ಬಿಸಿ ಬಿಸಿ ಸುದ್ದಿ

ಕಸಾಪದಿಂದ ರವಿ ಕಿರಣ ಕೃತಿ ಜನಾರ್ಪಣೆ: ಶಾಲಾ ಮಕ್ಕಳಿಗೆ ರವಿ ಕಿರಣ ಬೆಳಕಾಗಲಿ | ಪತ್ರಕರ್ತ ವಾದಿರಾಜ

ಕಲಬುರಗಿ: ಒತ್ತಡದ ಬದುಕಿನಲ್ಲಿ ಜೀವನ ಸಾಗಿಸುತ್ತಿರುವ ವ್ಯವಸ್ಥೆಯಲ್ಲಿ ನೀತಿ ಮೌಲ್ಯಗಳು ಅವಶ್ಯವಾಗಿವೆ. ಈ ದಿಸೆಯಲ್ಲಿ ನಮ್ಮ ಶಾಲಾ ಮಕ್ಕಳಿಗೆ ಸುಭಾಷಿತ, ನುಡಿ ಮುತ್ತುಗಳು ಅರ್ಥೈಸುವ ಕಾರ್ಯ ಮಾಡಬೇಕಾಗಿದೆ ಎಂದು ಹಿರಿಯ ಪತ್ರಕರ್ತ ವಾದಿರಾಜ ವ್ಯಾಸಮುದ್ರ ಹೇಳಿದರು.

ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಶನಿವಾರ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ರವೀಂದ್ರಕುಮಾರ ಭಂಟನಳ್ಳಿ ಅವರ ಸಂಗ್ರಹಿತ `ರವಿ ಕಿರಣ’ ಎಂಬ ಶುಭಾಷಿತಗಳನ್ನೊಳಗೊಂಡಿರುವ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಇಂದಿನ ಮಕ್ಕಳೋಉ ಮೊಬೈಲ್ ಸಂಸ್ಕøತಿಗೆ ಒಗ್ಗಿರುವದರಿಂದ ನೀತಿ ಮಾತುಗಳು ದೂರಾಗಿವೆ. ಹೀಗಾಗಿ ಶಾಲೆಯಲ್ಲಿ ರಾಷ್ಟ್ರಗೀತೆ ಮತ್ತು ನಾಡಗೀತೆಗಳ ಜತೆಗೆ ರವಿಕಿರಣ ಕೃತಿಯ ಸುಭಾಷಿತಗಳು ಕೂಡ ಓದಿಸಬೇಕಾಗಿದೆ. ಆಗ ಮಕ್ಕಳಲ್ಲಿ ಶಿಸ್ತು, ಪ್ರಮಾಣಿಕತೆ, ಸ್ವಾಭಿಮಾನ ಬೆಳೆಯಬಹುದು. ಅವರು ಮುಂದೆ ನಾಡಿನ ಉತ್ತಮ ಪ್ರಜೆಗಳಾಗಿ ಬದುಕಬಹುದಾಗಿದೆ. ಮತ್ತು ರವಿ ಕಿರಣ ಕೃತಿ ಎಲ್ಲರೂ ಓದಲೆಬೇಕಾದ ಪುಸ್ತಕವಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಸಮಾಜಕ್ಕೆ ಒಳಿತು ಮಾಡುವ ಮನಸ್ಸು ಎಲ್ಲರಲ್ಲಿ ಬರಬೇಕಾದರೆ, ರವಿ ಕಿರಣದಂಥ ಕೃತಿಗಳು ಹೆಚ್ಚು ಹೆಚ್ಚಾಗಿ ಪ್ರಕಟವಾಗಬೇಕು. ಹಗುರ ಜೀವನ ಹಗುರ ಮನಸ್ಸು ಹೊಂದಿದ ಬದುಕು ನಮ್ಮದಾಗಬೇಕು. ಕನ್ನಡ ಸಾರಸ್ವತ ಲೋಕಕ್ಕೆ ಈ ರವಿ ಕಿರಣ ಪುಸ್ತಕ ಎಲ್ಲರ ಜೀವನ ಶುದ್ಧಿಗೊಳಿಸುವಲ್ಲಿ ಪ್ರಮುಖವಾಗಿದೆ ಎಂದು ತಿಳಿಸಿದರು.

ಮಾಜಿ ಬಾಹ್ಯಕಾಶ ವಿಜ್ಞಾನಿ ಪ್ರೊ. ಬಿ.ಎ.ಪಾಟೀಲ ಮಹಾಗಾಂವ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ಮನೆ ಸುಶಿಕ್ಷಿತವಾಗಿರಬೇಕು. ಮನಸ್ಸು ಶುದ್ಧಗೊಳ್ಳಬೇಕು. ಅದಕ್ಕಾಗಿ ಪ್ರತಿಯೊಬ್ಬರೂ ಹಿರಿಯರ ಅನುಭಾವದ ಮಾತುಗಳು ಕೇಳಬೇಕು ಮತ್ತು ಅವುಗಳಂತೆ ಬದುಕಿದರೆ ನಮ್ಮ ಸಮಾಜದ ಪರಿವರ್ತನೆ ಆಗಬಲ್ಲದು ಎಂದರು.

ಸಾಹಿತ್ಯ ಪ್ರೇರಕ ಜಗದೀಶ ಮರಪಳ್ಳಿ, ಕೃತಿ ಸಂಪಾದಕ ರವೀಂದ್ರಕುಮಾರ ಭಂಟನಳ್ಳಿ, ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಎಸ್ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಸಿದ್ಧಲಿಂಗ ಜಿ ಬಾಳಿ, ಶರಣರಾಜ್ ಚಪ್ಪರಬಂದಿ, ಧರ್ಮರಾಜ ಜವಳಿ ಮಾತನಾಡಿದರು.
ಪ್ರಮುಖರಾದ ಶಕುಂತಲಾ ಪಾಟೀಲ ನಾಗಪ್ಪ ಎಂ ಸಜ್ಜನ್ ಯಡ್ರಾಮಿ, ರಾಜೇಂದ್ರ ಮಾಡಬೂಳ, ಕವಿರಾಜ ಪಾಟೀಲ, ಶರಣಬಸಪ್ಪ ಬೆಳಕೇರಿ, ಬಸವರಾಜ ಧೂಳಾಗುಂಡಿ, ಶಿಲ್ಪಾ ಜೋಶಿ, ಜ್ಯೋತಿ ಕೋಟನೂರ, ಎಸ್ ಕೆ ಬಿರಾದಾರ, ಪ್ರಭುಲಿಂಗ ಮೂಲಗೆ, ಸಂತೋಷ ಕುಡಳ್ಳಿ, ಬಸವರಾಜ ಪುಣ್ಯಶೆಟ್ಟಿ, ಕಲ್ಯಾಣಪ್ಪ ಬಿರಾದಾರ, ಕಲ್ಯಾಣಕುಮಾರ ಶೀಲವಂತ, ಶಾಮತಲಿಮಗ ಪಾಟೀಲ ಕೋಳಕೂರ, ಶ್ರೀಕಾಂತ ಪಾಟೀಲ ತಿಳಗೂಳ, ಎಂ. ಜೆ ಪಾಟೀಲ, ಶಿವಶರಣ ಹಡಪದ, ಎಚ್ ಎಸ್ ಬರಗಾಲಿ, ರೇವಣಸಿದ್ದಪ್ಪ ಜೀವಣಗಿ, ಬಾಬುರಾವ ಪಾಟೀಲ, ವಿನೋದಕುಮಾರ ಜೇನವೇರಿ, ಕವಿತಾ ಮಾಲಿಪಾಟೀಲ ಮಂದೇವಾಲ, ವಿದ್ಯಾಸಾಗರ ದೇಶಮುಖ, ನಾಗೇಂದ್ರಪ್ಪ ಮಾಡ್ಯಾಳೆ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರದ ಪ್ರಮುಖರಾದ ಸೋಮಶೇಖರ ಮಾಲಿಪಾಟೀಲ ತೇಗಲತಿಪ್ಪಿ, ವಿಜಯಕುಮಾರ ಚೇಂಗಟಿ ಹೊಸಳ್ಳಿ, ಸಂಜೀವಕುಮಾರ ಡೊಂಗರಗಾಂವ, ವಾಣಿ ಗಂಗಾಧರ ಹಿರೇಮಠ, ವಿಜಯಲಕ್ಷ್ಮೀ ಗೊಬ್ಬೂರಕರ್ ಅವರನ್ನು ಸತ್ಕರಿಸಲಾಯಿತು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

14 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

17 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

23 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

24 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

1 day ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago