ಎಲ್ಲರು ಒಂದಾಗುವ ಭಾರತ ಅದು ಬಹÅತ್ವ ಭಾರತ : ಡಾ. ಸತ್ಯಾನಂದ ಪಾತ್ರೋಟ

ಕಲಬುರಗಿ: ಚೆನ್ನಣ್ಣ ವಾಲೀಕಾರ ಜನಸಾಮಾನ್ಯರ ಕವಿ ಅಷ್ಟೇ ಅಲ್ಲ ಅವರೊಬ್ಬ ಅಂಬೇಡ್ಕರ್ ಅವರ ಶ್ರೇಷ್ಠ ಅನುಯಾಯಿ, ಹಾಡುಗಾರ, ವಿದ್ವಾಂಸ, ಕಾದಂಬರಿಕಾರರಾಗಿದ್ದರು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಚಿತ್ತಯ್ಯ ಪೂಜಾರ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಜರುಗಿದ ಚೆನ್ನಣ್ಣ ವಾಲೀಕಾರ ಅವರ 82ನೆಯ ಹುಟ್ಟು ಹಬ್ಬದಂಗವಾಗಿ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ವ್ಯೋಮಾ ವ್ಯೋಮ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಡಾ. ಸತ್ಯಾನಂದ ಪಾತ್ರೋಟ ಅವರಿಗೆ ಪ್ರದಾನ ಮಾಡಿ ಮಾತಾಡಿದರು. ಚೆನ್ನಣ್ಣ ವಾಲೀಕಾರ ಹಾಗೂ ಸತ್ಯಾನಂದ ಪಾತ್ರೋಟ ಈ ಇಬ್ಬರೂ ಕನ್ನಡ ನಾಡಿನ ತಳವರ್ಗದ ಜನಸಮುದಾಯದ ದನಿಯಾದವರು ಎಂದು ಬಣ್ಣಿಸಿದರು.

ಪೆÇ್ರ. ಎಚ್.ಟಿ. ಪೆÇೀತೆಯವರು ದೂರವಾಣಿ ಮೂಲಕ ಚೆನ್ನಣ್ಣ ಹೆಸರಿನ ಪ್ರಶಸ್ತಿ ಸ್ವೀಕರಿಸುವಿರಾ? ಎಂದು ಕೇಳಿದರು. ಚೆನ್ನಣ್ನ ವಾಲೀಕಾರ ಹೆಸರಿನ ಪ್ರಶಸ್ತಿ ಸ್ವೀಕರಿಸದೇ ಇರುವುದೆಂದರೆ ಅದು ನನಗೆ ಅಪಮಾನ. ಅವರ ಹೆಸರಿನ ಪ್ರಶಸ್ತಿ ಸ್ವೀಕರಿಸುವುದೇ ಒಂದು ದೊಡ್ಡ ಗೌರವ, ಹೀಗಾಗಿ ಪ್ರಶಸ್ತಿ ಪಡೆಯಲು ಬರುತ್ತೇನೆ. ತಾವೆಲ್ಲರೂ ಕೂಡಿ ಕೊಡುವ ಪ್ರಶಸ್ತಿ ನಾನು ಗೌರವದಿಂದ ಸ್ವೀಕರಿಸುತ್ತೇನೆ ಎಂದು ಪಾತ್ರೋಟ ಹೇಳಿದರು.

ಚೆನ್ನಣ್ಣನ ಬದುಕಾಗಲಿ ಬರೆಹವಾಗಲಿ ಕೈತುತ್ತಿನಂತೆ, ಅಕ್ಷರದ ಮೂಲಕ ಆತ ಕೈತುತ್ತು ತಿನ್ನಿಸಿದ ಹೆಸರಾಂತ ಲೇಖಕ. ಚೆನ್ನಣ್ಣ ಏನನ್ನು ಗಳಿಸಲಿಲ್ಲ ಆದರೆ ಜನರನ್ನು ಗಳಿಸಿದರು. ನಾನೂ ಏನನ್ನೂ ಗಳಿಸಲಿಲ್ಲ. ಹಸಿವು ಬಡತನದಿಂದ ಬಳಲಿದರೂ ಜನರನ್ನು ಗಳಿಸದೆ ಎಂದು ನೊಂದು ನುಡಿದರು. ಪಂಪ, ರನ್ನ-ವಚನಕಾರರನ್ನು ಅರ್ಥೈಸಿಕೊಳ್ಳಲು ವಿವಿಯ ಪ್ರಾಧ್ಯಾಪಕರು ತಿಣುಕಾಡುತ್ತಿದ್ದಾರೆ. ಶರಣರು-ದಾಸರು ಅವರೆಲ್ಲರೂ ವಿಶ್ವವಿದ್ಯಾಲಯವಾಗಿದ್ದರು ಎಂದು ಸತ್ಯಾನಂದ ಪಾತ್ರೋಟ ಹೇಳಿದರು.

‘ಕಾವ್ಯಕ್ಕೆ ಕರುಳು ಇರಬೇಕು ಕರುಳಿಗೆ ಕಣ್ಣೀರು ಬರಬೇಕು’ ಇದು ಚೆನ್ನಣ್ಣ ವಾಲೀಕಾರರ ಕಾವ್ಯಕ್ಕೆ ಈಗಲೂ ಶಕ್ತಿ ಎಂದು ಸತ್ಯಾನಂದ ಪಾತ್ರೋಟ ಅಭಿಪ್ರಾಯಪಟ್ಟರು. ಮುಂದುವರೆದ ಬುದ್ಧ-ಬಸವಣ್ಣ-ಅಂಬೇಡ್ಕರ್ ಅವರೆಲ್ಲರೂ ಬರೆದಂತೆ ಬದುಕಿದರು. ಅವರಂತೆ ಲೇಖಕರೂ ಬದುಕಬೇಕು ಎಂದು ಹೇಳಿದರು. ಪ್ರಶಸ್ತಿಗಳು ಹೇಗಾಗಿವೆ ಎಂದರೆ ನನಗೊಂದು ಪ್ರಶಸ್ತಿ, ನಿನಗೊಂದು ಪ್ರಶಸ್ತಿ ಎಂಬ ಒಪ್ಪಂದಗಳು ಇವತ್ತು ಹೆಚ್ಚಾಗಿವೆ ಎಂದು ಪಾತ್ರೋಟ ಹೇಳಿದರು.

‘ಕರ್ನಾಟಕವೆಂದರೆ ಕೇವಲ ಬೆಂಗಳೂರು ಅಲ್ಲ. ಯಾವುದೇ ಪ್ರಶಸ್ತಿಯ ಸಮಿತಿ ಇರಲಿ ಅದರ ಅಧ್ಯಕ್ಷರು ಬೆಂಗಳೂರಿನವರೇ ಆಗಿರುತ್ತಾರೆ. ಇಂದಿನ ಸರಕಾರದ ಪ್ರಶಸ್ತಿಗಳು ಜಾತಿ ಹಣ ವಸೂಲಿ ಇರುವವರಿಗೆ ಸಿಗುತ್ತಿರುವುದು ತುಂಬ ನೋವಿನ ಸಂಗತಿಯಾಗಿದೆ ಎಂದು ಸತ್ಯಾನಂದ ಪಾತ್ರೋಟ ಹೇಳಿದರು. ಎಲ್ಲರೂ ಒಂದಾಗುವ ಭಾರತ-ನಮ್ಮದು. ಬಹುತ್ವ-ಭಾರತ, ಅದರಂತೆ ಕರ್ನಾಟಕದಲ್ಲಿರುವ ಅಸಮಾನತೆ ತೊಲಗಿ ಒಂದೇ ಕರ್ನಾಟಕ ಆಗಬೇಕು. ಅಂತೆಯೇ ಒಂದೇ ಭಾರತ ಅದು ಬಹುತ್ವ ಭಾರತ ಆಗಬೇಕು ಎಂದರು.

ಚೆನ್ನಣ್ಣನವರ ಪ್ರೀತಿ ಎಂತಹದ್ದು ಎಂದರೆ, ಕಣ್ಣಿಗೆ ಕಾಣುವ ಜನರನ್ನು ಪ್ರೀತಿಸುವ ಗುಣ-ಹೊಂದಿದ್ದರು ಎಂದು ಸಮಾರಂಭ ಅಧ್ಯಕ್ಷತೆ ವಹಿಸಿದ್ದ ಡಾ. ಸ್ವಾಮಿರಾವ ಕುಲಕರ್ಣಿ ಹೇಳಿದರು. ಸಮಾರಂಭದಲ್ಲಿ ಶ್ರಿಮತಿ ಸಿದ್ಧಮ್ಮ ವಾಲೀಕಾರ, ಅಪ್ಪಾಸಾಹೇಬ ವಾಲೀಕಾರ, ಡಾ. ಕೆ.ಎಸ್. ಬಂಧು ಉಪಸ್ಥತರಿದ್ದರು. ಪೆÇ್ರ. ಎಚ್.ಟಿ. ಪೆÇೀತೆಯವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ. ಶರಣಬಸಪ್ಪ ಕೋಡ್ಲಿ ಕಾರ್ಯಕ್ರಮ ನಿರೂಪಿಸಿದರು. ಡಾ. ಸುಲಾಬಾಯಿ ಹಿತವಂತ ವಂದಿಸಿದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

5 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

8 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

8 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

8 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

8 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

8 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420