುರದವರು ಎರಡು ಜನ ಪಾಸಾಗಲಿದ್ದಾರೆ ಎಂದರು.ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರೆ ಮೇಲುಗೈ ಸಾಧಿಸಲಿದ್ದಾರೆ,6 ಜನ ವಿದ್ಯಾರ್ಥಿನಿಯರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯಲಿದ್ದಾರೆ.ಆರ್ಥಿಕತೆಯಲ್ಲಿ ಎಲ್ಲಾ ದೇಶಗಳು ಸಾಲದ ಸುಳಿಗೆ ಸಿಲುಕುತ್ತವೆ,ಭಾರತ ದೇಶ ಶ್ರೀಮಂತಿಕೆಯಿಂದ ನೆರೆಯ ದೇಶಗಳಿಗೆ ದಾನ ಕೊಡುವ ಶ್ರೀಮಂತ ದೇಶ ಎನಿಸುತ್ತದೆ.ರಾಜಕೀಯವಾಗಿ ನೋಡುವುದಾದರೆ ಈಗ ನೀತಿಸಂಹಿತೆ ಇರುವುದರಿಂದ ಸಂಕ್ಷಿಪ್ತವಾಗಿ ಹೇಳುವುದಾದರೆ ಒಂದು ಪಕ್ಷ 425 ಸೀಟು ಗೆದ್ದು ಅಧಿಕಾರ ನಡೆಸಲಿದೆ. – ಡಾ:ಶರಣಬಸವೇಶ್ವರ ಮಹಾಸ್ವಾಮಿ ಕಾಲಜ್ಞಾನ ಮಠ ಗಜೇಂದ್ರಗಡ

emedialine

Recent Posts

ಸುರಪುರ-ಕಲಬುರ್ಗಿ ಸಗರನಾಡು ಬಸ್‍ಗಳ ಸಂಚಾರ ಹೆಚ್ಚಿಸಿ; ರಮೇಶ ದೊರೆ

ಸುರಪುರ: ನಗರದಿಂದ ಕಲಬುರಗಿ ನಗರಕ್ಕೆ ಸಗರನಾಡು ಬಸ್‍ಗಳ ಸಂಚಾರದಲ್ಲಿ ಸಾಕಷ್ಟು ಕಡಿಮೆಗೊಂಡಿದ್ದು ಇದರಿಂದಾಗಿ ಸುರಪುರ ದಿಂದ ಕಲಬುರಗಿ ನಗರಕ್ಕೆ ಸಂಚರಿಸಲು…

10 hours ago

ಸುರಪುರ:ಬಸ್ ಪಾಸ್ ನೀಡಲು ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

ಸುರಪುರ: ತಾಲೂಕಿನ ಎಲ್ಲಾ ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡುವಂತೆ ಹಾಗೂ ವಿವಿಧ ಗ್ರಾಮಗಳಿಗೆ ಬಸ್ ಓಡಿಸಲು ಆಗ್ರಹಿಸಿ ಅಖಿಲ ಭಾರತ…

10 hours ago

ಬೆಂಗಳೂರ ನಿರ್ಮಾತೃ ಕೆಂಪೇಗೌಡ ಹೆಸರು ಅಜಾರಾಮರ

ಸುರಪುರ:ಬೆಂಗಳೂರ ನಿರ್ಮತೃ ನಾಡಪ್ರಭು ಕೆಂಪೇಗೌಡ ಅವರು ಭಾರತದ ಇತಿಹಾಸದಲ್ಲಿ ಅವರ ಹೆಸರು ಅಜರಾಮರವಾಗಿದೆ ಎಂದು ತಹಸಿಲ್ದಾರ್ ಕೆ.ವಿಜಯಕುಮಾತ ಮಾತನಾಡಿದರು. ನಗರದ…

10 hours ago

ಸಿಮೆಂಟ್ ಕಾರ್ಖಾನೆಗಳಲ್ಲಿ 50% ಸ್ಥಳಿಯರಿಗೆ ಉದ್ಯೋಗ ನೀಡಲು ಕೇಂದ್ರ ಸಚಿವರಿಗೆ ಮನವಿ

ಶಹಾಬಾದ, ಕಡೇಚೂರು-ಬಾಡಿಯಾಳ ಕಾರ್ಖಾನೆ ಪುನರ ಪ್ರಾರಂಭಿಸಲು ಮನವಿ ಕಲಬುರಗಿ : ಕಲಬುರಗಿ ಜಿಲ್ಲೆಯಲ್ಲಿ ಅನೇಕ ಸಿಮೆಂಟ್ ಕಾರ್ಖಾನೆ ಹಾಗೂ ಸಕ್ಕರೆ…

10 hours ago

ಶಾಲೆ-ಅಂಗನವಾಡಿಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ವ್ಯವಸ್ಥೆ ವೀಕ್ಷಣೆ

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರ ಭೇಟಿ  ಕಲಬುರಗಿ; ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ…

10 hours ago

ದಲಿತ ಚಳುವಳಿಗೆ: ಹಾಸನದಲ್ಲಿ 50ನೇ ವರ್ಷ ರಾಜ್ಯಮಟ್ಟದ ಸಮಾವೇಶ ಜೂನ್ 29ರಂದು

ಕೊಪ್ಪಳ : ದಲಿತ ಚಳುವಳಿಯ ರೂವಾರಿ ಪ್ರೊ.ಬಿ,ಕೃಷ್ಣಪ್ಪ ಅವರ ಜನುಮ ದಿನ ಹಾಗೂ ದಲಿತ ಚಳುವಳಿ ಗೆ 50 ವರ್ಷ…

10 hours ago