ಸುರಪುರ: ಕ್ಷೇತ್ರದ ಅಭಿವೃಧ್ಧಿಗೆ ನಾನು ಮಾಡಿದ ಅನೇಕ ಕೆಲಸಗಳು ನಿಮ್ಮ ಕಣ್ಮುಂದೆ ಇವೆ,ಅವುಗಳನ್ನು ಗುರುತಿಸಿ ನನಗೆ ಮತ ನೀಡುವಂತೆ ನಿಮ್ಮೆಲ್ಲರಲ್ಲಿ ಕೇಳಿಕೊಳ್ಳುವುದಾಗಿ ಮಾಜಿ ಸಚಿವ ಉಪ ಚುನಾವಣೆಯ ಬಿಜೆಪಿ ಅಭ್ಯಾರ್ಥಿ ನರಸಿಂಹ ನಾಯಕ ರಾಜುಗೌಡ ಮಾತನಾಡಿದರು.
ತಾಲೂಕಿನ ಬಾಚಿಮಟ್ಟಿ ಗ್ರಾಮದಲ್ಲಿ ನಡೆದ ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡು ಮಾತನಾಡಿ,ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ ಜಗತ್ತು ಇಂದು ಭಾರತದತ್ತ ನೋಡುವಂತೆ ಕೆಲಸ ಮಾಡಿದ್ದಾರೆ,ಅಲ್ಲದೆ ನಾನು ಮೂರು ಬಾರಿ ಶಾಸಕನಾಗಿ ಕ್ಷೇತ್ರದ ಅಭಿವೃಧ್ಧಿಗಾಗಿ ನೀರಾವರಿ,ಶಿಕ್ಷಣ,ಆರೋಗ್ಯ ಸೇರಿದಂತೆ ಎಲ್ಲಾ ರಂಗಗಳ ಅಭೀವೃಧ್ಧಿಗೆ ಬೇಕಾದ ಯೋಜನೆಗಳನ್ನು ತಂದು ನಿಮ್ಮ ಸೇವೆ ಮಾಡಿರುವೆ,ಈಬಾರಿ ತಾವೆಲ್ಲರು ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಮತ್ತೊಮ್ಮೆ ನಿಮ್ಮ ಸೇವೆ ಮಾಡಲು ಅವಕಾಶ ನೀಡಲು ಇಂದು ತಾವೆಲ್ಲರು ಬಿಜೆಪಿಗೆ ಸೇರ್ಪಡೆಗೊಂಡಿರುವುದು ತುಂಬಾ ಶಕ್ತಿ ತಂದಿದೆ,ಮುಂಬರುವ ದಿನಗಳಲ್ಲಿ ಪಕ್ಷಕ್ಕೆ ಹೆಚ್ಚು ಶಕ್ತಿ ತುಂಬುವ ಕೆಲಸ ಮಾಡುವಂತೆ ತಮ್ಮೆಲ್ಲರಲ್ಲಿ ಕೇಳಿಕೊಳ್ಳುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಬಾಚಿಮಟ್ಟಿ ಗ್ರಾಮದ ಮುಖಂಡರಾದ ಈರಣ್ಣಗೌಡ ಬಂಟನೂರ,ಚನ್ನರಡ್ಡಿಗೌಡ ಬಂಟನೂರ,ಹಣಮಂತ್ರಾಯಗೌಡ ಕೋನಾಳ,ಶಾಂತಗೌಡ ಬಂಟನೂರ,ಅಶೋಕರಡ್ಡಿ ಯಳವಾರ,ಸಿದ್ದನಗೌಡ ಬಂಟನೂರ,ಪ್ರಭುಗೌಡ ಮುದನೂರ,ಅಂಬ್ರಣ್ಣಗೌಡ ಕೋನಾಳ,ಪ್ರಕಾಶ ಜಾಗಟಗಲ್ ಸೇರಿದಂತೆ ಅನೇಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಜಿ.ಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ),ಯಲ್ಲಪ್ಪ ಕುರಕುಂದಿ, ಬಲಭೀಮ ನಾಯಕ ಬೈರಿಮಡ್ಡಿ,ಭೀಮಣ್ಣ ಬೇವಿನಾಳ,ಬಸನಗೌಡ ಯಡಿಯಾಪುರ,ಹೆಚ್.ಸಿ ಪಾಟೀಲ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…