ಕಲಬುರಗಿ:ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬರುವ ಸಂಸದರು ತಮ್ಮ ಸಂಸದರ ನಿಧಿಯಲ್ಲಿ ಕೊಳಚೆ ಪ್ರದೇಶಗಳ ಅಭಿವೃದ್ಧಿಗೂ ಹಣ ಮೀಸಲಿಡಬೇಕು ಎಂದು ರಾಜ್ಯ ಸ್ಲಂ ಜನಾಂದೋಲನ ಸಂಘಟನೆ ಒತ್ತಾಯಿಸಿತು.
ಸ್ಲಂ ಜನರ ಪ್ರಣಾಳಿಕೆಯ ಸಾರ್ವತ್ರಿಕ ಒತ್ತಾಯಗಳ ಕರಪತ್ರವನ್ನು ನಟ ಚೇತನ್ ಅಹಿಂಸಾ ಬಿಡುಗಡೆ ಮಾಡಿದರು.
ಪಿಎಂ ಆವಾಸ್ ಯೋಜನೆಯಲ್ಲಿ ಮನೆ ನಿರ್ಮಾಣದ ಪೆÇ್ರೀತ್ಸಾಹ ಧನವನ್ನು ರೂ. 5 ಲಕ್ಷಕ್ಕೆ ಹೆಚ್ಚಿಸಬೇಕು. ವಸತಿ ಯೋಜನೆಗಳ ಮೇಲಿನ ಜಿಎಸ್‍ಟಿ ತೆಗೆಯಬೇಕು. ಸ್ಲಂ ನಿವಾಸಿಗಳ ಭೂಮಿಯನ್ನು ಸಾರ್ವಜನಿಕ ಸಂಪನ್ಮೂಲವೆಂದು ಪರಿಗಣಿಸಬೇಕು ಈ ಎಂದು ಒತ್ತಾಯಿಸಿದರು.
ನಿವೇಶನ ಮತ್ತು ವಸತಿ ರಹಿತರಿಗೆ ರಾಷ್ಟ್ರೀಯ ನಗರ ಲ್ಯಾಂಡ್ ಬ್ಯಾಂಕ್ ನೀತಿ ಜಾರಿಗೆ ತರಬೇಕು. ವಸತಿ ಹಕ್ಕು ಕಾಯ್ದೆಯನ್ನು ಅನುಷ್ಠಾನಕ್ಕೆ ತರಬೇಕು. ಎಲ್ಲ ಜನರಿಗೆ ಉಚಿತ ಮತ್ತು ಕಡ್ಡಾಯ ಚಿಕಿತ್ಸೆಯ ಆರೋಗ್ಯ ಗ್ಯಾರಂಟಿಯನ್ನು ಜಾರಿಗೆ ತರಬೇಕು. ಶಿಕ್ಷಣ ಹಕ್ಕು ಅರ್ಥಪೂರ್ಣಗೊಳಿಸಲು ಸಮಾನ ಶಿಕ್ಷಣ ಜಾರಿಗೆ ತಂದು, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ರಾಷ್ಟ್ರೀಯ ನಗರ ಉದ್ಯೋಗ ಯೋಜನೆಯನ್ನು ಜಾರಿಗೊಳಿಸಿ, ಕುಟುಂಬಕ್ಕೊಂದು ಸರ್ಕಾರಿ ಕೆಲಸ ನೀಡಬೇಕು. ಜಾತಿವಾರು ಗಣತಿ ಖಾಸಗೀಕರಣ ಕೈಬಿಟ್ಟು, ಕಲ್ಯಾಣ ರಾಜ್ಯಗಳ ಆಯಾಮದಲ್ಲಿ ಬಡತನ ನಿರ್ಮೂಲನೆ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು. ಶೇ 50ರಷ್ಟು ಮಹಿಳಾ ಮೀಸಲಾತಿಯನ್ನು ಎಲ್ಲ ಕ್ಷೇತ್ರಗಳಲ್ಲಿ ಜಾರಿಗೊಳಿಸಬೇಕು. ಎಸ್‍ಸಿ, ಎಸ್‍ಟಿ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿಡಬೇಕು ಎಂದು ಕೋರಿದರು. ಈ ಸಂದರ್ಭದಲ್ಲಿ ಸಂಘಟನೆಯ ಸಂಚಾಲಕಿ ರೇಣುಕಾ ಸರಡಗಿ, ಗೌರಮ್ಮ ಮಾತಾ, ಹಿನಾ ಶೇಖ ಸೇರಿದಂತೆ ಇತರರು ಹಾಜರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…