ಕಲಬುರಗಿ: ತಲ-ತಲಾಂತರಗಳಿಂದ ಗುಲಾಮಗಿರಿಯಲ್ಲಿ ಜೀವನ ಸಾಗಿಸುತ್ತಾ, ನೋವನ್ನು ಹೇಳಿಕೊಳ್ಳದೆ ಮೂಕರೋಧನೆಯನ್ನು ಅನುಭವಿಸುತ್ತಿದ್ದ ಸಂದರ್ಭದಲ್ಲಿ ಭಾರತದ ಭಾಗ್ಯವಿಧಾತನಾಗಿ ಉದಯಿಸಿ, ದೇಶದ ಬಹುಜನರಿಗೆ ಗುಲಾಮಗಿರಿಯಿಂದ ಮುಕ್ತಿ ನೀಡಿ, ವಿಶ್ವದ ಶ್ರೇಷ್ಟ ಸಂವಿಧಾನವನ್ನು ರಚಿಸಿ, ಸರ್ವರಿಗೂ ಸ್ವಾಭಿಮಾನದ ದೀಕ್ಷೆ ಕರುಣಿಸಿ ಸ್ವಾವಲಂಬನೆಯುತ ಬದುಕನ್ನು ಕಟ್ಟಿಕೊಟ್ಟ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಒಬ್ಬ ವ್ಯಕ್ತಿಯಾಗಿರದೆ, ದೇಶದ ಮಹಾನ ಶಕ್ತಿಯಾಗಿದ್ದಾರೆ. ಅವರ ತತ್ವ, ಸಂವಿಧಾನದ ಅಳವಡಿಕೆಯಿಂದ ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿದೆ ಎಂದು ಮಕ್ತಂಪುರ ಗುರುಬಸವ ಮಠದ ಪೂಜ್ಯ ಶಿವಾನಂದ ಶ್ರೀಗಳು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಇಂಟಿಗ್ರೇಟೆಡ್ ರಿಸರ್ಚ್ ಇನಸ್ಟಿಟ್ಯೂಟ್’, ‘ಬಸವೇಶ್ವರ ಸಮಾಜ ಸೇವಾ ಬಳಗ’, ‘ ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ’, ‘ಡಾ.ರಾಜಕುಮಾರ ಸಾಹಿತ್ಯಿಕ ಮತ್ತು ಸಾಂಸ್ಕøತಿಕ ಕಲಾ ಸಂಘ’, ‘ಅಂತರಂಗ ಸಾಂಸ್ಕøತಿಕ ಕಲಾ ಸಂಘ’, ದೇವಿಂದ್ರಪ್ಪ ಜಿ.ಸಿ. ಸಂಗೀತ ಸೇವಾ ಸಂಸ್ಥೆ’ ಮತ್ತು ‘ಹೈದ್ರಾಬಾದ್ ಕರ್ನಾಟಕ ಸಿದ್ದಾರ್ಥ ಸೇವಾ ಸಂಸ್ಥೆ’ ಇವುಗಳ ವತಿಯಿಂದ ಹಾಗೂ ಜಿಲ್ಲೆಯ ಸರ್ವ ಧರ್ಮಗಳು, ಸಮುದಾಯಗಳ ಸಂಘಟನೆಗಳ ಸಹಯೋಗದೊಂದಿಗೆ ‘ಡಾ.ಬಾಬಾ ಸಾಹೇಬ್ ಅಂಬೇಡ್ಕರರ 133ನೇ ಜಯಂತಿ’ಯ ಪ್ರಯುಕ್ತ ಎಸ್‍ವಿಪಿ ವೃತ್ತದಿಂದ ಜಗತ್ ವೃತ್ತದವರೆಗೆ ಭಾನುವಾರ ಏರ್ಪಡಿಸಲಾಗಿದ್ದ ದ್ವಿತೀಯ ವರ್ಷದ ‘ಅರಿವಿನ ಜಾಥಾ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮುಗಳನಾಗಾಂವ ಕಟ್ಟಿಮನಿ ಸಂಸ್ಥಾನ ಮಠದ ಪೂಜ್ಯ ಅಭಿನವ ಸಿದ್ದಲಿಂಗ ಶಿವಾಚಾರ್ಯರು ಮಾತನಾಡಿ, ಅರಿವಿನ ಜಾಥಾ ಬಹಳ ವಿಶೇಷ ಹಾಗೂ ಅರ್ಥಪೂರ್ಣವಾಗಿದೆ. ಎಲ್ಲಾ ಜನಾಂಗವನ್ನು ಒಳಗೊಂಡ ಡಾ.ಅಂಬೇಡ್ಕರ್ ಜಯಂತಿ ಇದಾಗಿದ್ದು, ಸಂವಿಧಾನ, ಡಾ.ಬಾಬಾಸಾಹೇಬ್‍ರ ಆಶಯಗಳನ್ನು ಸಮಾಜಕ್ಕೆ ಮುಟ್ಟಿಸುವ ಕಾರ್ಯಮಾಡುತ್ತಿರುವುದು ಶ್ಲಾಘನೀಯ ಹಾಗೂ ಈ ಜಾಥಾ ಮಾದರಿಯಾಗಿದೆ ಎಂದರು.
ಜಾಥಾದಲ್ಲಿ ಪೂಜ್ಯ ಬಿಕ್ಕುಣಿ ಸುಮನ್ ಭಂತೇಜಿ, ಡಾ.ಬಿ.ಆರ್.ಅಂಬೇಡ್ಕರ್ ಇಂಟಿಗ್ರೇಟೆಡ್ ರಿಸರ್ಚ್ ಇನಸ್ಟಿಟ್ಯೂಟ್‍ನ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ, ಬಸವೇಶ್ವರ ಸಮಾಜ ಸೇವಾ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಪ್ರಮುಖರಾದ ಡಾ.ಪುಟ್ಟಮಣಿ ದೇವಿದಾಸ, ಜನಾಬ್ ಹುಸೇನಬಾಷಾ ಎಸ್.ಮುಜಾವರ್, ಪ್ರೊ.ರಮೇಶ ಯಾಳಗಿ, ನಂದಕುಮಾರ ತಳಕೇರಿ, ಎಸ್.ಬಿ.ಹರಿಕೃಷ್ಣ, ಕೈಲಾಸನಾಥ ದೀಕ್ಷಿತ್, ಡಾ.ಚಂದ್ರಶೇಖರ ದೊಡ್ಡಮನಿ, ಡಾ.ಸದಾನಂದ ಪಾಟೀಲ, ಎಂ.ಬಿ.ನಿಂಗಪ್ಪ, ಪ್ರಭುಲಿಂಗ ಮಹಾಗಾಂವಕರ್, ಆರ್.ಜಿ.ಶೆಟಗಾರ, ಶಿವಕುಮಾರ ಬಿದರಿ, ರಾಜಕುಮಾರ ಕೋರಿ, ರಜಾಕ್ ಪಟೇಲ್, ಗುರುನಾಥ ಪೂಜಾರಿ, ಸಿದ್ದರಾಮ ತಳವಾರ, ಮಲ್ಲಿಕಾರ್ಜುನ ಸಜ್ಜನಕರ್, ಈರಣ್ಣ ಹಡಪದ, ಮಹಾಂತೇಶ ಕುಡಿ, ಅರುಣ ಗಾಜರೆ, ಮನೋಹರ ಗಾಯಕವಾಡ, ಮಾಲಾಶ್ರೀ, ದೇವೇಂದ್ರಪ್ಪ ಗಣಮುಖಿ, ಶಿವಯೋಗೆಪ್ಪಾ ಎಸ್.ಬಿರಾದಾರ, ಸಾಯಬಣ್ಣ ಹೋಳ್ಕರ್, ಬಸವರಾಜ ಹೆಳವರ ಯಾಳಗಿ, ಪರಮೇಶ್ವರ ಬಿ.ದೇಸಾಯಿ, ಅಸ್ಲಾಂ ಶೇಖ್, ಸಿದ್ದಾರ್ಥ ಚಿಮ್ಮಾಇದಲಾಯಿ, ಸಂತೋಷ ಲುಂಬಿನಿ, ಹಮೀದ್ ಅಲಿ, ಗೌತಮ ಪಾಳಾ, ಅನಿಲ ಸರ್ದಾರ, ನಾಮದೇವ ರಾಠೋಡ, ಅನೀಲಕುಮಾರ ಎಂಟಮನಿ, ಸಿದ್ದರಾಮ ಹಂಚಿನಾಳ, ಜಯಶ್ರೀ ಎಸ್. ವಂಟಿ, ಸುಜಯ್ ಎಸ್.ವಂಟಿ, ಸಾಯಿಪ್ರಸಾದ ಎಸ್.ವಂಟಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಮಹಾಂತೇಶ ದೊಡ್ಡಮನಿ ಬುದ್ದವಂದನೆ ನಡೆಸಿಕೊಟ್ಟರು. ಜಾನಪದ ಕಲಾತಂಡಗಳಿಂದ ಜರುಗಿದ ಚಿಟ್ಟಹಲಗೆ, ಡೊಳ್ಳು, ಭಾಜಾ-ಭಜಂತ್ರಿ ಕಲಾ ಪ್ರದರ್ಶನ, ಲಂಬಾಣಿ ಮಹಿಳೆಯರ ನೃತ್ಯ ಜಾಥಾಕ್ಕೆ ಆಕರ್ಷಕ ಮೆರುಗು ತಂದವು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…