ಜೇವರ್ಗಿ: ಪರಮಪೂಜ್ಯ ಶ್ರೀಮದ್ ಕಾಶಿ ಜಗದ್ಗುರುಗಳಾದ ಡಾ. ಚಂದ್ರಶೇಖರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರನ್ನು ಸಂಸದರಾದ ಡಾ. ಉಮೇಶ್ ಜಾದವ್ ಅವರು ಶಾಖಾಪುರದ ತಪೋವನ ಮಠದಲ್ಲಿ ಶನಿವಾರ ಭೇಟಿಯಾಗಿ ಆಶೀರ್ವಾದ ಪಡೆದರು.
ಜಗದ್ಗುರುಗಳು ಸಂಸದರಿಗೆ ಪೇಟ ತೊಡಿಸಿ ಶಾಲು ಮತ್ತು ಹಾರದೊಂದಿಗೆ ಸನ್ಮಾನ ನೆರೆವೇರಿಸಿದ ನಂತರ ಆಶೀರ್ವದಿಸುತ್ತಾ ಭಾರತದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಭಾರತವನ್ನು ವಿಶ್ವ ಗುರುವಾಗಿಸುವ ಸಂಕಲ್ಪ ತೊಟ್ಟು ಕೈಗೊಂಡ ಎಲ್ಲಾ ಕಾರ್ಯ ಯೋಜನೆಗಳು ಯಶಸ್ವಿಯಾಗಲಿ ನಾಡಿನ ಜನತೆಗೆ ಕಲ್ಯಾಣವಾಗಲಿ ಎಂದು ನುಡಿದರು.
ಕಾಶಿ ಜಗದ್ಗುರುಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಜಾಧವ್ ಜಗದ್ಗುರುಗಳ ಆಶೀರ್ವಾದದಿಂದ ಭವಿಷ್ಯದ ಯೋಜನೆಗಳಿಗೆ ಮಹಾನ್ ಶಕ್ತಿ ಮತ್ತು ಪ್ರೇರಣೆ ಒದಗಿದಂತಾಗಿದೆ ಸನಾತನ ಹಿಂದೂ ಸಂಸ್ಕೃತಿಯನ್ನು ಕಾಪಾಡಲು ಮಠಮಾನ್ಯಗಳ ಮತ್ತು ಪೂಜ್ಯರ ಆಶೀರ್ವಾದ ಮತ್ತು ಶ್ರೀ ರಕ್ಷೆ ಜನಪ್ರತಿನಿಧಿಗಳ ಮೇಲೆ ಸದಾ ಇರಬೇಕು ಎಂದರು.
ಈ ಸಂದರ್ಭದಲ್ಲಿ ಶಾಖಾಪುರ ತಪೋವನ ಮಠದ ಪೂಜ್ಯ ಶ್ರೀ ಷ. ಬ್ರ. ಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ, ಆಂದೋಲ ಶ್ರೀ ಕರುಣೆಶ್ವರ ಮಠದ ಸಿದ್ದಲಿಂಗ ಮಹಾಸ್ವಾಮಿಗಳು ಉಪಸ್ಥಿತರಿದ್ದು ಲೋಕಸಭಾ ಸದಸ್ಯರನ್ನು ಹರಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…