ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರುಗಳ ಬದುಕು ಬರಹ ಕುರಿತಾದ ಸಂಕಥನ ಕೃತಿ ನಾಡಿನ ಸಂಶೋಧನೆಗೆ ಪೂರಕ ಕೃತಿಯಾಗಲಿದೆ ಎಂದು ಪತ್ರಕರ್ತ-ಸಾಹಿತಿ ಜಗನ್ನಾಥ ಎಲ್ ತರನಳ್ಳಿ ಅವರು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದಲ್ಲಿ ಶನಿವಾರ ಏರ್ಪಡಿಸಿದ `ಸಂಕಥನ’ ಕೃತಿ ಯ ಒಂದು ಅವಲೋಕನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಹಿಂದಿನ ಇಪ್ಪತ್ತು ಜನ ಮತ್ತು ಏಳು ಜನ ವಿಶೇಷ ಸಮ್ಮೇಳನಾಧ್ಯಕ್ಷರುಗಳ ಇಡೀ ಜೀವನ ಮತ್ತು ಅವರ ಬರಹ ಕಟ್ಟಿ ಕೊಡುವ ಈ ಕೃತಿ ಎಲ್ಲರ ಮನೆಯಲ್ಲಿಡುವ ಸಂಗ್ರಹ ಯೋಗ್ಯ ಕೃತಿಯಾಗಿದೆ. ಪ್ರತಿಯೊಬ್ಬರೂ ಸಂಕಥನ ಬಗ್ಗೆ ಅಧ್ಯಯನ ಮಾಡಬೇಕು ಹಾಗೂ ನಮ್ಮ ಭಾಗದ ಸಂಶೋಧನಾ ವಿದ್ಯಾರ್ಥಿಗಳಿಗೆ ಪೂರಕವಾಗಲಿದೆ ಎಂದು ಅವರು ಅವಲೋಕಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಜಿಲ್ಲೆಯ ಸಾಹಿತ್ಯ ಮತ್ತು ಸಾಂಸ್ಕøತಿಕ ಜೀವನ ಕಟ್ಟಿ ಕೊಡುವ ನಿಟ್ಟಿನಲ್ಲಿ ಪರಿಷತ್ತಿನಲ್ಲಿ ನಿರಂತರ ಕಾರ್ಯಕ್ರಮಗಳು ಕೈಗೊಳ್ಳಲಾಗುತ್ತಿದೆ. ಸಾಹಿತ್ಯ ಸಮ್ಮೇಳನಾಧ್ಯಕ್ಷರುಗಳ ಬದುಕು ಬರಹಗಳು ಒಳಗೊಂಡ ಸ್ಮರಣೀಯವಾದ ಸಂಕಥನ ಕೃತಿ ಪ್ರಕಟಿಸಿ ಇಂದು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಲಾಗಿದೆ. 1974 ರಿಂದ ಇಲ್ಲಿಯವರೆಗೆ ಜರುಗಿದ ಸಮ್ಮೇಳನಗಳ ಸರ್ವಾಧ್ಯಕ್ಷರುಗಳ ಕುರಿತು ಬೆಳಕು ಚೆಲ್ಲುವ ನಿಟ್ಟಿನಲ್ಲಿ ಸಂಕಥನ ಎಂಬ ಪ್ರಮುಖ ಗ್ರಂಥವಾಗಿದೆ. ಹಾಗೆಯೇ ಜೂನ್ ತಿಂಗಳಿನಲ್ಲಿ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಇಲ್ಲಿಯವರೆಗೆ ಆಗಿರುವ ಜಿಲ್ಲಾಧ್ಯಕ್ಷರುಗಳ ಕುರಿತಾಗಿಯೂ ಅವರ ಪರಿಚಯ ಮತ್ತು ವಿಶೇಷ ವ್ಯಕ್ತಿತ್ವದ ಪರಿಚಯಾತ್ಮಕ ಕೃತಿ ಪ್ರಕಟಿಸುವ ಯೋಜನೆ ನಮ್ಮದ್ದಾಗಿದೆ ಎಂದರು.
ಕರ್ನಾಟಕ ಲಲಿತಕಲಾ ಅಕಾಡೆಮಿಯ ನೂತನ ಸದಸ್ಯ ಬಸವರಜ ಎಲ್ ಜಾನೆ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಶಿವರಾಜ ಎಸ್ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ್ ಛಪ್ಪರಬಂದಿ, ಸಿದ್ಧಲಿಂಗ ಜಿ ಬಾಳಿ ವೇದಿಕೆ ಮೇಲಿದ್ದರು.
ಲೇಖಕರಾದ ಪತ್ರಕರ್ತ ಡಿ ಎಂ ಪಾಟೀಲ ಸರಸಂಬಾ ಹಾಗೂ ಹಿರಿಯ ಕವಿ ಎಂ ಎನ್ ಸುಗಂಧಿ ಅವರನ್ನು ಸತ್ಕರಿಸಲಾಯಿತು.
ಪ್ರಮುಖರಾದ ಡಾ. ರೆಹಮಾನ್ ಪಟೇಲ್, ಕಲ್ಯಾಣಕುಮಾರ ಶೀಲವಂತ, ಗುರುಬಸಪ್ಪ ಸಜ್ಜನಶೆಟ್ಟಿ ಪ್ರಭುಲಿಂಗ ಮೂಲಗೆ, ಸುರೇಶ ಲೇಂಗಟಿ, ಬಾಬುರಾವ ಪಾಟೀಲ, ಜಗದೀಶ ಮರಪಳ್ಳಿ, ಶರಣಬಸಪ್ಪ ನರೂಣಿ, ಸೋಮಶೇಖರಯ್ಯಾ ಹೊಸಮಠ, ಬಸಯ್ಯಾ ಸ್ವಾಮಿ, ಶಿವಾನಂದ ಪೂಜಾರಿ, ಶಕುಂತಲಾ ಪಾಟೀಲ, ಜ್ಯೋತಿ ಕೋಟನೂರ, ನರಸಿಂಗರಾವ ಹೇಮನೂರ, ಸುರೇಖಾ ಜೇವರ್ಗಿ, ಶಿವಾನಂದ ಮಠಪತಿ, ಪ್ರಕಾಶ ಗೊಣಗಿ, ಮಾಣಿಕ ನಾಗಗುಂಡ, ಡಾ. ಕೆ. ಎಸ್ ಬಂಧು, ಮಲ್ಲಿನಾಥ ದೇಶಮುಖ, ಹೆಚ್ ಎಸ್ ಬರಗಾಲಿ, ಮಲ್ಲಿನಾಥ ಸಂಗಶೆಟ್ಟಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಪರಿಷತ್ತಿನಲ್ಲಿ ಅನೇಕ ಪದಾಧಿಕಾರಿಗಳ ಬದಲಾವಣೆಯ ಮಧ್ಯದಲ್ಲಿಯೂ ಕನ್ನಡ ಕಟ್ಟುವ ಕಾರ್ಯಕ್ಕೆ ಪರಿಷತ್ತು ಇನ್ನಷ್ಟು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ಪರಿಷತ್ತಿನ ನಿಯಮಾವಳಿಗಳ ಪ್ರಕಾರವೇ ಪರಿಷತ್ತನ್ನು ಮುನ್ನಡೆಸಿಕೊಂಡು ಹೋಗಲಾಗುತ್ತಿದೆ. – ವಿಜಯಕುಮಾರ ತೇಗಲತಿಪ್ಪಿ, ಕಸಾಪ ಜಿಲ್ಲಾಧ್ಯಕ್ಷ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…