ಬಿಸಿ ಬಿಸಿ ಸುದ್ದಿ

ಬಿಜೆಪಿ ಪಕ್ಷದಿಂದ ಭೋವಿ ವಡ್ಡರ ಸಮಾಜಕ್ಕೆ ಟಿಕೆಟ್ ನೀಡಲು ಶ್ರೀಕೃಷ್ಣ ಕುಶಾಳಕರ ಆಗ್ರಹ

ಕಲಬುರಗಿ: 2024ನೇ ಸಾಲಿನ ಸಾವತಿಕ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಕಣ ಚಿತ್ರದುರ್ಗ ಜಿಲ್ಲೆ, ಮೀಸಲು ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಈ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದಿಂದ ಭೋವಿ ವಡ್ಡರ ಸಮಾಜಕ್ಕೆ ಚುನಾವಣೆಯಲ್ಲಿ ಟಿಕೆಟ್ ನೀಡಬೇಕೆಂದು ಎಂದು ಬೇಳವಾಡಿ ವಡ್ಡರ ಯಲ್ಲಣ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಕೃಷ್ಣ ಕುಶಾಳಕರ್ ಆಗ್ರಹಿಸಿದ್ದಾರೆ.

ಎಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವಂತಹ ಈ ಮತಕ್ಷೇತ್ರದಲ್ಲಿ 2009 ರ ಲೋಕಸಭಾ ಚುನಾವಣೆಯ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಶ್ರೀ ಜನಾರ್ದನ್ ಸ್ವಾಮಿಯವರು ಗೆಲವು ಪಡೆದಿದ್ದರು ಅವರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದವು ಎಂಬುವ ಕಾರಣಕ್ಕೆ ಭಾರತೀಯ ಜನತಾ ಪಕ್ಷ ಅವರನ್ನು ಅವರನ್ನು ಮತ್ತೆ 2014ರ ಚುನಾವಣೆಯಲ್ಲಿ ಪಕ್ಷದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರು, ಅವರು ವಿಜಯಶಾಲಿ ಆಗಲಿಲ್ಲ ಮತ್ತೆ 2019 ರ ಚುನಾವಣೆಯಲ್ಲಿ ಜನಾರ್ಧನ್ ಸ್ವಾಮಿಯವರಿಗೆ ಅವರಿಗೆ ಟಿಕೆಟ್ ನೀಡಲಿಲ್ಲ ಏನ್ ನಾರಾಯಣಸ್ವಾಮಿ ಅವರು ಟಿಕೆಟ್ ಪಡೆದು ಜಯಶಾಲಿಯಾದರು, ಭೋವಿ ಸಮುದಾಯದವರು ಹೆಚ್ಚು ವಾಸವಾಗಿರುವಂತ ಜಿಲ್ಲೆ ಕೋಟೆ ನಾಡು ಮತ್ತು ಭಾರತೀಯ ಜನತಾ ಪಕ್ಷದಿಂದ ಯಾರಿಗೆ ಟಿಕೆಟ್ ನೀಡಿದರೂ ಕೂಡ ಭೋವಿ ವಡ್ಡರ ಸಮುದಾಯದವರಿಗೆ ನೀಡಬೇಕೆಂದು ರಾಜ್ಯದ ನಾಯಕರಗಳಿಗೆ ಹಾಗೂ ಕೇಂದ್ರದ ನಾಯಕರುಗಳಿಗೆ ಭೋವಿ ಸಮಾಜ ಒತ್ತಾಯಿಸಿದೆ ಎಂದು ತಿಳಿಸಿದ್ದಾರೆ.

ಭಾರತೀಯ ಜನತಾ ಪಕ್ಷಕ್ಕೆ ಭೋವಿ ಸಮಾಜದ ಜನರು ಸುಮಾರು ದಿನಗಳಿಂದ ಬೆಂಬಲಿಸುತ್ತಾ ಬಂದಿದ್ದಾರೆ ಈ ಮುಂದೆಯೂ ಬೆಂಬಲಿಸುತ್ತಾರೆ ಯಡಿಯೂರಪ್ಪನವರಿಗೆ ಈ ಸಮಾಜದ ಮೇಲೆ ವಿಶೇಷ ಕಾಳಜಿ ಇದೆ ಎಂಬುದು ನಮಗೆ ಅರ್ಥವಾಗುತ್ತದೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಕರ್ನಾಟಕದಲ್ಲಿ 5 ಮೀಸಲು ಕ್ಷೇತ್ರ ಇರುತ್ತವೆ, ಅದರಲ್ಲಿ ಚಿತ್ರದುರ್ಗ ಲೋಕಸಭೆ ಕ್ಷೇತ್ರ ಎಸ್ಸಿ ಮೀಸಲು ಕ್ಷೇತ್ರ ಒಳಗೊಂಡಿರುತ್ತದೆ.

ಈ ಕ್ಷೇತ್ರದಲ್ಲಿ ಭೋವಿ ಸಮಾಜದವರು ಹೆಚ್ಚಿನ ಜನಸಂಖ್ಯೆ ಹೊಂದಿರುತ್ತಾರೆ ಆದಕಾರಣ ರಘು ಚಂದನ್ ಪ್ರಬಲ ಆಕಾಂಕ್ಷಿ ಇಲ್ಲದಿದ್ದರೆ ಮಾಜಿ ಸಂಸದರಾದ ಜನಾರ್ಧನ್ ಸ್ವಾಮಿಯವರಿಗೆ ನೀಡಬೇಕೆಂದು ಎಲ್ಲಿಯೂ ಸಮಾಜದಿಂದ ನಮ್ಮ ಸಮಾಜದ ನಾಯಕರುಗಳಿಗೆ ಲೋಕಸಭೆ ಟಿಕೆಟ್ ನೀಡಿರುವುದಿಲ್ಲ ಆದ ಕಾರಣ ಚಿತ್ರದುರ್ಗದಲ್ಲಿ ಭೋವಿ ಸಮಾಜದವರು ಹೆಚ್ಚು ವಾಸಿಸುವ ಜನರಿರುವ ಈ ಕ್ಷೇತ್ರದಲ್ಲಿ ಸಮಾಜದವರಿಗೆ ಟಿಕೆಟ್ ನೀಡಿದ್ರೆ ಮತ್ತೊಮ್ಮೆ ಕಮಲ ಅರಳಿವುದು ಖಚಿತವಾಗುತ್ತದೆ. ಎಂದು ಶ್ರೀಕೃಷ್ಣ ಕುಶಾಳಕರ ಅವರು ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಜಿ ಶಿವಶಂಕರ್, ಚಂದ್ರಶೇಖರ ಚಿತಾಪುರ್, ಮಲ್ಲಿಕಾರ್ಜುನ್ ಚೌದರಿ, ನಾಗೇಶ್ ಗೊಬ್ಬುರು, ಸುರೇಶ ಬೇಲೂರ, ಅರ್ಜುನ್ ಬೇಲೂರ, ರವಿ ಹಗರಗಿ, ಯಲ್ಲಪ್ಪ ದಂಡಗುಲಕರ ಇದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

7 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

9 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

16 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

16 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

16 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago