ಬಿಸಿ ಬಿಸಿ ಸುದ್ದಿ

ಟೇಂಗಳಿ ಶ್ರೀಗಳಿಗೆ ಗೌರವ ಸನ್ಮಾನ; ಗದುಗಿನ ಪಂಚಾಕ್ಷರಿ ಗವಾಯಿಗಳ ಪುರಾಣ ಮುಕ್ತಾಯ

ಕಲಬುರಗಿ; ಕಾಳಗಿ ತಾಲೂಕಿನ ಟೇಂಗಳಿ ಗ್ರಾಮದ ಶಾಂತೇಶ್ವರ ಹಿರೇಮಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವ ನಿಮಿತ್ಯ ಮಾರ್ಚ 11ರಿಂದ ಮಾರ್ಚ 22ರ ವರೆಗೆ ಹಮ್ಮಿಕೊಂಡ ಗದುಗಿನ ಪಂಚಾಕ್ಷರಿ ಗವಾಯಿಗಳ ಪುರಾಣ ಮುಕ್ತಾಯ ಸಮಾರಂಭದಲ್ಲಿ ಶ್ರೀ ಷಟಸ್ಥಲ ಬ್ರಹ್ಮಿ ಶ್ರೀ ಶಾಂತಸೋಮನಾಥ ಶಿವಾಚಾರ್ಯರಿಗೆ “ಟೇಂಗಳಿ ಅಂಡಗಿ ಪ್ರತಿಷ್ಠಾನ” ವತಿಯಿಂದ ಕನ್ನಡಾಂಬೆ ತಾಯಿ ಭುವನೇಶ್ವರಿ ಭಾವಚಿತ್ರ ನೀಡಿ ಗೌರವಿಸಿ ಸನ್ಮಾನಿಸಲಾಯಿತು.

ನಿರಂತರ 11ದಿನಗಳ ಕಾಲ ಸಾಯಂಕಾಲ ಪುರಾಣ ಪ್ರವಚನ ನೇಗಿಲಯೋಗಿಗಳಿಗೆ ಸನ್ಮಾನ ಜೊತೆಗೆ ಮಕ್ಕಳಿಗೆ ಪ್ರೇರಣಾದಾಯಕವಾಗಿ ವಚನ ಪಠಣ, ಸಂಗೀತ, ನೃತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿರುವ ಅನೇಕ ಮಕ್ಕಳಿಗೆ ಲಿಂಗೈಕ್ಯ ಶಿವಶರಣಪ್ಪ ಅಂಡಗಿ ಅವರ ಸ್ಮರಣಾರ್ಥ ಕನ್ನಡದ ಅಂಕಿಗಳಿಂದ ಮುದ್ರಿಸಿರುವ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ 2024ನೇ ಸಾಲಿನ ದಿನದರ್ಶಿಕೆ ಕೊಟ್ಟು ಮಕ್ಕಳಿಗೆ ಶ್ರೀಗಳಿಂದ ಆಶಿರ್ವದಿಸಲಾಯಿತು. ಏಳೂರು ಸೀಮೆಯ ತಾಯಿ ದುರ್ಗಾದೇವಿ ಹಾಗು ಶ್ರೀ ಭೀಮೇಶ್ವರ ಸ್ಮರಣೆಯಲ್ಲಿ ಮುತ್ತೈದೆ ತಾಯಂದರಿಗೆ ಉಡಿ ತುಂಬುವ ಕಾರ್ಯಕ್ರಮ, ಜನಜಾಗೃತಿ ಪಾದಯಾತ್ರೆ ಹೀಗೆ ಹತ್ತು ಹಲವಾರು ಕಾರ್ಯಕ್ರಮ ಶಾಂತೇಶ್ವರ ಮಠದ ಪೂಜ್ಯಶ್ರೀಗಳ ಸಾನಿಧ್ಯದಲ್ಲಿ ವಿಜೃಂಭಣೆಯಿಂದ ಜರುಗಿದವು.

ವಿರೇಶ ಶಾಸ್ತ್ರಿಗಳು ಮಲಕೂಡ ಪುರಾಣ ಪ್ರವಚನ ನಡೆಸಿಕೊಟ್ಟರು, ಶಿವಕುಮಾರ ಪಾಟೀಲ ಬೆಟ್ಟಜೇವರ್ಗಿ ಸಂಗೀತ ಸೇವೆ, ಮೌನೇಶ ವಿಶ್ವಕರ್ಮ ತಬಲಾ ಸೇವೆ ನೀಡಿದರು. ವಿಶ್ವನಾಥ ಬಾಳದೆ ಹಾಗು ಉಮೇಶ ತುಪ್ಪದ ಅವರಿಂದ ಜನಪದ ಹಾಗು ತತ್ವಪದಗಳ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಸನ್ಮಾನ ಸಮಾರಂಭದಲ್ಲಿ ”ಟೇಂಗಳಿ ಅಂಡಗಿ ಪ್ರತಿಷ್ಠಾನ”ದ ಅಧ್ಯಕ್ಷ ಶಿವರಾಜ ಅಂಡಗಿ, ಹಿರಿಯರಾದ ಶರಣಪ್ಪ , ಚಂದ್ರಶೇಖರ ಮಂಗದ, ವಿಜಯಕುಮಾರ ತುಪ್ಪದ, ಭೀಮಾಶಂಕರ ಅಂಕಲಗಿ, ಎಂ.ಎನ್.ಸುಗಂಧಿ, ಡಾ. ವಿವೇಕಾನಂದ ಬುಳ್ಳಾ, ವಿಶ್ವನಾಥ ತೊಟ್ನಳ್ಳಿ, ಗುಂಡಪ್ಪ ಪಟೇದ, ರಾಜು ಪಟೇದ, ನಾಗರಾಜ ಮಹಾಗಾಂವ, ಬಸವರಾಜ ಘಂಟಿ, ಬಸವರಾಜ ಬೈರಿ, ಸಂಗಮೇಶ ತುಪ್ಪದ, ಉದಯಕುಮಾರ ಪಟ್ಟೇದ, ಸಿದ್ಧಣ್ಣ ಹೊಸಹಳ್ಳಿ, ಸಂಗನಬಸಪ್ಪ ಬೊಧನಮಠ, ರೇವಶೆಟ್ಟಿ ತುಪ್ಪದ, ಪವಿತ್ರಾ ಪಾಟೀಲ, ಉಮಾದೇವಿ ಚೇಂಗಟಿ, ನಾಗರಾಜ ಪಟ್ಟೇದ, ವಿಶ್ವನಾಥ ಬಾಳದೆ, ನಾಗಾರಾಜ ಹೆಬ್ಬಾಳ, ಹಾಗೂ ಗ್ರಾಮದ ನೂರಾರು ಪುರುಷರು, ಮಹಿಳೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

4 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

6 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

13 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

13 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

14 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago