ಶಹಾಬಾದ: ಲೋಕಸಭಾ ಚುನಾವಣೆ ಕಲಬುರಗಿ ಭವಿಷ್ಯದ ಮತ್ತು ಅಭಿವೃದ್ಧಿಯ ಚುನಾವಣೆಯಾಗಿದ್ದು, ಮತದಾರರು ನುಡಿದಂತೆ ನಡೆದ ಕಾಂಗ್ರೆಸ್‍ಗೆ ಮತದಾನ ಮಾಡುವ ಮೂಲಕ ರಾಧಾಕೃಷ್ಣ ಅವರಿಗೆ ಆಶೀರ್ವದಿಸಬೇಕೆಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‍ರಾಜ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಅವರು ಮಂಗಳವಾರ ನಗರದ ಸಹರಾ ಸಭಾಂಗಣದಲ್ಲಿ ಲೋಕಸಭಾ ಚುನಾವಣೆಯ ನಿಮಿತ್ತ ಆಯೋಜಿಸಲಾದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರು ಯಾವ ಮುಖ ಇಟ್ಟುಕೊಂಡು ಹಾಗೂ ಯಾವ ಆಧಾರದಿಂದ ಮತಯಾಚನೆ ಮಾಡುತ್ತಾರೆ ಎಂಬುದು ಗೊತ್ತಿಲ್ಲ.ಆದರೆ ನಮ್ಮ ಪಕ್ಷದ ಕಾರ್ಯಕರ್ತರು ಪ್ರತಿ ಮನೆಮನೆಗೆ ಹೋಗಿ ಸರ್ಕಾರದ ಸಾಧನೆಗಳನ್ನು ತಿಳಿಸುವ ಮೂಲಕ ಮತಯಾಚನೆ ಮಾಡಬೇಕು.
ಸರ್ಕಾರದ ಸಾಧನೆಗಳನ್ನು ಪ್ರತಿ ಮನೆಮನೆಗೆ ತೆರಳಿ ನಮ್ಮ ಕಾರ್ಯಕರ್ತರು ಹಾಗೂ ಮುಖಂಡರು ಎದೆತಟ್ಟಿ ಮತಯಾಚನೆ ಮಾಡುವಷ್ಟು ಶಕ್ತಿಯನ್ನು ನಮ್ಮ ಸರ್ಕಾರ ತುಂಬಿದೆ.ಕಳೆದ ಚುನಾವಣೆಯಲ್ಲಿ ಪ್ರತಿ ತಾಲೂಕಿನ ಜನರ ಬೇಡಿಕೆಗಳನ್ನು ಆಲಿಸಿ ಐದು ಗ್ಯಾರಂಟಿಗಳನ್ನು ಪ್ರಣಾಳಿಕೆಯನ್ನು ಹೊರಡಿಸಲಾಗಿತ್ತು.ನಂತರ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ನುಡಿದಂತೆ ನಡೆದಿದ್ದೆವೆ.ಜನರ ಬದುಕನ್ನು ಕಟ್ಟಿಕೊಡುವ ಕೆಲಸ ಮಾಡಿದ್ದೆವೆ.ನೆಮ್ಮದಿ ಜೀವನ ನಡೆಸಲು ಈ ಐದು ಗ್ಯಾರಂಟಿಗಳನ್ನು ತರುವುದರ ಮೂಲಕ ಸಣ್ಣ ಕಾಣಿಕೆಯನ್ನು ಸರ್ಕಾರ ನೀಡಿದೆ.ಕಷ್ಟಪಟ್ಟು ದುಡಿದ ಬೆವರಿನ ಫಲವನ್ನು ತೆರಿಗೆ ರೂಪದಲ್ಲಿ ಸರಕಾರಕ್ಕೆ ಕಟ್ಟಿದ್ದೀರಾ.ಅದನ್ನು ನಾವು ಈ ಐದು ಗ್ಯಾರಂಟಿಗಳ ಮೂಲಕ ತಮಗೆ ನೀಡುತ್ತಿದ್ದೆವೆ.
ಆದರೆ ಬಿಜೆಪಿ ನಿಮ್ಮ ತೆರಿಗೆ ಹಣವನ್ನು ಜೇಬಿಗೆ ಇಳಿಸುತ್ತಿದ್ದಾರೆ. ಸಂಸದ ಉಮೇಶ ಜಾಧವರ ಅವರೇ ಕಳೆದ ಬಾರಿ ಬಹುತ್ ಹೋಗಯಿ ಮೆಹಂಗಾಯಿ ಮಾರ್, ಅಬಕೀ ಬಾರ್ ಮೋದಿ ಸರಕಾರ ಎಂದು ಹೇಳಿದ್ದೀರಿ.ಈಗ ಹೇಳಿ ಪೆಟ್ರೋಲ್, ಡಿಸೇಲ್, ಗ್ಯಾಸ್, ಧವಸ ಧಾನ್ಯಗಳ ಬೆಲೆ ಏರಿಕೆಯಿಂದ ಜನಸಾಮನ್ಯರು ತತ್ತರಿಸಿ ಹೋಗಿದ್ದಾರೆ.ನಿರೋದ್ಯೋಗ ಸಮಸ್ಯೆ, ಪ್ರತಿಯೊಂದು ವಸ್ತುವಿನ ಮೇಲೆ ಜಿಎಸ್‍ಟಿ ತಂದು ಜನಸಮಾನ್ಯರ ಬದುಕನ್ನು ಮೂರಾಬಟ್ಟೆ ಮಾಡಿದ್ದೀರಾ.ಈಗ ಹೇಳಿ ಕಾಂಗ್ರೆಸ್‍ನ ಗ್ಯಾರಂಟಿ ರಿಯಲ್ ಆ ಅಥವಾ ಮೋದಿಯ ಗ್ಯಾರಂಟಿ ರೀಲ್ ಆ ಎಂದು ಆತ್ಮಾವಲೋಕನ ಮಾಡಿಕೊಳ್ಳಿ ಎಂದರು. ನಿಮ್ಮ ಐದು ವರ್ಷದ ಸಾಧನೆ ಏನು? ಎಷ್ಟು ಬಾರಿ ಶಹಾಬಾದ ಹಾಗೂ ಚಿತ್ತಾಪೂರಕ್ಕೆ ಬಂದಿದ್ದಾರೆ? ಇಲ್ಲಿನ ಜನರ ಮತ ಪಡೆದು ಯಾವ ಅಭಿವೃದ್ಧಿ ಮಾಡದೇ ಮೋಸ ಮಾಡಿದ್ದಾರೆ.ಇವರಿಗೆ ಈ ಬಾರಿ ತಕ್ಕ ಪಾಠ ಕಲಿಸಬೇಕೆಂದು ಹೇಳಿದರು.
ಸಚಿವ ಶರಣಪ್ರಕಾಶ ಪಾಟೀಲ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ.ಎಲ್ಲಾ ವರ್ಗದವರಿಗೆ ಅನುಕೂಲ ಆಗುವಂತಹ 5 ಗ್ಯಾರಂಟಿಗಳನ್ನು ನೀಡಿದೆ. ಕಾಂಗ್ರೆಸ್ ಸದಾ ದಲಿತರು, ಬಡವರು, ಶೋಷಿತರ ಪರವಾಗಿರುವ ಪಕ್ಷವಾಗಿದ್ದು, ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕು. ಕೋಮುವಾದಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಗೆಲ್ಲಿಸಿ’ ಎಂದರು.
ಈ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಉಸ್ತುವಾರಿ ವಸಂತಕುಮಾರ, ಶಾಸಕರಾದ ಅಜಯ್‍ಸಿಂಗ್, ಕಲಬುರಗಿ ಕಾಡಾ ಅಧ್ಯಕ್ಷ ಡಾ.ರಶೀದ್ ಮರ್ಚಂಟ್,ಮಾಜಿ ಸಚಿವ ರೇವುನಾಯಕ ಬೆಳಮಗಿ,ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ, ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ ಮಾತನಾಡಿದರು.
ಶಾಸಕ ಅಲ್ಲಮಪ್ರಭು ಪಾಟೀಲ,ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್, ರಾಯಚೂರ ಗ್ರಾಮೀಣ ಶಾಸಕ ಹಂಪನಗೌಡ ಬಾದರ್ಲಿ, ಪಂಚ ಗ್ಯಾರಂಟಿ ಸಮಿತಿಯ ಜಿಲ್ಲಾಧ್ಯಕ್ಷೆಚಂದ್ರಿಕಾ ಪರಮೇಶ್ವರ, ಡಿ.ಜಿ.ಸಾಗರ, ಮರಿಯಪ್ಪ ಹಳ್ಳಿ, ಮಲ್ಲಿನಾಥ ಸೊಂತ, ವಿಜಯಕುಮಾರ ಮುಟ್ಟತ್ತಿ, ಯಾಕೂಬ ಮರ್ಚಂಟ್, ಪೀರಪಾಶಾ, ನಿಂಗಣ್ಣ ದೇವಕರ್, ಡಾ.ಜಹೀರ್,ಅಜೀತ್ ಪಾಟೀಲ,ಶರಣಗೌಡ ಪಾಟೀಲ ಗೋಳಾ, ಭೀಮುಗೌಡ,ಮಾಣಿಕ್‍ಗೌಡ, ಕಿಶನ್ ನಾಯಕ, ರಾಜು ಮೇಸ್ತ್ರಿ, ವಿಶ್ವರಾಧ್ಯ ಬೀರಾಳ,ಡಿ.ಡಿ.ಓಣಿ, ಕುಮಾರ ಚವ್ಹಾಣ, ನಾಗಣ್ಣ ರಾಂಪೂರೆ,ಸೂರ್ಯಕಾಂತ ಕೋಬಾಳ, ಕಿರಣ ಚವ್ಹಾಣ,ಸಾಹೇಬಗೌಡ ಬೋಗುಂಡಿ, ನಾಗರಾಜ ಕರಣಿಕ್,ಹಾಷಮ್ ಖಾನ ಸೇರಿದಂತೆ ಅನೇಕರು ಅಪಾರ ಕಾರ್ಯಕರ್ತರು ಇದ್ದರು. ಮೃತ್ಯುಂಜಯ್ ಹಿರೇಮಠ ನಿರೂಪಿಸಿ, ವಂದಿಸಿದರು.
ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 52,000 ಕೋಟಿ ಬೇಕಾಗುತ್ತದೆ. ಆದರೂ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಬಿಜೆಪಿ ನಮ್ಮ ಯೋಜನೆಗಳನ್ನು ಬಿಟ್ಟಿಬಾಗ್ಯ ಎಂದು ಟೀಕಿಸಿದೆ. ಆದರೆ ನಮ್ಮ ಸರ್ಕಾರ ಜನರು ಕಟ್ಟಿದ ತೆರಿಗೆಯನ್ನೇ ಗ್ಯಾರಂಟಿ ಯೋಜನೆಗಳ ಮೂಲಕ ವಾಪಸ್ ಕೊಟ್ಟಿದ್ದೇವೆ. ಬಿಜೆಪಿಗರು ಇಂತಹ ಯಾವದಾದರೊಂದು ಯೋಜನೆ ಜಾರಿಗೆ ತಂದಿದ್ದರೆ ಹೇಳಲಿ ಎಂದು ಸವಾಲಾಕಿದರು. – ಪ್ರಿಯಾಂಕ್ ಖರ್ಗೆ ಸಚಿವ.
ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…