ಕಲಬುರಗಿ ಪಾಲಿಕೆಯ ವ್ಯಪ್ತಿಯ ಬಡಾವಣೆಯಲ್ಲಿ ಡೈನೆಜ್ ಲೀಕ್: ದುರ್ವಾಸನೆಗೆ ಕಂಗೆಟ್ಟ ಜನ

0
46

ಕಲಬುರಗಿ: ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ವಾರ್ಡ್ ಸಂಖ್ಯೆ 55 ರಲ್ಲಿನ ಸಾಯಿ ರಾಮ ನಗರದಲ್ಲಿ ಹದಗೆಟ್ಟ ಡ್ರೈನೆಜ್ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಬಡಾವಣೆಯ ಜನರು ನಲುಗಿ ಹೋಗಿದ್ದಾರೆ.

ಬಡಾವಣೆಯಲ್ಲಿ ಸುಮಾರು 1 ರಿಂದ 2 ತಿಂಗಳಲ್ಲಿ ಡೈನೆಜ್‍ಗಳು ತುಂಬಿ ರಸ್ತೆಯ ಮೇಲೆ ಗಲಿಜು ನೀರು ಹರಿಯುತ್ತಿದ್ದು ಬಡಾವಣೆಯ ನಿವಾಸಿಗಳು ದುರ್ವಾಸನೆ ಯಿಂದಾಗಿ ಮತ್ತು ರಸ್ತೆಯ ಮೇಲೆ ಓಡಾಡಲು ತುಂಬಾ ಕಷ್ಟವಾಗುತ್ತಿದೆ ಎಂದು ತಮ್ಮ ತೊಂದರೆಯನ್ನು ತೋಡಿಕೊಂಡಿದ್ದಾರೆ.

Contact Your\'s Advertisement; 9902492681

ಮಹಾನಗರ ಪಾಲಿಕೆಯವರಿಗೆ ದೂರವಾಣಿ ಮುಖಾಂತ ಸಂಪರ್ಕಿಸಿದ್ದಾಗ, ಈಗ ಬರುತ್ತೇವೆ ಆಗ ಬರುತ್ತೇವೆ, ಗಾಡಿ ಕೆಟ್ಟಿದೆ ಎಂಬ ಸುಳ್ಳು ನೆಪಗಳನ್ನು ಒಡ್ಡುತ್ತಿದ್ದಾರೆ.

ನಮ್ಮ ಸಾಕಷ್ಟು ಪ್ರಯತ್ನದಿಂದಾಗಿ 3 ಬಾರಿ ಬಂದು ಡೈನೆಜ್ ದುರಸ್ತಿ ಮಾಡಿ ಹೋಗಿದ್ದಾರೆ, ಆದರೆ ಪದೇ ಪದೇ ಹೀಗೆ ಆಗುತ್ತಿರುವುದರಿಂದಾಗಿ ಬಡಾವಣೆಯ ಜನರು ಪಾಲಿಕೆಯ ಅಧಿಕಾರಿಗಳಿಗೆ ಇದರ ಕಾರಣ ಕೇಳಿದಾಗ ಬಡಾವಣೆಯಲ್ಲಿನ ಕೆಲ ಹೊಟೇಲ್, ವಿದ್ಯಾ ಸಂಸ್ಥೆ ಮತ್ತು ಸಾಯಿ ಮಂದಿರದ ದಾಸೋಹದ ಅಡುಗೆ ಮನೆಯ ವೇಸ್ಟೆಜ್ ಎಲ್ಲಾ ನೇರವಾಗಿ ಡೈನಿ “ಜ್‍ಗೆ ಬಿಡುತ್ತಿರುವುದರಿಂದ ಹೀಗಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ ಈ ಎಲ್ಲರಿಗೂ ಸಮಸ್ಯೆ ಯಾಗುತ್ತಿದ್ದೆ ಎಂದು ಹೋಗಿ ಹೇಳಲ್ಲು ಜನರು ಹಿಂದೇಟು ಹಾಕುತ್ತಿದ್ದಾರೆಂದು ಸಮಸ್ಯೆ ಹೇಳಿಕೊಂಡಿದ್ದಾರೆ.

ಇದರ ಜೊತೆಗೆ ಇತ್ತೀಚೆಗೆ ಬಡಾವಣೆಯಲ್ಲಿ ಕಳ್ಳ ತನ ಪ್ರಕರಣಗಳು ತುಂಬಾ ಹೆಚ್ಚಾಗುತ್ತಿರುವುದರಿಂದ ಒಂದು ಪೆÇಲೀಸ್ ಚೌಕಿಯನ್ನು ಬಡಾವಣೆಯಲ್ಲಿ ನಿರ್ಮಿಸಬೆಕು ಅಥವಾ ರಾತ್ರಿ ವಳೆ ಪೆÇಲೀಸ್ ಗಸ್ತು ತಿರುಗುವಂತೆ ವಿಶ್ವವಿದ್ಯಾಲಯದ ಪೆÇಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ ಮನವಿ ಮಾಡಿದ್ದರು.

ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳಲದೇ ಇರುವುದು ವಿಪರ್ಯಾಸ ಎಂದು ಜನರು ಪೆÇಲೀಸ್ ಇಲಾಖೆಯ ಕುರಿತು ಬೇಸರ ವ್ಯಕ್ತ ಪಡಿಸಿದ್ದಾರೆ.

ಅಲ್ಲದೇ ಈ ಹಿಂದೆ ಬಡಾವಣೆಯಲ್ಲಿ ಹೆಚ್ಚಾಗಿದ್ದ ಹಂದಿ ಕಾಟದಿಂದಾಗಿ ಪಾಲಿಕೆ ಅವರು ಹಂದಿಗಳನ್ನು ಹಿಡಿದು ಸ್ಥಳಾಂತರ ಮಾಡಿದ್ದು ಆದರೇ ಇದೀಗ ಮತ್ತೆ ಕಾಲೋನಿಯಲ್ಲಿ ಹಂದಿಗಳ ಕಾಟ ಹೆಚಚಾಗಿದ್ದು ಮತ್ತೆ ಅವುಗಳನ್ನು ಬೇರೆಡೆ ಸ್ಥಳಾಂತರಿಸುವಂತೆ ಹಾಗೂ ತೀವ್ರ ತೊಂದರೆ ಆಗಿರುವ ಡೈನೆಜ್ ಸಮಸ್ಯೆಯನ್ನು ಕೂಡಲೇ ಬಗೆ ಹರಿಸಿ ನೀರು ರಸ್ತೆಯ ಮೇಲೆ ಹರೆದಂತೆ ಕ್ರಮ ಕೈಗೊಳ್ಳಬೇಕೆಂದು ವಿ.ಎಚ್.ಗಡದ್, ಮೋಹನ, ಸ್ವೇತಾ ಸರಾಫ್, ಸಂಗೀತಾ, ಸೌಮ್ಯಶ್ರೀ, ಲತಾ, ಆರ್. ಕೆ ಕುಲಕರ್ಣಿ, ನರಸಿಂಹ, ಗುರುರಾಜ, ದೊಡ್ಡಪ್ಪಗೌಡ ಸೇರಿದಂತೆ ಎಲ್ಲಾ ಬಡಾವಣೆಯ ಜನರು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here