ಕಲಬುರಗಿ: ಬದುಕಿನಲ್ಲಿ ಗುರಿಯನ್ನು ಹೊಂದಿಲ್ಲದಿದ್ದರೆ ಸಾಧನೆಯ ದಾರಿಯನ್ನು ತಲುಪುವುದು ತುಂಬಾ ಕಷ್ಟ. ನಿರಂತರ ಪ್ರಾಮಾಣಿಕ ಪ್ರಯತ್ನದಿಂದ ಮನುಷ್ಯ ಉನ್ನತ ಮಟ್ಟಕ್ಕೆರುತ್ತಾನೆ ಎಂದು ಶ್ರೀನಿವಾಸ ಸರಡಗಿ ಪೂಜ್ಯರಾದ ಷ. ಬ್ರ. ಡಾ. ರೇವಣಸಿದ್ಧ ಶಿವಾಚಾರ್ಯರು ಹೇಳಿದರು.
ನಿನ್ನ್ನೆ ತಾಜಸುಲ್ತಾನಪೂರದ ಗ್ರಾಮ ಪಂಚಾಯತ ಕಾರ್ಯಾಲಯದ ಎದುರುಗಡೆ ದಿ. ಸಿದ್ರಾಮಯ್ಯ ಹೊಸಮಠ ಅವರ ಸ್ಮರಣೋತ್ಸವ ನಿಮಿತ್ಯ “ತವರಿನ ಸನ್ಮಾನ” ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಮನುಷ್ಯನು ಸಾಧಿಸುವ ಮುನ್ನ ಜನ ಕನಿಷ್ಟ ದೃಷ್ಟಿಯಿಂದ ನೋಡುತ್ತಾರೆ ಆದರೆ ಸಾಧಿಸಿದ ನಂತರ ಇಡಿ ಸಮಾಜವೇ ಸನ್ಮಾನಿಸುತ್ತದೆ. ಸಾಧಿಸುವ ಸಾಮರ್ಥ್ಯ ಸರ್ವರಲ್ಲಿಯೂ ಇರುತ್ತದೆ. ಆದರೆ ಸಾಧಿಸಬೇಕೆನ್ನುವ ಆತ್ಮವಿಶ್ವಾಸ ಇದ್ದರೆ ಮನುಷ್ಯನು ಉನ್ನತ ಶಿಖರಕ್ಕೆ ಏರುತ್ತಾನೆ ಎಂದು ನುಡಿದರು.
ಕಾರ್ಯಕ್ರಮದ ಆಯೋಜಕರಾದ ರೇವಣಸಿದ್ದಯ್ಯ ಹೊಸಮಠ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ನಮ್ಮೂರಿನ ಹಲವಾರು ಜನ ವಿವಿಧ ಕ್ಷೇತ್ರದಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯ. ಇಂತಹ ಮಹಾನ್ ವ್ಯಕ್ತಿಗಳು ಸರ್ವರಿಗೂ ಆದರ್ಶವಾಗಲಿ ಜೊತೆಗೆ ನಾಡಿಗೆ ಹೆಚ್ಚಿನ ಸೇವೆ ಸಲ್ಲಿಸಲಿ ಎನ್ನುವ ಉದ್ದೇಶದಿಂದ ತವರಿನ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂತಹ ಕಾರ್ಯಕ್ರಮ ತಮ್ಮೆಲ್ಲರಿಗೂ ಸ್ಫೂರ್ತಿಯಾಗಲಿ ಮತ್ತು ನಿಮ್ಮಿಂದ ಇತಿಹಾಸ ನಿರ್ಮಿಸುವ ಕಾರ್ಯದೊಂದಿಗೆ ನಮ್ಮೂರಿನ ಸೇವೆಯಾಗಲಿ ಎಂದು ಹೇಳಿದರು.
ಗೌರವ ಡಾಕ್ಟರೇಟ್‌ಗೆ ಭಾಜನರಾದ ಸರಡಗಿ ಪೂಜ್ಯರಿಗೆ ವಿಶೇಷವಾಗಿ ಗೌರವಿಸಲಾಯಿತು. ವೇದಿಕೆಯ ಮೇಲೆ ಉಪನ್ಯಾಸಕರಾದ ಶರಣಬಸವ ನೀಲಾ, ದೇವಲಘಾಣಗಾಪೂರ ದತ್ತ ಮಂದಿರದ ಟ್ರಸ್ಟಿ ಶ್ರೀಪಾದರಾವ ಚೌಡಾಪೂರಕರ್, ನಿವೃತ್ತ ಡಿ.ವೈ.ಎಸ್. ಪಿ. ಸೋಮಶೇಖರ ವಿ. ಮಠಪತಿ, ತಾಜಸುಲ್ತಾನಪೂರ ತಾ.ಪಂ. ಸದಸ್ಯರಾದ ಚಂದ್ರಶೇಖರ ಅಂಬಲಗಿ, ಗ್ರಾ. ಪಂ. ಉಪಾಧ್ಯಕ್ಷರಾದ ಶ್ರೀಮತಿ ಸಾವಿತ್ರಿ ರೇವಣಸಿದ್ದಪ್ಪ ಕಲಕೋರಿ, ಎ.ಪಿ.ಎಂ.ಸಿ. ಸದಸ್ಯರಾದ ಸುಭಾಷ್ಚಂದ್ರ ಓಗಿ, ಗ್ರಾ. ಪಂ. ಮಾಜಿ ಅಧ್ಯಕ್ಷರಾದ ಶಿವಶರಣಪ್ಪಾ ಹಿರೇಮನಿ, ಚಂದ್ರಶೇಖರ ಜಿ. ಪಾಟೀಲ, ಶಾಂತಯ್ಯ ಹೊಸಮಠ ಇದ್ದರು. ಜಿಲ್ಲಾ ಸಮಾಜ ಕಲ್ಯಾಣ ನಿವೃತ್ತ ಅಧಿಕಾರಿಗಳಾದ ಸಿದ್ರಾಮಯ್ಯ ಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಗ್ರಾಮದ ವಿವಿಧ ಕ್ಷೇತ್ರಗಳಲ್ಲಿ ಸೇವೆಗೈಯುತ್ತಿರುವ ತವರಿನ ಸನ್ಮಾನಿತರಾದ ಎನ್.ಜಿ. ಪಾಟೀಲ, ಚಿಕ್ಕವೀರಯ್ಯ ಮಠಪತಿ, ನಾಗಣ್ಣಾ ಬಿ. ಜುಂಜಾ, ಅನಿತಾ ಎಸ್. ಹಿರೇಮನಿ, ನಾಗರಾಜ ಬಿ. ಕರೂರ, ಲಕ್ಷ್ಮೀ ಬಿ. ಕುಂಟಗೋಳ, ಡಾ. ನಂದಿನಿ ಎನ್. ಮಠ, ಡಾ. ಕೈಲಾಸ ಎಸ್. ಕರೂರ, ರಾಕೇಶ ಆರ್. ಮಠಪತಿ, ಡಾ. ಸಂಜೀವಕುಮಾರ ಬಿ. ಕುದರಿ, ಡಾ. ಅಮಿತ್‌ಕುಮಾರ್ ಎಸ್. ಕಟ್ಟಿಮನಿ, ಹಣಮಂತರಾಯ ಎಸ್. ಅಟ್ಟೂರ ಇವರಿಗೆ ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಇವರ ಹಾಸ್ಯದ ಜೊತೆಗೆ ಉತ್ತಮ ಸಂದೇಶ ನೀಡುವ ಮಾತುಗಳನ್ನಾಡಿ ಎಲ್ಲರ ಮನಸೂರೆಗೊಂಡರು. ಕಲಾವಿದರಾದ ಸಂಗಮೇಶ ಶಾಸ್ತ್ರೀ ಹಾಗೂ ಮಲಕಾರಿ ಪೂಜಾರಿ ಸಂಗೀತ ಸೇವೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ನಾಗೇಂದ್ರಯ್ಯ ಮಠ, ಬಸವರಾಜ ಓಗಿ, ಮಹೇಶ ಬಿರನಳ್ಳಿ, ಶರಣು ಹಂಗರಗಿ, ನಾಗಭೂಷಣ ಹೊಸಮಠ, ಅರ್ಜುನ ಆಜಾದಪೂರ, ಸಿದ್ರಾಮ ಕರೂರ, ಗುರುಶಾಂತ ಓಗಿ, ಶಿವಲಿಂಗ ಮಾಳಾ, ನಾಗಣ್ಣಾ ಚೌಡಾಪೂರ, ಪ್ರಭು ಮಠ, ಮಲ್ಲಮ್ಮ ಹಿರೇಮಠ, ಬಸವರಾಜ ಮದರಿ, ಮಹೇಶ ತೇಲಕುಣಿ, ರೇವಣಸಿದ್ದಪ್ಪ ಕಲಕೋರಿ, ವಿಠ್ಠಲ ಹುಬ್ಬಳ್ಳಿ, ರಾಚಯ್ಯ ಸ್ವಾಮಿ, ನಾಗರಾಜ ತಡಕಲ, ಶಿವಶರಣಪ್ಪ ಅಟ್ಟೂರ, ಶರಣಯ್ಯ ಹೊಸಮಠ ಸೇರಿದಂತೆ ನೂರಾರು ಜನ ಇದ್ದರು.
ಶ್ರವಣಕುಮಾರ ಮಠ ಪ್ರಾರ್ಥಿಸಿದರು, ರೇವಣಸಿದ್ದಯ್ಯ ಹೊಸಮಠ ಸ್ವಾಗತಿಸಿದರು, ರವಿಕುಮಾರ ಶಹಾಪೂರ್‌ಕರ್ ನಿರೂಪಿಸಿದರು, ಗುರುಲಿಂಗಯ್ಯ ಮಠಪತಿ ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…