ಬಿಸಿ ಬಿಸಿ ಸುದ್ದಿ

ಭಾರತ ನ್ಯಾಯ ಸಂಹಿತೆ ಜಾರಿಯಿಂದ ಬ್ರಿಟಿಷ್ ಗುಲಾಮತನದಿಂದ ಮುಕ್ತಿ: ಸಂಸದ ಡಾ. ಜಾಧವ್

ಕಲಬುರಗಿ: ಬ್ರಿಟಿಷ್ ಕಾನೂನು ಪದ್ಧತಿಯಲ್ಲಿದ್ದ ಐಪಿಸಿ ಕಾನೂನುಗಳ ತಿದ್ದುಪಡಿ ಮಾಡಿ ಭಾರತೀಯ ನ್ಯಾಯ ಸಂಹಿತೆ (ಬಿ.ಎನ್. ಎಸ್)ಜಾರಿ ಮಾಡಿರುವುದರಿಂದ ಬ್ರಿಟಿಷ್ ಗುಲಾಮತನದಿಂದ ಮುಕ್ತಗೊಳಿಸಿ ಭಾರತೀಯ ಸಂಸ್ಕೃತಿಯ ಮಾನಸಿಕತೆ ನಿರ್ಮಾಣ ಮಾಡಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ನಿರ್ಧಾರ ಮಾಡಿರುವುದು ಐತಿಹಾಸಿಕ ಕ್ರಮ ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಹೇಳಿದರು.

ನ್ಯಾಯವಾದಿಗಳ ಸಂಘದಲ್ಲಿ ಏಪ್ರಿಲ್ 2 ರಂದು ನ್ಯಾಯವಾದಿಗಳನ್ನುದ್ದೇಶಿಸಿ ಮಾತನಾಡುತ್ತಾ ಸುಮಾರು 1500 ಕಳಪೆ ಕಾನೂನುಗಳನ್ನು ರದ್ದು ಮಾಡಿ ಭಾರತೀಯ ಸಾಮಾಜಿಕ ಜೀವನಕ್ಕೊಪ್ಪುವ ಕಾನೂನುಗಳನ್ನು ಜಾರಿಗೆ ತಂದು ಜನಸಾಮಾನ್ಯರ ಬಾಳಿಗೆ ಕಾನೂನು ಕೈಗೆಟಕುವಂತೆ ಮಾಡಿದರು.

ಕೇಂದ್ರ ಸರ್ಕಾರದಲ್ಲಿ ದಲಿತ ಮುಖಂಡ, ನಿವೃತ್ತ ಐ ಎ ಎಸ್ ಅಧಿಕಾರಿ ಅರ್ಜುನ್ ರಾಮ್ ಮೇಘಾವಾಲ್ ಎರಡನೇ ದಲಿತ ಕಾನೂನು ಮಂತ್ರಿಯಾಗಿ ಪ್ರಧಾನಿ ಮತ್ತು ಗೃಹ ಸಚಿವರ ದಕ್ಷಿಣ ನಾಯಕತ್ವದಲ್ಲಿ ಭಾರತೀಯ ನ್ಯಾಯ ಸಮಿತಿ ಜಾರಿಗೆ ತಂದರು ನನ್ನ ಹಿರಿಯ ಸಹೋದರ ಭೀಮ್ ಸಿಂಗ್ ಜಾಧವ್ ನ್ಯಾಯವಾದಿಗಳಾಗಿ ಜನಸೇವೆ ಮಾಡಿದ್ದು ಈಗ ನ್ಯಾಯವಾದಿಗಳ ಬೆಂಬಲ ಮತ್ತು ಆಶೀರ್ವಾದ ನಮ್ಮ ಮೇಲೆ ಇರಲಿ ಎಂದು ಜಾಧವ್ ಮನವಿ ಮಾಡಿದರು.

ಮೋದಿ ಭಯ ಶುರು: ಪ್ರಧಾನಿ ಮೋದಿ ಅವರು 10 ವರ್ಷಗಳಲ್ಲಿ ದೇಶದಲ್ಲಿ ಹಾಗೂ ಕಲ್ಬುರ್ಗಿಗೆ ನೀಡಿದ ಕೊಡುಗೆಗಳನ್ನು ನೋಡಿ ಕಾಂಗ್ರೆಸ್ಸಿನಲ್ಲಿ ಮೋದಿ ಭಯ ಶುರುವಾಗಿದೆ. ಹತ್ತು ವರ್ಷಗಳಲ್ಲಿ ಭಾರತವು ಆರ್ಥಿಕತೆಯಲ್ಲಿ ಐದನೇ ಸ್ಥಾನಕ್ಕೆ ಏರಿದೆ ರಾಮಮಂದಿರ ನಿರ್ಮಾಣ 370, ಮುಂತಾದ ಐತಿಹಾಸಿಕ ನಿರ್ಣಯದಿಂದ ಭಾರತೀಯರ ಮನೆಗೆದ್ದಿದ್ದಾರೆ.

ಹತ್ತು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಮೆಗಾ ಜವಳಿ ಪಾರ್ಕ್ ಅಸ್ತಿತ್ವಕ್ಕೆ ಬರಲಿದ್ದು ಈ ಯೋಜನೆ ಜಾರಿಯಾಗದಿದ್ದರೆ ರಾಜೀನಾಮೆಗೂ ಸಿದ್ಧ ಎಂದು ಪಟ್ಟು ಹಿಡಿದ ಪರಿಣಾಮವಾಗಿ ಇನ್ನು ಆರು ತಿಂಗಳಲ್ಲಿ ಕೆಲಸ ಪ್ರಾರಂಭವಾಗಲಿದೆ. 1475 ಕೋಟಿ ರೂಪಾಯಿ ವೆಚ್ಚದಲ್ಲಿ ಭಾರತ್ ಸಾಗರ್ ಮಾಲಾ ರಸ್ತೆ 200 ಕೋಟಿ ರೂಪಾಯಿ ವೆಚ್ಚದಲ್ಲಿ ಅಮೃತ್ ಭಾರತ್ ರೈಲು ನಿಲ್ದಾಣ ಅಭಿವೃದ್ಧಿ ಯೋಜನೆ ಅಡಿ ವಾಡಿ ಶಹಾಬಾದ್ ಕಲಬುರ್ಗಿ ಹಾಗೂ ಸ್ಟೇಷನ್ ಗಾಣಗಾಪುರ ರೈಲು ನಿಲ್ದಾಣಗಳು ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿಗೆ ಚಾಲನೆ ದೊರೆತಿದೆ. ಈ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಕಾಂಗ್ರೆಸ್ಸಿಗೆ ಮೋದಿ ಭಯ ಈಗಲೇ ಪ್ರಾರಂಭವಾಗಿದೆ ಎಂದು ಹೇಳಿದರು.

ಹಿಂದೂ ಧರ್ಮವನ್ನು ಕ್ಯಾನ್ಸರ್ ಹೀಯಾಳಿಸಿ ಅಪಮಾನಕರ ಹೇಳಿಕೆ ನೀಡಿದ ಮತ್ತು ವಿಧಾನ ಸೌಧ ದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರನ್ನು ಬೆಂಬಲಿಸಿದ ಕಾಂಗ್ರೆಸ್ಸಿನ ನಿಜ ಬಣ್ಣ ಬಯಲಾಗಿದೆ. ಭಾರತದ ಉಜ್ವಲ ಭವಿಷ್ಯಕ್ಕಾಗಿ ಮೋದಿಯವರನ್ನು ಪ್ರಧಾನಿಯಾಗಿಸಲು ಎಲ್ಲರೂ ಬೆಂಬಲಿಸಬೇಕು ಎಂದು ಜಾಧವ್ ಹೇಳಿದರು.

ವಕೀಲರುಗಳು ಪ್ರತಿಯೊಬ್ಬರಲ್ಲೂ ಶಿಸ್ತು ಮೂಡಿಸುವವರು.ಹಾಗೆ ಕೇಂದ್ರದಲ್ಲಿ ಮೋದಿಯವರು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿ ದೇಶಕ್ಕೆ ಶಿಸ್ತಿನ ಸರಕಾರವನ್ನು ನೀಡಿ ಜನಪ್ರಿಯತೆ ಗಳಿಸಿದ್ದಾರೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯ ಶಶಿಲ್ ಜಿ ನಮೋಶಿ ಹೇಳಿದರು.

ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಗುಪ್ತಲಿಂಗ ಪಾಟೀಲ್ ಮಾತನಾಡಿ ಮೋದಿಯವರ ಆಡಳಿತದ ಹತ್ತು ವರ್ಷ ಹಾಗೂ ಜಾಧವ್ ಅವರ ಐದು ವರ್ಷಗಳ ಸಾಧನೆಯನ್ನು ವಿವರವಾಗಿ ತಿಳಿಸಿರುವುದರಿಂದ ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಶುಭ ಹಾರೈಸಿದರು ಪ್ರಧಾನ ಕಾರ್ಯದರ್ಶಿ ಬಿ.ಎಸ್ ನಾಶಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ ಜಯಶೀಲ ಬದೋಲೆ, ಶಿವರಾಜ್ ಸಿ. ಪಾಟೀಲ್ ದಯಾಘನ ಧಾರವಾಡಕರ್, ಬಸವರಾಜ ಚಿಂಚೋಳಿ ವಿಠ್ಠಲ್ ಮಿಸ್ಕಿನ್, ಸಿದ್ದಾಜಿ ಪಾಟೀಲ್ ರಾಜು ಕೊರಳ್ಳಿ ,ಎಸ್ ಆರ್ ಪೊಲೀಸ್ ಪಾಟೀಲ್ ಮತ್ತು ಲಕ್ಷ್ಮಿಕಾಂತ್ ಕುಲಕರ್ಣಿ ಮತ್ತಿತರದಿದ್ದರು.

ಸಂಘದ ಉಪಾಧ್ಯಕ್ಷರಾದ ಧರ್ಮಣ್ಣ ಜೈನಾಪುರ್ ಸ್ವಾಗತಿಸಿ ನಿರೂಪಿಸಿದರು. ನ್ಯಾಯವಾದಿ ಶಾಂತಪ್ಪ ಚಿಕಾಲಿ ವಂದಿಸಿದರು. ನಿಯೋಜಿತ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಅವರು ಕೋರ್ಟ್ ಆವರಣದಲ್ಲಿ ನ್ಯಾಯವಾದಿಗಳು ಹಾಗೂ ಸಾರ್ವಜನಿಕರನ್ನು ಭೇಟಿಯಾಗಿ ಮತ ಯಾಚಿಸಿದರು.

emedialine

Recent Posts

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

37 mins ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

40 mins ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

42 mins ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

2 hours ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

3 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

6 hours ago