ಬಿಸಿ ಬಿಸಿ ಸುದ್ದಿ

ಮಲ್ಲಿಕಾರ್ಜುನ ಖರ್ಗೆ ಅವರಿಂದ ಸಂವಿಧಾನ ಬದಲಿಸುವುದಾಗಿ ಸುಳ್ಳು ಹೇಳಿ ಬೆದರಿಸುವ ತಂತ್ರ: ಸಂಸದ ಡಾ. ಜಾಧವ್

ಕಲಬುರಗಿ: ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಬಿಜೆಪಿ ಬದಲಿಸುತ್ತಿದೆ ಎಂದು ಏಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಸುಳ್ಳು ಹೇಳಿ ಜನರನ್ನು ಬೆದರಿಸುತ್ತಿದ್ದಾರೆ. ಈಗಿನ ಸ್ಥಿತಿಯಲ್ಲಿ ಸ್ವತಃ ಅಂಬೇಡ್ಕರ್ ಬಂದರೂ ಸಂವಿಧಾನವನ್ನು ಬದಲಿಸಲಾಗದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿ ಕಾಂಗ್ರೆಸ್ಸಿನ ಆರೋಪಕ್ಕೆ ಈಗಾಗಲೇ ಉತ್ತರಿಸಿದ್ದಾರೆ ಎಂದು ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ಹೇಳಿದರು.

ಜೇವರ್ಗಿಯ ಜೇರಟಗಿ ಶ್ರೀ ರೇವಣಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಜೇವರ್ಗಿ ಮಂಡಲದ ನೆಲೋಗಿ ಮಹಾಶಕ್ತಿ ಕೇಂದ್ರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಶನಿವಾರ ಮಾತನಾಡುತ್ತಿದ್ದರು.

ಬಿಜೆಪಿ ಆಡಳಿತದಲ್ಲಿ ಮತ್ತು ಪ್ರಧಾನಿ ಮೋದಿಯವರು ಸಂವಿಧಾನದಡಿ ಆಡಳಿತವನ್ನು ನಡೆಸಿ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುತ್ತಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ ಆದರೆ ಮಲ್ಲಿಕಾರ್ಜುನ ಖರ್ಗೆ ಅವರು ಸುಳ್ಳು ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದರು.

ಹತ್ತು ವರ್ಷಗಳ ಮೋದಿ ಕೆಲಸವು ಕಾಂಗ್ರೆಸ್ಸಿನವರ ಕಣ್ಣಿಗೆ ಕಾಣುತ್ತಿಲ್ಲ. 60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಕಲ್ಬುರ್ಗಿ ಮತ್ತು ನಮ್ಮ ಕಲ್ಯಾಣ ಕರ್ನಾಟಕ ಭಾಗವನ್ನು ಹಿಂದುಳಿಯುವಂತೆ ಮಾಡಿದೆ. ಆದರೆ ಖರ್ಗೆ ಅವರು ಸುಳ್ಳು ಲೆಕ್ಕ ಮಂಡಿಸುತ್ತಿದ್ದಾರೆ. ಇಎಸ್ಐ ಕಟ್ಟಡ ಮಾತ್ರ ಕಟ್ಟಿದರೂ ಅದರೊಳಗೆ ಏನೂ ಇರಲಿಲ್ಲ. 2009ರಲ್ಲಿ 1800 ಕೋಟಿ ರೂಪಾಯಿ ಖರ್ಚು ಮಾಡಿ ಇದನ್ನು ಕಟ್ಟಲಾಗಿದೆ ಎಂಬುದನ್ನು ಸಾಧನೆ ಎನ್ನುತ್ತಿದ್ದಾರೆ. ಆದರೆ ಮೋದಿಯವರು ಕೇವಲ 800 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಪಾರ್ಲಿಮೆಂಟ್ ನಿರ್ಮಿಸಿ ದಾಖಲೆ ಮಾಡಿದರು.

ಇನಎಸ್ ಐ ಗಿಂತ ಎರಡು ಪಟ್ಟು ದೊಡ್ಡ ಕಟ್ಟಡ ಇದಾಗಿದೆ. ಆದರೆ ಖರ್ಚು ಮಾತ್ರ ಇಎಸ್ಐ ಕಟ್ಟಡಕ್ಕಿಂತ ಕಡಿಮೆ ಮಾಡಿದ್ದಾರೆ. ಇಎಸ್ಐ ಯನ್ನು ಏಮ್ಸ್ ಮಾಡಲು ಪ್ರಧಾನಿಗೆ ಹೇಳಿದರೂ ಮಾಡಿಲ್ಲವೆಂದು ಖರ್ಗೆ ದೂರುತ್ತಾರೆ. ಕಾಂಗ್ರೆಸ್ ನವರು ಕಲ್ಬುರ್ಗಿಯ
ಇಎಸ್ಐ ಯನ್ನು ಏಮ್ಸ್ ಸಂಸ್ಥೆ ಮಾಡುವುದನ್ನು ಬಿಟ್ಟು ರಾಯಚೂರಲ್ಲಿ ಏಮ್ಸ್ ಮಾಡಬೇಕೆಂದು ಶಿಫಾರಸು ಮಾಡಿರುವುದನ್ನು ಖರ್ಗೆಯವರು ಮರೆತಿದ್ದಾರೆಯೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಕಾಲದಲ್ಲಿ ಅಭಿವೃದ್ಧಿ ಕಾರ್ಯಗಳು ಆಗುತ್ತಿದ್ದರೆ ಕಲ್ಬುರ್ಗಿಯು ದೇಶದಲ್ಲೇ ಅತಿ ಹಿಂದುಳಿದ ತಲಾ ಆದಾಯದ ಜಿಲ್ಲೆ ಎಂಬ ಪಟ್ಟಿಗೆ ಸೇರಿರುತ್ತಿರಲಿಲ್ಲ. ಪಂಚ ಗ್ಯಾರಂಟಿ ಯಾರಿಗೂ ಮುಟ್ಟುತ್ತಿಲ್ಲ. ರಾಜ್ಯಕ್ಕೆ ಕಾಂಗ್ರೆಸ್ ಬಡತನದ ಕೊಡುಗೆಯನ್ನು ಮಾತ್ರ ನೀಡಿದೆ ಎಂದು ದೂರಿದರು.

ಕಾಶಿ ಕಾರಿಡಾರ್,ಉಜ್ಜಯಿನಿ ಕಾರಿಡಾರ್ , ಮೆಡಿಕಲ್ ಕಾಲೇಜ್ ಶಾಲೆ, ಕಾಲೇಜುಗಳ ಆರಂಭ, ಭಾರತ್ ಮಾಲಾ ರಸ್ತೆ, ಜಲ್ ಜೀವನ್ ಮಿಷನ್ ಇವುಗಳೆಲ್ಲ ಅಭಿವೃದ್ಧಿ ಯೋಜನೆಗಳಲ್ಲವೇ? ಕರೋನಾ ಸಮಯದಲ್ಲಿ ಲಸಿಕೆ ಹಾಗು ಔಷಧಿಯನ್ನು ಅಭಿವೃದ್ಧಿಪಡಿಸಿ ಜಗತ್ತಿಗೆ ಪೂರೈಸಿದ ಹೆಗ್ಗಳಿಕೆ ಮೋದಿಯವರಿಗೆ ಸಲ್ಲುತ್ತದೆ.

ಸನಾತನ ಧರ್ಮದ ರಕ್ಷಕನಾಗಿ ದೇಶವನ್ನು ಕಾಪಾಡುವ ಮೋದಿಗಾಗಿ ಶೇಕಡ ನೂರರಷ್ಟು ಮತ ಚಲಾಯಿಸಿ ಈ ಬಾರಿ ಇತಿಹಾಸ ಸೃಷ್ಟಿಸಬೇಕು. ತಾಂಡಾದಲ್ಲಿ ಹುಟ್ಟಿದ ಸಾಮಾನ್ಯ ಮನುಷ್ಯನಾದ ನನಗೆ ಯಡಿಯೂರಪ್ಪ ಅವರು ಎರಡನೇ ಬಾರಿಗೆ ಸ್ಪರ್ಧಿಸಲು ಅವಕಾಶ ನೀಡಿದ್ದು ಮತದಾರರು ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ಸಿನ ಅಭ್ಯರ್ಥಿ ಹವಾ ನಿಯಂತ್ರಿತ ಕೋಣೆಯಿಂದ ಈಗಷ್ಟೇ ಹೊರಬಂದ ಕಾರಣಕ್ಕಾಗಿ ಬಿಸಿಲಿನಲ್ಲಿ ನಡೆಯಲಾಗದೆ ಮೆರವಣಿಗೆಯನ್ನು ಮಾಡದೆ ಎನ್ ವಿ ಮೈದಾನದಿಂದ ನೇರವಾಗಿ ನಾಮಪತ್ರ ಸಲ್ಲಿಸಲು ತೆರಳಿದರು. ಸಮಸ್ಯೆ ಗೊತ್ತಿಲ್ಲದ ಇಂತಹ ಅಭ್ಯರ್ಥಿಗೆ ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ಜಾಧವ್ ಮತದಾರರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಬಸವರಾಜ್ ಮತ್ತಿಮಡು, ಯುವ ಮುಖಂಡರಾದ ನಿತಿನ್ ಗುತ್ತೇದಾರ್, ಪಕ್ಷದ ಪ್ರಮುಖರಾದ ಶೋಭಾ ಬಾಣಿ, ದೇವೇಂದ್ರ ಮುತ್ತುಕುಡ, ಶಶಿಧರ ಸೂಗೂರು, ರೇವಣಸಿದ್ದಪ್ಪ ಸಂಕಾಲಿ, ಭೀಮರಾವ್ ಗುಜಗುಡ, ಪ್ರವೀಣ್ ಕುಮಾರ್ ಕುಂಟೋಜಿ, ಬಸವರಾಜ್ ಬಿರಾದಾರ್, ಸಂತೋಷ್, ಬಾಬು ಬಿ ಪಾಟೀಲ್, ಸಾಯಬಣ್ಣ ಮತ್ತಿತರರು ಹಾಜರಿದ್ದರು.

emedialine

Recent Posts

ಭಕ್ತರು ಹೆಚ್ಚಿನ ಸಹಾಯ ಸಹಕಾರ ಮನೋಭಾವನೆ ಹೊಂದಲು ಕರೆ

ಕಲಬುರಗಿ; ಮೈಂದರಗಿಯ ಪೂಜ್ಯ ಶ್ರೀ. ಮೃತುಂಜ್ಯಯ ಸ್ವಾಮಿಗಳು (ವಿರಕ್ತ ಮಠ), (ಆಕಾಶ ಮುತ್ಯಾವರು) ಸದ್ಗುರು ಶ್ರೀ ದಾಸಿಮಯ್ಯ ಕಾನೂನು ಸೇವಾ…

1 hour ago

ಡೆಂಗ್ಯೂಜ್ವರ ಹಾಗೂ ಚಿಕನ್ ಗುನ್ಯ್ ಜ್ವರ ನಿಯಂತ್ರಣಕ್ಕೆ ಸಹಕರಿಸಲು ಶಾಸಕ ಅಲ್ಲಪ್ರಭು ಪಾಟೀಲ ಸಲಹೆ

ಕಲಬುರಗಿ: ಇತ್ತಿಚಿನ ದಿನಗಲ್ಲಿ ಡೆಂಗ್ಯೂಜ್ವರ ಹಾಗೂ ಚಿಕನ್ ಗುನ್ಯ್ ಜ್ವರ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಲು ಹಾಗೂ ಅಧಿಕಾರಿಗಳಿಗೆ ದಕ್ಷಿಣ ಮತಕ್ಷೇತ್ರದ…

2 hours ago

ಕಲಬುರಗಿ; ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕಲಬುರಗಿ; ಕಲಬುರಗಿ ಜಿಲ್ಲೆಯ ಒಂಭತ್ತು ಶಿಶು ಅಭಿವೃದ್ಧಿ ಯೋಜನೆಗಳ ಕಚೇರಿಯಲ್ಲಿ ಖಾಲಿಯಿರುವ 61 ಅಂಗನವಾಡಿ ಕಾರ್ಯಕರ್ತೆಯರ ಹಾಗೂ 238 ಅಂಗನವಾಡಿ…

2 hours ago

ನೀರಾವರಿ ಸಲಹಾ ಸಮಿತಿಗೆ ರೈತ ಹೋರಾಟಗಾರರ ತೆಗೆದುಕೊಳ್ಳಿ; ಮಲ್ಲಿಕಾರ್ಜುನ ಸತ್ಯಂಪೇಟೆ

ಸುರಪುರ: ಕೃಷ್ಣಾ ಕಾಲುವೆಗಳಿಗೆಗೆ ನೀರು ಹರಿಸಲು ನಿರ್ಣಯ ಕೈಗೊಳ್ಳಲು ನಡೆಸುವ ನೀರಾವರಿ ಸಲಹಾ ಸಮಿತಿಗೆ ರೈತ ಹೋರಾಟಗಾರರನ್ನು ಸೇರಿಸಿಕೊಳ್ಳಬೇಕು ಎಂದು…

3 hours ago

ಅಖಿಲ ಭಾರತ ವೀ.ಲಿಂ ಮಹಾಸಭಾ ನೂತನ ಅಧ್ಯಕ್ಷ ನಿದೇರ್ಶಕರ ನೇಮಕ

ಸುರಪುರ: ತಾಲೂಕ ವೀರಶೈವ ಲಿಂಗಾಯಕ ಸಮಿತಿಯಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೂಡ ಎರಡು ತಾಲೂಕಿನ ವೀರಶೈವ ಲಿಂಗಾಯತ…

3 hours ago

ಡೆಂಘೀ ವಿರೋಧಿ ಮಾಸಾಚರಣೆ | ಮನೆಯ ಹೊರಗೂ ಸ್ವಚ್ಛತೆಗೆ ಆದ್ಯತೆ ನೀಡಿದರೆ ಯಾವ ಕಾಯಿಲೆ ಬರದು

ಸುರಪುರ: ಎಲ್ಲರು ತಮ್ಮ ಮನೆಯೊಳಗೆ ಸ್ವಚ್ಛತೆಗೆ ಆದ್ಯತೆ ನೀಡುತ್ತಾರೆ,ಅದರಂತೆ ಮನೆಯ ಹೊರಗೂ ಸ್ವಚ್ಛತೆಗೆ ಆದ್ಯತೆ ನೀಡಿದಲ್ಲಿ ಡೆಂಘೀ ಸೇರಿದಂತೆ ಯಾವುದೇ…

3 hours ago