ರಾಯಚೂರು: ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ ಆರ್ ಸಿಎಫ್ ವತಿಯಿಂದ ಮಾರ್ಚ್ 30 ಮತ್ತು 31 ಕನ್ನಡ ಭವನ ರಾಯಚೂರನಲ್ಲಿ ಅಖಿಲಭಾರತ ಜನತಾ ಸಾಂಸ್ಕೃತಿಕ ಶಿಬಿರವನ್ನು ಟಿಯುಸಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆರ್.ಮಾನಸಯ್ಯ ಮಾತನಾಡುವುದರ ಮೂಲಕ ಉದ್ಘಾಟಿಸಿದರು.
ಶಿಬಿರದ ಭಾಗವಾಗಿ ಮಾರ್ಚ್ 30ರಂದು ಸಂಜೆ 5 ಗಂಟೆಗೆ ನಡೆದ ಇಂಡಿಯಾ ಗಿ/S ಹಿಂದೂರಾಷ್ಟ್ರ ಬಹುಭಾಷಾ ಕವಿಗೋಷ್ಠಿಯನ್ನು ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ ಆರ್ ಸಿಎಫ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತುಹೀನ್ ದೆಬ್ ಉದ್ಘಾಟಿಸಿ ಮಾತನಾಡಿದರು.
ದೇಶದ ಬಹು ಸಂಸ್ಕೃತಿಯನ್ನು ನಾಶಮಾಡಿ, ಹಿಂದುತ್ವ ಆರೆಸ್ಸೆಸ್ ಬಿಜೆಪಿ ಅಜಂಡದಂತೆ ಮನು ಸಂಸ್ಕೃತಿಯನ್ನು ಜನರ ಮೇಲೆ ಹೇರಲು ಹೊರಟಿರುವುದನ್ನು ನಮ್ಮ ಆರ್ ಸಿಎಫ್ ಅಖಿಲಭಾರತ ಸಮಿತಿ ಉಗ್ರವಾಗಿ ಖಂಡಿಸುತ್ತಾ, ಶ್ರಮ ಸಾರ್ವಭೌಮ ಸಂಸ್ಕೃತಿ ಅಳಿಸಿ ಅದರ ಜಾಗದಲ್ಲಿ ಕಾರ್ಪೊರೇಟ್ ಪರವಾದ ಮನು ಸಂಸ್ಕೃತಿಯನ್ನು ಜಾರಿ ಮಾಡಲು ಹೊರಟ ಫ್ಯಾಸಿಸ್ಟ್ ಬಿಜೆಪಿ ಸರಕಾರವನ್ನು ಸೋಲಿಸಲು, ಸಂವಿಧಾನ, ಪ್ರಜಾತಂತ್ರ, ಜಾತ್ಯಾತೀತ, ಮೀಸಲಾತಿಯನ್ನು ಉಳಿಸಲು ಸಾಂಸ್ಕೃತಿಕವಾಗಿ ತೀವ್ರ ಸಂಘರ್ಷಕ್ಕೆ ಇಳಿಯಬೇಕಾದದ್ದು 18ನೇ ಲೋಕಸಭಾ ಚುನಾವಣೆಯಲ್ಲಿ ಅತ್ಯವಶ್ಯಕವಾದ ಪಾತ್ರವನ್ನು ಆರ್ ಸಿಎಫ್ ವಹಿಸಲಿದೆ ಎಂದು ಕರೆ ನೀಡಿದರು.
ನಂತರ ಕರ್ನಾಟಕ ಸೇರಿದಂತೆ ದೇಶದ 12 ಕ್ಕೂ ಹೆಚ್ಚು ರಾಜ್ಯಗಳಿಂದ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಕವಿ, ಸಾಹಿತಿ ಕಲಾವಿದರು 20ಕ್ಕೂ ಹೆಚ್ವು ಆರೆಸ್ಸೆಸ್ ಬಿಜೆಪಿ ಹಿಂದುತ್ವ ಫ್ಯಾಸಿಸಮ್ ವಿರುದ್ಧದ ಜನಪರ ಕವನಗಳನ್ನು ಅಚ್ಚುಕಟ್ಟಾಗಿ ಓದಿ ಫ್ಯಾಸಿಸ್ಟ್ ಸರಕಾರ ಅಳಿಯಲಿ. ದೇಶ ಉಳಿಯಲಿ. ಸಂವಿಧಾನ ಉಳಿಸಿ. ಪ್ರಜಾಪ್ರಭುತ್ವ ರಕ್ಷಿಸಿ. ಜನ ಸಂಸ್ಕೃತಿ ಚಿರಾಯುವಾಗಲಿ. ಎಂಬ ಆಧಾರದಡಿಯಲ್ಲಿ ಕ್ರಾಂತಿಕಾರಿ ಕವನಗಳು ಮೊಳಗಿದವು.
ಬಹುಭಾಷಾ ಕವಿಗೋಷ್ಠಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜನಕವಿ, ಸಾಹಿತಿ ಸಿ.ದಾನಪ್ಪ ನಿಲೋಗಲ್ ಮಾತನಾಡಿ, ಭಾರತವನ್ನು ಹಿಂದೂರಾಷ್ಟ್ರವನ್ನಾಗಿಸಲು ಫ್ಯಾಸಿಸ್ಟ್ ದುರಾಡಳಿತದ ಕಾರ್ಪೊರೇಟ್ ಸಂಸ್ಕೃತಿಯನ್ನು ಹಿಮ್ಮೆಟ್ಟಿಸಲು ಇಂದಿನ ಗೋಷ್ಠಿಯಲ್ಲಿ ಮೊಳಗಿದ ಇಂಡಿಯಾ ಪರ ಕವನಗಳು ಹಿಂದೂರಾಷ್ಟ್ರದ ನಕಲಿ ದೇಶಪ್ರೇಮಿ ಆರೆಸ್ಸೆಸ್ ಬಿಜೆಪಿಯ ಬಣ್ಣವನ್ನು ಬಯಲುಗೊಳಿಸಲು, ಜನ ತಾಂತ್ರಿಕತೆಯನ್ನು ದೇಶಕ್ಕೆ ಆರ್ ಸಿಎಫ್ ಮೂಲಕ ರವಾನಿಸುವ ಏಕೈಕ ಜನತಾ ರಾಜಕೀಯ ಜನ ಸಾಂಸ್ಕೃತಿಕ ಪ್ರಜ್ಞೆ ಸಮಕಾಲೀನವಾಗಿದೆ ಎಂದರು.
ವೇದಿಕೆ ಮೇಲೆ ಕೊಲ್ಕತ್ತಾದ ಆರ್.ಸಿಎಫ್ ನ ರಾಷ್ಟ್ರೀಯ ಮುಖಂಡರಾದ, ಅಶಿಮಗಿರಿ, ರಾಜ್ಯ ಉಸ್ತುವಾರಿ ಮುಖಂಡರಾದ, ಎಂ.ಗಂಗಾಧರ ಉಪಸ್ಥಿತರಿದ್ದರು. ಸಾಂಸ್ಕೃತಿಕ ಪಟುಗಳಾದ, ಎಂ.ಆರ್.ಭೇರಿ ಕವಿಗೋಷ್ಠಿ ನಡೆಸಿಕೊಟ್ಟರು. ಆದೇಶ ನಗನೂರು ನಿರೂಪಿಸಿದರು.
ಈ ಸಂದರ್ಭದಲ್ಲಿ ವೇಣುಗೋಪಾಲ್ ಕೆರಳ, ಬಾಲಕೃಷ್ಣ, ಪ್ರವಿಂಟ್, ಆಂಧ್ರಪ್ರದೇಶದ,ರಾಮಣ್ಣ, ವೆಂಕಟೇಶ,ಮದ್ಯಪ್ರದೇಶದ, ಫಹೀಮ್, ದೆಹಲಿಯ, ನಿರಂಜನ್ ಆಜಾದ್, ಕವಿ, ಮಹೇಂದ್ರ ಕುರ್ಡಿ, ಆರ್.ಹುಚ್ಚರೆಡ್ಡಿ, ಹೆಚ್.ಆರ್.ಹೊಸಮನಿ, ಮುದಿಯಪ್ಪ, ರಂಜೀತ್, ಅಜೀಜ್ ಜಾಗೀರದಾರ್, ನಿರಂಜನ, ಅನುಪಮ, ಭಗತ್,ಸ್ಟಾಲಿನ್, ಸೇರಿದಂತೆ ಇತರರು ಭಾಗವಹಿಸಿದ್ದರು. ಶಿಬಿರ 2ನೇ ದಿನಕ್ಕೆ ಮುಂದುವರೆಯಿತು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…