ಬಿಸಿ ಬಿಸಿ ಸುದ್ದಿ

12 ರಂದು ಕಲಾಮಂಡಳದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ ಆರ್ ಅಂಬೇಡ್ಕರ್ ೧೩೩ನೇ ಜಯಂತಿ

ಕಲಬುರಗಿ: ಶ್ರೀ ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಪಾಳಾ ವತಿಯಿಂದ ಆಯೋಜಿಸಿರುವ ಸಂವಿಧಾನ ಶಿಲ್ಪಿ ಭಾರತ ರತ್ನ ಬಾಬಾಸಾಹೇಬ ಡಾ ಬಿ ಆರ್ ಅಂಬೇಡ್ಕರ್ ರವರ ೧೩೩ನೇ ಜಯಂತೋತ್ಸವ ಪ್ರಯುಕ್ತ ಸಮಾನತಾ ಸಂಕಲ್ಪ ದಿನ ಹಮ್ಮಿಕೊಳ್ಳಲಾಗಿದೆ.

ಶುಕ್ರವಾರ 12ನೇ ರಂದು ಬೆಳಿಗ್ಗೆ ೧೦:೩೦ಕ್ಕೆ ನಗರದ ಅನ್ನಪೂರ್ಣ ಕ್ರಾಸ್ ಹತ್ತಿರದ ಕಲಾಮಂಡಳದಲ್ಲಿ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷರಾದ ಶರಣಗೌಡ ಪಾಟೀಲ್ ಪಾಳಾ ‌ಹಾಗೂ ಚಿಂತಕರಾದ ಪ್ರೊ. ಯಶವಂತರಾಯ ಅಷ್ಠಗಿ ಯವರು ಜಂಟಿಯಾಗಿ ತಿಳಿಸಿದ್ದಾರೆ.

ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಶ್ರೀನಿವಾಸ ಸರಡಗಿಯ ಪೂಜ್ಯ ಶ್ರೀ ಡಾ ರೇವಣಸಿದ್ದ ಶಿವಾಚಾರ್ಯರು ಹಾಗೂ ಪೂಜ್ಯ ಶ್ರೀ ಸಂಘಾನಂದ ಭಂತೆಜಿ ರವರು ವಹಿಸುವರು. ಉದ್ಘಾಟನೆಯನ್ನು ನಗರ ಸಹಾಯಕ ಪೊಲೀಸ್ ಆಯುಕ್ತರಾದ ಡಿ ಜೆ ರಾಜಣ್ಣ ನೇರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಸೋಮಶೇಖರ್ ಗೋನಾಯಕ್, ಹಿರಿಯ ಸಾಹಿತಿ ಎಸ್ ಪಿ ಸುಳ್ಳದ್, ಎಪಿಎಂಸಿ ಉಪಾಧ್ಯಕ್ಷರಾದ ರಾಜಕುಮಾರ್ ಕೋಟೆ,ಕೆಎಸ್ಎಸ್ ಡಿ ವಿಭಾಗೀಯ ಅಧ್ಯಕ್ಷರಾದ ಸಂಜೀವ ಟಿ ಮಾಲೆ, ಸಾಹಿತಿ ಗೌರಿ ಪಾಟೀಲ್ ರವರು ಆಗಮಿಸುವರು.
ಟ್ರಸ್ಟ ಅಧ್ಯಕ್ಷರಾದ ಶರಣಗೌಡ ಪಾಟೀಲ್ ಪಾಳಾ ಗೌರವ ಉಪಸ್ಥಿತಿ ನೀಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಂತಕರಾದ ಪ್ರೊ ಯಶವಂತರಾಯ ಅಷ್ಠಗಿ ವಹಿಸಲಿದ್ದಾರೆ. ಮಧ್ಯಾಹ್ನ ೧ ಗಂಟೆಗೆ ನಡೆಯುವ ಕವಿಗೋಷ್ಠಿಯಲ್ಲಿ ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ವೀರಭದ್ರ ಸಿಂಪಿ ಆಶಯ ನುಡಿಗಳನ್ನಾಡಲಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಸದಸ್ಯರಾದ ಸುರೇಶ್ ಬಡಿಗೇರ, ಪಿಡಿಎ ತಾಂತ್ರಿಕ ಮಹಾವಿದ್ಯಾಲಯದ ಸಿಸಿಟಿ ವಿಭಾಗದ ಮುಖ್ಯಸ್ಥರಾದ ಡಾ ಬಾಬುರಾವ್ ಶೇರಿಕರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಮೃತ್ಯುಂಜಯ ಪತಂಗೆ, ಸಾಹಿತ್ಯ ಸಂಘಟಕರಾದ ನಾಗಣ್ಣ ರಾಂಪುರೆ, ಪ್ರಗತಿಪರ ಚಿಂತಕರಾದ ಜಗದೇವಿ ಚಟ್ಟಿ ಗೌರವ ಉಪಸ್ಥಿತಿ ನೀಡಲಿದ್ದಾರೆ.

ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಡಾ. ಕೆ. ಗಿರಿಮಲ್ಲ ವಹಿಸುವರು.ಈ ಸಂದರ್ಭದಲ್ಲಿ ಕವಿಗಳಾದ ಡಾ ಸಂಗಣ್ಣ ಎಂ ಸಿಂಗೆ, ಡಾ ಕರುಣಾ ಜಮದರಖಾನಿ, ಡಾ.ರಾಜಶೇಖರ ಮಾಂಗ್, ಮಲ್ಲಮ್ಮ ಎಸ್ ಕಾಳಗಿ, ರಮೇಶ್ ರಾಠೋಡ, ಕವಿತಾ ಮಾಲಿ ಪಾಟೀಲ್, ಕಿರಣ್ ರಾಠೋಡ್, ನರಸಿಂಗರಾವ್ ಹೇಮನೂರ, ರಮೇಶ್ ನಾರಾಯಣಪೂರ,ಮಾಲಾ ಕಣ್ಣಿ, ಧನಲಕ್ಷ್ಮಿ ಪಾಟೀಲ್ ಬೀದರ್, ಸುರೇಖಾ ಎಂ ಜೇವರ್ಗಿ, ಪ್ರೀತಮ್ ಜಿ,ಅದ್ವಿಕಾ ಕವನ ವಾಚನ ಮಾಡಲಿದ್ದಾರೆ. ಕವಿಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳಿಗೆ ಹಾಗೂ ಕವಯತ್ರಿಯರಿಗೆ ಗೌರವ ಧನ ನೀಡಲಾಗುವುದು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಹಣಮಂತರಾವ್ ಭೈರಾಮಡಗಿ, ಬಾಬುರಾವ್ ಎ ಜಾಧವ್, ಶ್ರೀಮಂತ ಎಂ ಕೋಟ್ರೆ, ಅಣ್ಣಪ್ಪ ಎಸ್ ಜಿ, ಚಂದ್ರಕಲಾ ಬಂಡೆ, ಉದಯಕುಮಾರ್ ಜಿ ಸಾಲಿ, ಶಿವಶರಣಪ್ಪ ದೇಗಾಂವ, ಲೋಹಿತ್ ಡಿ ಕಟ್ಟಿ, ಮಹಾದೇವಿ ಕೆಸರಟಗಿ, ಮಲ್ಲಿಕಾರ್ಜುನ ಎ ವಠಾರ ಅವರುಗಳಿಗೆ ಸಮಾನತಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಘಟಕರಾದ ಶರಣಗೌಡ ಪಾಟೀಲ್ ಪಾಳಾ ‌ಹಾಗೂ ಪ್ರೊ ಯಶವಂತರಾಯ ಅಷ್ಠಗಿ ತಿಳಿಸಿದ್ದಾರೆ.

ಇದಲ್ಲದೆ, ಟ್ರಸ್ಟ್ ವತಿಯಿಂದ ಸುಮಾರು ೧೦ ವರ್ಷಗಳಿಂದ ಅನೇಕ ಜನಮುಖಿ ಹಾಗೂ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ, ಇದರಲ್ಲಿ ಸಾಹಿತಿಗಳಿಗೆ ಬಸವ ಪುರಸ್ಕಾರ, ಸಾಮಾಜಿಕ ಹೋರಾಟಗಾರರು ಹಾಗೂ ಬಸವತತ್ವ ಪ್ರಚಾಕರಿಗೆ ಬಸವ ಸೇವಾ ರತ್ನ ಮತ್ತು ಗೌಡ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿರವುದನ್ನು ಇಲ್ಲಿ ಸ್ಮರಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಸವಂತರಾಯ ಕೋಳಕೂರ್, ಶಿವಯೋಗಿ ಭಜಂತ್ರಿ, ಅಂಬಾರಾಯ ಕೋಣೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿರುವರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

33 mins ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

34 mins ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

37 mins ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

17 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

19 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago