ಕಲಬುರಗಿ: ಕವಿರಾಜಮಾರ್ಗ ಎಲ್ಲಾ ದೃಷ್ಟಿಯಿಂದಲೂ ವಿಶಿಷ್ಟ ಗ್ರಂಥ. ಕನ್ನಡದಲ್ಲಿ ತನಗಿಂತ ಮೊದಲು ಆಗಿಹೋದ ಕವಿಗಳನ್ನು ಶ್ರೀವಿಜಯನು ಹೆಸರಿಸಿದ್ದಾನೆ. ಇದರಿಂದಾಗಿ ಕನ್ನಡ ಸಾಹಿತ್ಯವು ಬಹಳ ಶ್ರೀಮಂತವಾಗಿತ್ತು ಎಂಬುದನ್ನು ತಿಳಿಯಬಹುದಾಗಿದ್ದು ಇದೊಂದು ಕನ್ನಡದ ಶ್ರೇಷ್ಠ ಗ್ರಂಥವಾಗಿದೆ ಎಂದು ಸಾಹಿತಿ ಜಗನ್ನಾಥ ತರನಳ್ಳಿ ಅವರು ಹೇಳಿದರು.
ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದಿಂದ ನಗರದ ಮದರ್ ತೆರೆಸಾ ಬಿ ಎಡ್ ಕಾಲೇಜಿನಲ್ಲಿ ಲಿಂ. ಗುರುಬಾಯಿ ಲಿಂ.ಗುರುಪಾದಪ್ಪ ಪರುತೆ ಕಾಳಗಿ ಅವರ ಸ್ಮರಣಾರ್ಥ ಹಮ್ಮಿಕೊಂಡ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಕವಿಯು ಕನ್ನಡ ನಾಡಿನ ಬಗ್ಗೆ ಹಾಗೂ ಕನ್ನಡಿಗರ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾನರೆ .
ಕನ್ನಡದಲ್ಲಿ ಆ ಕಾಲಕ್ಕೆ ಪ್ರಸಿದ್ಧವಾಗಿದ್ದ ದೇಸೀ ಸಾಹಿತ್ಯ ಪ್ರಕಾರಗಳ ಬಗ್ಗೆಯೂ ಮಾತನಾಡಿದ್ದಾರೆ .
ಕವಿರಾಜಮಾರ್ಗದ ಕರ್ತೃತ್ವದ ವಿಚಾರ ವಿದ್ವಾಂಸರಲ್ಲಿ ಪ್ರಬಲವಾದ ಬಿನ್ನಾಭಿಪ್ರಾಯಗಳು ಇದೆ. ಕವಿರಾಜಮಾರ್ಗದ ಕರ್ತೃ ನೃಪತುಂಗ ಎಂದು ಹಲವಾರು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ.ಆದರೆ ನೃಪತುಂಗನ ಸಭಾಸದನಾದ ಶ್ರೀ ವಿಜಯನೆಂಬ ಕವಿ ತನ್ನ ಹೆಸರನ್ನು ಮರೆಮಾಚಿ ನೃಪತುಂಗನ ಹೆಸರನ್ನು ಮುಂದಿಟ್ಟು ಕೃತಿ ರಚನೆ ಮಾಡಿದ್ದಾನೆ ಎಂದು ವಾದವಿದೆ.
ಈ ಗ್ರಂಥವನ್ನು ಮೊದಲು ಸಂಪಾದಿಸಿ ಪ್ರಕಟಿಸಿದವರು ಕೆ.ಬಿ.ಪಾಠಕ್. ಕವಿರಾಜಮಾರ್ಗ ದಂಡಿಯ ‘ಕಾವ್ಯಾದರ್ಶ’ವನ್ನು ಆದರ್ಶವಾಗಿಟ್ಟುಕೊಂಡು ಬರೆದ ಸ್ವತಂತ್ರ ಅನುವಾದಿತ ಕೃತಿ. ಕವಿರಾಜಮಾರ್ಗ(ಕ್ರಿ.ಶ.೮೫೦) : – ಕವಿರಾಜಮಾರ್ಗದ ಕರ್ತೃ ಶ್ರೀವಿಜಯ . ಕನ್ನಡದಲ್ಲಿ ಉಪಲಬ್ಧವಾಗಿರುವ ಮೊಟ್ಟ ಮೊದಲ ಗ್ರಂಥ. ಇದು ರಚಿತವಾದ ಕಾಲಾವಧಿ ಪ್ರ.ಶ. ೮೧೫-೭೭. ಇದರ ಕರ್ತೃ ರಾಷ್ಟ್ರಕೂಟ ಅರಸು ನೃಪತುಂಗನೆಂದು ಹೇಳುವುದು ವಾಡಿಕೆಯಾಗಿದೆ. ಆದರೆ ಈ ವಿಷಯದ ಬಗ್ಗೆ ವಿದ್ವಾಂಸರ ನಡುವೆ ಪ್ರಬಲವಾದ ವಾದವಿವಾದಗಳು ನಡೆದಿವೆ. ಅವರಲ್ಲಿ ಮೂರು ಪಕ್ಷಗಳಿವೆ. ಮೊದಲನೆಯ ಪಕ್ಷದವರು ನೃಪತುಂಗನೇ ಈ ಗ್ರಂಥವನ್ನು ರಚಿಸಿದನೆಂದು ಹೇಳುತ್ತಾರೆ.
ಎರಡನೆಯ ಪಕ್ಷದವರು ಆತನ ಆಸ್ಥಾನದಲ್ಲಿದ್ದ ಕವೀಶ್ವರನೆಂಬಾತ ಇದರ ಕರ್ತೃವೆಂದು ಅಭಿಪ್ರಾಯಪಡುತ್ತಾರೆ. ನೃಪತುಂಗನ ಸಭಾಸದನಾದ ಶ್ರೀವಿಜಯನೆಂಬುವನು ಈ ಗ್ರಂಥವನ್ನು ಬರೆದನೆಂಬುದು ಮೂರನೆಯ ಪಕ್ಷದವರ ವಾದ. ಇವರಲ್ಲಿ ಮೂರನೆಯ ಪಕ್ಷದವರ ವಾದ ಪ್ರಬಲವಾದ ಸಾಕ್ಷ್ಯಗಳನ್ನು ಹೊಂದಿರುವುದಲ್ಲದೆ ಅದೇ ಸತ್ಯಾಂಶವಾಗಿಯೂ ನಿಲ್ಲಬಹುದೆಂದು ತೋರುತ್ತದೆ.ಎಂದರು
ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ನಾಡು ಲೇಖಕರ ಮತ್ತು ಒದಗರ ಸಹಕಾರ ಸಂಘದ ಅಧ್ಯಕ್ಷರಾದ ಅಪ್ಪಾರಾವ ಅಕ್ಕೋಣೆ ಮಾತನಾಡಿ ಕನ್ನಡ ನಾಡು ಲೇಖಕರ ಸಂಘ ವಿನೂತನವಾದ ಕಾರ್ಯಕ್ರಮಗಳನ್ನು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳುತ್ತಾ ಬಂದಿದ್ದು ನಮ್ಮ ಸುತ್ತಮುತ್ತಲಿನ ಹಿರಿಯ ಸಾಹಿತಿಗಳ ಪುಸ್ತಕ ಮತ್ತು ಹಿರಿಯ ಸಾಧಕರ ಇತಿಹಾಸ ಪರಿಚಯ ಮಾಡಿಕೊಡುವ ಕೆಲಸ ನಿರಂತರವಾಗಿ ಮಾಡುತ್ತಾ ಬಂದಿದೆ ಎಂದರು.
ಕನ್ನಡ ನಾಡು ಸಂಘದ ಉಪಾಧ್ಯಕ್ಷರಾದ ಸ್ವಾಮಿರಾವ ಕುಲಕರ್ಣಿ ಅವರು ಪ್ರಸ್ತಾವಿಕವಾಗಿ ಮಾತನಾಡುತ್ತಾ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಓದೋಣ ಪುಸ್ತಕ ಬೆಳೆಸೋಣ ಮಸ್ತಕದಂತಹ ಕಾರ್ಯಕ್ರಮ ಮತ್ತು ದತ್ತಿ ಕಾರ್ಯಕ್ರಮದ ಮೂಲಕ ಒಂದಿಷ್ಟು ಸಾಹಿತ್ಯ ಅಭಿರುಚಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದ್ದು ಇಂತಹ ಕಾರ್ಯಕ್ರಮಗಳಿಗೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು ಹೆಮ್ಮೆಯ ಸಂಗತಿ ಎಂದರು. ವೇದಿಕೆ ಮೇಲೆ ಕಾಲೇಜಿನ ಪ್ರಾಚಾರ್ಯರಾದ ಡಾ. ಪ್ರೀತಿ ಪಾಟೀಲ, ನಿರ್ದೇಶಕ ಹಾಗೂ ಸಂಚಾಲಕರದ ಡಾ. ಶರಣಬಸಪ್ಪ ವಡ್ಡನಕೇರಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರೊ. ನೀಲಾಂಬಿಕ ಪೊಲೀಸ್ ಪಾಟೀಲ, ಸಂಧ್ಯಾ ಹೊನಗುಂಟಿಕರ, ಕೆ ಎಸ್ ನಾಯಕ ಸೂರ್ಯಕಾಂತ್ ಸೊನ್ನದ, ಶಿವಾನಂದ ಮಠಪತಿ, ಶಾಂತ ಭೀಮಸೇನರಾವ್, ಬಸವರಾಜ ಗನಹಳ್ಳಿ, ಮಾಲಿ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…