ಆಳಂದ: ಧಾರ್ಮಿಕ ಮಠಗಳು ಕೇವಲ ಭಕ್ತರಿಗೆ ಧಾರ್ಮಿಕ ಬೋಧನೆ, ಆಚರಣೆಗೆ ಸೀಮಿತವಾಗಿಲ್ಲ, ಇಂದು ನಾಡಿನ ಹಲವು ಮಠಗಳು ಕೈಗೊಳ್ಳುವ ಸಮಾಜಮುಖಿ ಕಾರ್ಯಗಳಿಂದ ಗ್ರಾಮದ ಸರ್ವಾಂಗೀಣ ಪುಗತಿ ಸಾಧ್ಯವಾಗಿದೆ ಎಂದು ಚಲಗೇರಾ-ಮಾದನ ಹಿಪ್ಪರಗಿಯ ಶಾಂತವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಯಳಸಂಗಿ ಗ್ರಾಮದಲ್ಲಿ ಗುರುಪಾದಲಿಂಗ ಶಿವಯೋಗಿಗಳ ೩೩ನೇ ಪಟ್ಟಾಧಿಕಾರ ಮತ್ತು ತುಲಾಭಾರ ಮಹೋತ್ಸವ ಹಾಗೂ ಗುರುಪಾದಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಡಾ.ಬಿ.ಆರ್. ಅಂಬೇಡ್ಕರ್ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಲಬುರಗಿ ಜಿಲ್ಲೆಯಲ್ಲಿ ಪ್ರಗತಿಪರ ಕೃಷಿಕರಾಗಿ ಗುರುಪಾದಲಿಂಗ ಶ್ರೀಗಳು ರೈತರಿಗೆ ಆದರ್ಶಪ್ರಾಯರಾಗಿದ್ದಾರೆ, ಕಾಯಕಜೀವಿಗಳಾದ ಗುರುಪಾದಲಿಂಗರು ಯಳಸಂಗಿ, ಮುತ್ರನ ಬಬಲಾದ ಗ್ರಾಮದಲ್ಲಿ ಮಠದಿಂದ ಹಲವಾರು ಜನಕಲ್ಯಾಣ ಕಾರ್ಯಕ್ರಮಗಳು ನಿರಂತರವಾಗಿ ಕೈಗೊಂಡಿದ್ದಾರೆ, ನಾಡಿನಲ್ಲಿ ಸಿದ್ಧಗಂಗೆ, ಗದಗ, ಚಿತ್ರದುರ್ಗ, ಬಾಲ್ಕಿ, ಸುತ್ತೂರು ಮಠಗಳಿಂದ ಆಯಾ ಗ್ರಾಮಗಳು ಅಭಿವೃದ್ಧಿಯಾಗಿವೆ ಎಂದರು.ನರೋಣಾದ ಸಂತೋಷ ವಾಲಿ ಮಾತನಾಡಿ ಗ್ರಾಮೀಣ ಭಾಗದ ಮಕ್ಕಳಲ್ಲಿ ವಿಶೇಷವಾದ ಪ್ರತಿಭ ಇರುತ್ತದೆ, ಶಿಕ್ಷಕರು, ಪಾಲಕರು ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದರೆ ಅವರು ದೊಡ್ಡ ಸಾಧಕರಾಗಿ ಹೊರಹೊಮ್ಮಲು ಸಾಧ್ಯವಿದೆ ಎಂದರು.
ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಅಪ್ಪಾಸಾಹೇಬ ತೀರ್ಥ, ನಿವೃತ್ತ ಶಿಕ್ಷಕ ವಿಂಗಡ್ಯಾ ಕಂಬಾರ ಮಾತನಾಡಿ ಗುರುಪಾದಲಿಂಗ ಶಿವಯೋಗಿಗಳು ಪ್ರಯತ್ನದ ಫಲದಿಂದ ಡಾ.ಅಂಬೇಡ್ಕರ್ ಶಾಲೆಯು ಸುಸಜ್ಜಿತ ಶೈಕ್ಷಣಿಕ ಸೌಲಭ್ಯಗಳು ಹೊಂದಿದೆ, ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಸ್ಪರ್ಧಾತ್ಮಕ ಶಿಕ್ಷಣ ನೀಡುವದು ಇಂದಿನ ಅಗತ್ಯವಾಗಿದೆ ಎಂದರು. ಯಳಸಂಗಿ ಗ್ರಾಪಂ ಅಧ್ಯಕ್ಷೆ ಕವಿತಾ ಡಿ ಯಲ್ಸ್, ಸಂಸ್ಕೃ ಕಾರ್ಯದರ್ಶಿ ಮಲ್ಲಕಾರ್ಜುನ ಹಾಗರಗಿ, ವೀರಯ್ಯ ಸ್ವಾಮಿ, ಬಸವರಾಜ ನಿಂಬರ್ಗಾ, ಮುಖ್ಯಶಿಕ್ಷಕ ಈರಯ್ಯ ಸ್ವಾಮಿ, ಬಸವರಾಜ ಮಂದರ್ಗಿ, ಸಿದ್ರಾಮಪ್ಪ ಸೋಲಾಪುರ, ಗಂಗಣಾ ಹರಳಯ್ಯ, ಮಲ್ಲಿ ಕಾರ್ಜುನ ನೆಲ್ಲೂರು, ಮಲ್ಲಪ್ಪ ಹಂದ, ಅಶೋಕ ಏವಾರ, ಭೀಮಾಶಂಕರ ಅಶನೂಲೆ, ಸುಖಮುನಿ ಪಾಟೀಲ, ಚಂದ್ರಕಾಂಶ ಕೌಂಟಗಿ, ಮಂಜುನಾಥ ಅಕ್ಕಲಕೋಟ, ನಾನಾಗೌಡ ಪಾಟೀಲ, ಮಲ್ಲಿನಾಥ ಉಮರಗೆ, ಬಾಬುರಾವ ಯ, ಶಿವಪುತ್ರ ಅತನೂರ, ದತ್ತಾತ್ರೇಯ ಬಿರಾದಾರ ಉಪಸ್ಥಿತರಿದ್ದರು. ಶಿಕ್ಷಕ ಸಾಗರ ಯಲ್ಲ ನಿರೂಪಿಸಿದರೆ, ಮಲ್ಲಿಕಾರ್ಜುನ ಯಳಸಂಗಿ ಸ್ವಾಗತಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…