ಕಲಬುರಗಿ: ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ವಾರ್ಡ್ ಸಂಖ್ಯೆ 55 ರಲ್ಲಿನ ಸಾಯಿ ರಾಮ ನಗರದಲ್ಲಿ ಹದಗೆಟ್ಟ ಡ್ರೈನೆಜ್ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಬಡಾವಣೆಯ ಜನರು ನಲುಗಿ ಹೋಗಿದ್ದಾರೆ.
ಬಡಾವಣೆಯಲ್ಲಿ ಸುಮಾರು 1 ರಿಂದ 2 ತಿಂಗಳಲ್ಲಿ ಡೈನೆಜ್‍ಗಳು ತುಂಬಿ ರಸ್ತೆಯ ಮೇಲೆ ಗಲಿಜು ನೀರು ಹರಿಯುತ್ತಿದ್ದು ಬಡಾವಣೆಯ ನಿವಾಸಿಗಳು ದುರ್ವಾಸನೆ ಯಿಂದಾಗಿ ಮತ್ತು ರಸ್ತೆಯ ಮೇಲೆ ಓಡಾಡಲು ತುಂಬಾ ಕಷ್ಟವಾಗುತ್ತಿದೆ ಎಂದು ತಮ್ಮ ತೊಂದರೆಯನ್ನು ತೋಡಿಕೊಂಡಿದ್ದಾರೆ.
ಮಹಾನಗರ ಪಾಲಿಕೆಯವರಿಗೆ ದೂರವಾಣಿ ಮುಖಾಂತ ಸಂಪರ್ಕಿಸಿದ್ದಾಗ, ಈಗ ಬರುತ್ತೇವೆ ಆಗ ಬರುತ್ತೇವೆ, ಗಾಡಿ ಕೆಟ್ಟಿದೆ ಎಂಬ ಸುಳ್ಳು ನೆಪಗಳನ್ನು ಒಡ್ಡುತ್ತಿದ್ದಾರೆ.
ನಮ್ಮ ಸಾಕಷ್ಟು ಪ್ರಯತ್ನದಿಂದಾಗಿ 3 ಬಾರಿ ಬಂದು ಡೈನೆಜ್ ದುರಸ್ತಿ ಮಾಡಿ ಹೋಗಿದ್ದಾರೆ, ಆದರೆ ಪದೇ ಪದೇ ಹೀಗೆ ಆಗುತ್ತಿರುವುದರಿಂದಾಗಿ ಬಡಾವಣೆಯ ಜನರು ಪಾಲಿಕೆಯ ಅಧಿಕಾರಿಗಳಿಗೆ ಇದರ ಕಾರಣ ಕೇಳಿದಾಗ ಬಡಾವಣೆಯಲ್ಲಿನ ಕೆಲ ಹೊಟೇಲ್, ವಿದ್ಯಾ ಸಂಸ್ಥೆ ಮತ್ತು ಸಾಯಿ ಮಂದಿರದ ದಾಸೋಹದ ಅಡುಗೆ ಮನೆಯ ವೇಸ್ಟೆಜ್ ಎಲ್ಲಾ ನೇರವಾಗಿ ಡೈನಿ “ಜ್‍ಗೆ ಬಿಡುತ್ತಿರುವುದರಿಂದ ಹೀಗಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ ಈ ಎಲ್ಲರಿಗೂ ಸಮಸ್ಯೆ ಯಾಗುತ್ತಿದ್ದೆ ಎಂದು ಹೋಗಿ ಹೇಳಲ್ಲು ಜನರು ಹಿಂದೇಟು ಹಾಕುತ್ತಿದ್ದಾರೆಂದು ಸಮಸ್ಯೆ ಹೇಳಿಕೊಂಡಿದ್ದಾರೆ.
ಇದರ ಜೊತೆಗೆ ಇತ್ತೀಚೆಗೆ ಬಡಾವಣೆಯಲ್ಲಿ ಕಳ್ಳ ತನ ಪ್ರಕರಣಗಳು ತುಂಬಾ ಹೆಚ್ಚಾಗುತ್ತಿರುವುದರಿಂದ ಒಂದು ಪೆÇಲೀಸ್ ಚೌಕಿಯನ್ನು ಬಡಾವಣೆಯಲ್ಲಿ ನಿರ್ಮಿಸಬೆಕು ಅಥವಾ ರಾತ್ರಿ ವಳೆ ಪೆÇಲೀಸ್ ಗಸ್ತು ತಿರುಗುವಂತೆ ವಿಶ್ವವಿದ್ಯಾಲಯದ ಪೆÇಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ ಮನವಿ ಮಾಡಿದ್ದರು.
ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳಲದೇ ಇರುವುದು ವಿಪರ್ಯಾಸ ಎಂದು ಜನರು ಪೆÇಲೀಸ್ ಇಲಾಖೆಯ ಕುರಿತು ಬೇಸರ ವ್ಯಕ್ತ ಪಡಿಸಿದ್ದಾರೆ.
ಅಲ್ಲದೇ ಈ ಹಿಂದೆ ಬಡಾವಣೆಯಲ್ಲಿ ಹೆಚ್ಚಾಗಿದ್ದ ಹಂದಿ ಕಾಟದಿಂದಾಗಿ ಪಾಲಿಕೆ ಅವರು ಹಂದಿಗಳನ್ನು ಹಿಡಿದು ಸ್ಥಳಾಂತರ ಮಾಡಿದ್ದು ಆದರೇ ಇದೀಗ ಮತ್ತೆ ಕಾಲೋನಿಯಲ್ಲಿ ಹಂದಿಗಳ ಕಾಟ ಹೆಚಚಾಗಿದ್ದು ಮತ್ತೆ ಅವುಗಳನ್ನು ಬೇರೆಡೆ ಸ್ಥಳಾಂತರಿಸುವಂತೆ ಹಾಗೂ ತೀವ್ರ ತೊಂದರೆ ಆಗಿರುವ ಡೈನೆಜ್ ಸಮಸ್ಯೆಯನ್ನು ಕೂಡಲೇ ಬಗೆ ಹರಿಸಿ ನೀರು ರಸ್ತೆಯ ಮೇಲೆ ಹರೆದಂತೆ ಕ್ರಮ ಕೈಗೊಳ್ಳಬೇಕೆಂದು ವಿ.ಎಚ್.ಗಡದ್, ಮೋಹನ, ಸ್ವೇತಾ ಸರಾಫ್, ಸಂಗೀತಾ, ಸೌಮ್ಯಶ್ರೀ, ಲತಾ, ಆರ್. ಕೆ ಕುಲಕರ್ಣಿ, ನರಸಿಂಹ, ಗುರುರಾಜ, ದೊಡ್ಡಪ್ಪಗೌಡ ಸೇರಿದಂತೆ ಎಲ್ಲಾ ಬಡಾವಣೆಯ ಜನರು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.
ಕಲಬುರಗಿ: ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಐಟಿ, ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರೀಯಾಂಕ್ ಖರ್ಗೆ ಅವರ 46ನೇ ವರ್ಷದ…
ಕಲಬುರಗಿ: ವಕ್ಫ್ ಬೋರ್ಡ್ ವಿರುದ್ಧ ಹೋರಾಟ ಮಾಡುತ್ತಿರುವ ಯತ್ನಾಳ ಟೀಮ್ ಗೆ ಬೆಂಬಲವಿಲ್ಲ ಭಾರತೀಯ ಜನತಾ ಪಕ್ಷದ ಯುವ ಮುಖಂಡ…
ಕಲಬುರಗಿ: ನ.25- ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ-2024 ಜಾರಿಗೆ ತರಲು ಮುಂದಾಗಿದ್ದನ್ನು ಆಲ್ ಇಂಡಿಯಾ ಮುಸ್ಲೀಮ ವೈಯಕ್ತಿಕ ಕಾನೂನು…
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…